ಯುದ್ಧಕ್ಕೂ ಮೊದಲೇ ಸೋತ ಇಂಡಿಯಾ ಒಕ್ಕೂಟ : ಮಲ್ಕಾಪುರೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,13- ಇಂಡಿಯಾ ಒಕ್ಕೂಟವು ಚುನಾವಣೆ ಘೋಷಣೆಗೂ ಮುನ್ನವೇ ಬಿಕ್ಕಟ್ಟಾಗಿದೆ. ಇಂಡಿಯಾ ಒಕ್ಕೂಟ ಪ್ರಾರಂಭಕ್ಕೂ ಮೊದಲೇ ಬಿರುಕು ಬಿಟ್ಟು, ಶಿಥಿಲಗೊಂಡಿದೆ. ಈ ಮೂಲಕ ಇಂಡಿಯಾ ಒಕ್ಕೂಟವು ಯುದ್ಧಕ್ಕಿಂತಲೂ ಮೊದಲೇ ಸೋತಿದೆ ಎಂದು ಕೊಪ್ಪಳ ಲೋಕಸಭೆಯ ಬಿಜೆಪಿ ಪ್ರಭಾರಿ ರಘುನಾಥ ಮಲ್ಕಾಪುರೆ ಹೇಳಿದರು.
ಕಳೆದ 10 ವರ್ಷದ ಬಿಜೆಪಿ ಕೇಂದ್ರ ಸರ್ಕಾರ ದೇಶದ ಜನಮಾನಸದಲ್ಲಿ ಉಳಿಯುವುದರ ಜೊತೆಗೆ ಭಾರತವನ್ನು ಮತ್ತು ರಾಜಕಾರಣಿಯನ್ನು ವಿಶ್ವಮೆಚ್ಚುವ ರೀತಿಯಲ್ಲಿ ಆಡಳಿತ ನಡೆಸಲಾಗಿದೆ. ಜನರು ಮನ್ ಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರ ಮತ್ತು ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಎರಡನ್ನು ನೋಡಿದ್ದಾರೆ. ಬಿಜೆಪಿ ನೇತೃತ್ವದ ಎನ್.ಡಿ.ಎ ಎದುರಿಸಲು ಇಂಡಿಯಾ ಒಕ್ಕೂಟವನ್ನು ರಚನೆ ಮಾಡಿಕೊಂಡಿದ್ದಾರೆ. ಆದರೆ ಇನ್ನೂ ಚುನಾವಣೆ ಘೋಷಣೆಯಾಗುವ ಮುನ್ನವೇ ಬಿಕ್ಕಟ್ಟು ಎದುರಾಗಿದೆ. ತೃಣಮೂಲ ಕಾಂಗ್ರೆಸ್ ಸಡ್ಡು ಹೊಡೆದಿದೆ. ಪಂಜಾಬ್ ಮತ್ತು ದೆಹಲಿ ಒಂದು ಸ್ಥಾನ ಕೊಡುವುದಿಲ್ಲ ಎಂದು ಅಮ್ ಆದ್ಮಿ ಪಕ್ಷವು ಕಾಂಗ್ರೆಸ್ಸಿಗೆ ಸಡ್ಡು ಹೊಡೆದಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಇಂಡಿಯಾ ಒಕ್ಕೂಟ ಯುದ್ಧಕ್ಕೂ ಮೊದಲೇ ಸೋತಿದೆ ಎಂದರು.
ಕಾಂಗ್ರೆಸ್ ತಮ್ಮ ದ್ವಂದ್ವ ನೀತಿ, ಸ್ಪಷ್ಟ ರಾಜಕೀಯ ನಿಲುವಿಲ್ಲದ್ದಕ್ಕೆ ಸಮರ್ಥ ವಿರೋಧ ಪಕ್ಷದ ನಾಯಕರಿಲ್ಲದಂತಾಗಿದೆ. ಭ್ರಷ್ಟಾಚಾರದಿಂದ ದೇಶದ ಜನ ತಿರಸ್ಕರಿಸಿದ್ದಾರೆ. ಯುದ್ಧಕ್ಕಿಂತಲೂ ಮೊದಲೇ ಸೋತಿದ್ದಾರೆ. ಬಿಜೆಪಿ ಮತ್ತು ಎನ್.ಡಿ.ಎ ದಿನೇ ದಿನೇ ಬಲಿಷ್ಟವಾಗುತ್ತಿದೆ. ಜನರೂ ಒಪ್ಪಿಕೊಂಡಿದ್ದಾರೆ. ಸಂಗಣ್ಣ ಕರಡಿ ಜನಪರ ಕೆಲಸ ಮಾಡಿ, ಕೇಂದ್ರ ಸರ್ಕಾರದ ಯೋಜನೆಯನ್ನು ಜನರಿಗೆ ಮುಟ್ಟಿಸಿದ್ದಾರೆ. ಪಕ್ಷವು ಲೋಕಸಭೆ ಎದುರಿಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ನಿರ್ವಹಣಾ ಸಮಿತಿಯನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಚುನಾವಣಾ ಕಚೇರಿಯನ್ನು ಉದ್ಘಾಟಿಸಲಾಗಿದೆ ಎಂದರು.
ರಾಜಕಾರಣವನ್ನು ರಾಷ್ಟ್ರ ಕಾರ್ಯವೆಂದು ಪರಿಗಣಿಸಿ ಕೆಲಸ ಮಾಡುವ ಕಾರ್ಯಕರ್ತರು ನಾವು. ಚುನಾವಣಾ ನಿರ್ವಹಣಾ ಸಮಿತಿ ರಚಿಸಿಕೊಂಡಿದ್ದೇವೆ. ಬೂತಮಟ್ಟದಲ್ಲಿ ಅಧ್ಯಕ್ಷ, ಕಾರ್ಯದರ್ಶಿಯನ್ನು ನೇಮಿಸಿದ್ದು, ಹಳ್ಳಿಗಳ ಕಡೆ ನಮ್ಮ ರಾಜ್ಯದಲ್ಲಿ ೮ ಕ್ಲಸ್ಟರ್ ಮಾಡಿಕೊಂಡಿದ್ದೇವೆ. ಬೀದರ್, ಗುಲಬುರ್ಗಾ ಮತ್ತು ರಾಯಚೂರು, ಬಳ್ಳಾರಿ, ಕೊಪ್ಪಳ ಕಲ್ಯಾಣ ಕರ್ನಾಟಕದಲ್ಲಿ ೨ ಕ್ಟಸ್ಟರ್ ರಚಿಸಿಕೊಳ್ಳಲಾಗಿದೆ. ೩೭ ವಿಭಾಗಗಳನ್ನು ಮಾಡಿಕೊಂಡಿದ್ದೇವೆ. ಕಾಲ್ ಸೆಂಟರ್ ಆರಂಭವಾಗಿ ೩ ತಿಂಗಳಾಯಿತು ಎಂದರು.
ಕಳೆದ ಚುನಾವಣೆಯನ್ನು ೩೫ ಸಾವಿರ ಮತಹಳ ಅಂತರದಿಂದ ಗೆದ್ದಿದ್ದೇವೆ. ರಾಷ್ಟ್ರೀಯ ಪಕ್ಷ. ಸರಿಯಾದ ಸಮಯಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಸಂಸದ, ಶಾಸಕರಾಗಿ, ಸಂಸದರಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ಅಲ್ಲದೇ ವೈಯಕ್ತಿಕ ವರ್ಚಸ್ಸು ಕೂಡಾ ಇದೆ. ಸದ್ಯಕ್ಕೆ ಕ್ಷೇತ್ರ ಖಾಲಿ ಇಲ್ಲ. ಹಾಗಂತ ಯಾರೂ ಟಿಕೆಟ್ ಕೇಳಬಾರದು ಎಂದೇನು ಇಲ್ಲ. ಬಿಜೆಪಿ ಮತ್ತು ಮೋದಿಯವರ ಅಲೆ ಇದ್ದು, ಇದರಿಂದಾಗಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ಸೂಕ್ತ ಸಮಯದಲ್ಲಿ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ದೇಶಕ್ಕೆ ಬಿಜೆಪಿ ಮತ್ತು ಮೋದಿಯವರ ಅವಶ್ಯಕತೆ ಇದೆ. ಬಿಜೆಪಿ ಅಭ್ಯರ್ಥಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಆಸೆಗೆ ಬಿದ್ದು ತಪ್ಪು ಹೆಜ್ಜೆ ಇಟ್ಟಿದ್ದಾರೆ. ಆದರೆ ಈ ಬಾರಿ ಆ ತಪ್ಪನ್ನು ಮಾಡುವುದಿಲ್ಲ. ಏಕೆಂದರೆ ಗ್ಯಾರಂಟಿ ಯೋಜನೆಗಳಿಂದಾಗಿ ಸರ್ವಾಂಗೀಣ ಅಭಿವೃದ್ಧಿಯು ಕುಂಠಿತವಾಗಿದೆ. ಈ ಅವಧಿಯಲ್ಲಿ ಯಾವುದಾದರೂ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದರೇ, ಬಹುಮಾನ ನೀಡುತ್ತೇನೆ. ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ. ಇದರ ಫಲಿತಾಂಶ ಲೋಕಸಭೆ ಚುನಾವಣೆಯಲ್ಲಿ ತಿಳಿಯಲಿದೆ. ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ತತ್ವ-ಸಿದ್ಧಾಂತ ಒಪ್ಪಿ ಬಂದವರನ್ನು ಸ್ವಾಗತಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಸಂಚಾಲಕ ಗಿರೇಗೌಡ, ಸಹ ಸಂಚಾಲಕ ರಾಜೇಶ ಹಿರೇಮಠ, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಪ್ರತಾಪಗೌಡ ಪಾಟೀಲ್, ಕೆ.ಶರಣಪ್ಪ, ಮಂಜುಳಾ ಕರಡಿ, ಕೆ.ಕರಿಯಪ್ಪ ಇದ್ದರು.
