ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನಜಾಗೃತಿ ಬೀದಿನಾಟಕ
ಕರುನಾಡ ಬೆ:ಳಗು ಸುದ್ದಿ
ವಿಜಯನಗರ,21- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗ್ರಾಮ ಸಂಪರ್ಕ ಯೋಜನೆಯಡಿ ಹೂವಿನಹಡಗಲಿ ತಾಲೂಕಿನ ಹ್ಯಾರಡ ಗ್ರಾಮದ ಜನನಿ ಪುಷ್ಪಕಲಾ ಯುವಕ ಸಂಘದ ಕಲಾ ತಂಡದವರು ಫೆ.20ರಂದು ಹೂವಿನಹಡಗಲಿ ತಾಲೂಕಿನ ತಿಪ್ಪಾಪುರ ಹಾಗೂ ದೇವಗೊಂಡನಹಳ್ಳಿ ಗ್ರಾಮಗಳಲ್ಲಿ ಬೀದಿನಾಟಕ ಪ್ರದರ್ಶಿಸಿ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿದರು.
ಜನನಿ ಪುಷ್ಪಕಲಾ ಯುವಕ ಸಂಘದ ಟಿ ಚಮನ್ ಸಾಹೇಬ್, ಎಂ ಮಂಜುನಾಥ್, ಎಸ್ ಕೃಷ್ಣಪ್ಪ್ಪ ಗೋವಿಂದ, ಹನುಮಯ್ಯ, ವಸಂತ ಕುಮಾರಿ, ಮನತ ಕೆ ಎಸ್, ರವಿಕುಮಾರ್, ಮಹಾಂತೇಶ ಸೇರಿದಂತೆ ಇನ್ನೀತರರು ಬೀದಿನಾಟಕ ಪ್ರದರ್ಶಿಸಿ, ಗ್ರಾಮದಲ್ಲಿ ಸಂಚರಿಸಿ, ತಮಟೆ ಭಾರಿಸಿ, ಹಾಡು ಹೇಳುವುದರ ಮೂಲಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಶುಚಿತ್ವ, ನೀರಿನ ಮಿತಬಳಕೆ ಹಾಗೂ ನಾನಾ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
