02Ylb03

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಪೂರಿ,ಅನ್ನ ಸಾಂಬರ ವಿತರಣೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 3- ಸಮೀಪದ ಮಂಗಳೂರು ಕ್ಲಸ್ಟರ್ ಮಟ್ಟದ ವ್ಯಾಪ್ತಿಗೆ ಬರುವ ಕವಳಕೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಪೂರಿ ಅನ್ನ ಸಂಬಾರ ವಿತರಣೆ ಮಾಡಲಾಯಿತು.

ಮಂಗಳೂರು ಸಿಆರ್‌ಪಿ ರವಿ ಡಿ.ಮಳಗಿ ಮಾತನಾಡಿ, ಸರಕಾರದಿಂದ ಅನುಷ್ಠಾನಗೊಂಡ ಯೋಜನೆಗಳನ್ನು ಮಕ್ಕಳಿಗೆ ಸರಿಯಾಗಿ ವಿತರಣೆ ಮಾಡಲಾಗಿದೆ. ಪ್ರತಿ ವಾರಕ್ಕೊಮ್ಮೆ ದಾನಿಗಳ ಮೂಲಕ ಮಡಿಕೆ ಕಾಳು ವಿತರಿಸಲಾಗುವುದು. ತಿಂಗಳಗೊಮ್ಮೆ ಪೂರಿ, ಗ್ರಾಮದ ನಾಗರಿಕರ ಮೂಲಕ ಸಿಹಿ ಹಂಚಿಕೆ ಮಾಡಲಾಗುವುದು. ಸರಕಾರಿ ಶಾಲೆಯಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ದೊರೆಯುವ ಯೋಜನೆಗಳನ್ನು ಪಡೆದುಕೊಳ್ಳಲು ಮುಂದಾಗಬೇಕಿದೆ.ಪ್ರತಿಯೊಬ್ಬ ಪಾಲಕರು ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ತಿಳಿಸಿದರು.

ಈ ವೇಳೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮುತ್ತಣ್ಣ ಕುಷ್ಟಗಿಶೆಟ್ಟರ್, ಶಿಕ್ಷಕರಾದ ಮರ್ದಾನಅಲಿ ಹೊಸಳ್ಳಿ, ಗ್ರಾಮ ಪಂಚಾಯಿತಿ ಸದಸ್ಯ ಶೇಖಪ್ಪ ದೊಡ್ಡಮನಿ, ಎಸ್ಡಿಎಂಸಿ ಅಧ್ಯಕ್ಷ ಲಕ್ಷö್ಮಣ್ ತಳವಾರ, ಉಪಾಧ್ಯಕ್ಷ ಚನ್ನಪ್ಪ ಹಿರೇಮನಿ, ಶಿಕ್ಷಣ ಪ್ರೇಮಿ ವಿರೇಶ ನೇರಗಲ್ ಹಾಗೂ ವಿದ್ಯಾರ್ಥಿಗಳು, ಶಾಲೆಯ ಆಡಳಿತ ಮಂಡಳಿದವರು ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!