ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹೆಚ್ಚುವರಿ ಕೋಠಡಿ ಕಾಮಗಾರಿಗೆ ಶಾಸಕರಿಂದ ಶಂಕುಸ್ಥಾಪನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,9- ತಾಲೂಕು ಹಳೆಕೋಟೆ ಗ್ರಾಮದಲ್ಲಿ ಕೆಕೆಆರ್ಡಿಬಿ ಅನುದಾನದ ಯೋಜನೆ ಅಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೋಠಡಿ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಅಡಿಗಲ್ಲು ಹಾಕಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ವೀರೇಶ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸದಸ್ಯರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರಪ್ಪ ಮುಖಂಡರಾದ ಬಿ ಕೆ ರಘು ಮಹಾಂತಯ್ಯ ಸ್ವಾಮಿ ರುದ್ರಗೌಡ ಗಾಳೆಪ್ಪ ಕೆ ಶೇಖಣ್ಣ ವೀರೇಶ್ ಆಚಾರಿ ರಾಷ್ಟ್ರೀಯ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ ನಗರಸಭೆ ಸದಸ್ಯರಾದ ಬಿ ವೆಂಕಟೇಶ್ ಹೆಚ್ ಗಣೇಶ್ ಕೋಟಿ ರೆಡ್ಡಿ ಜಿಲ್ಲಾ ಪಂಚಾಯತ್ ಇಂಜಿನಿಯರ್ ರೇವಣಸಿದ್ದಪ್ಪ ಪಿಡಿಒ ಹಾಗೂ ಅನೇಕ ಗ್ರಾಮದ ಮುಖಂಡರು ಇದ್ದರು.
