-
ವಿಧಿಯಾಟಕ್ಕೆ ಬಲಿಯಾದ ಗ್ರಾ.ಪಂ ಸದಸ್ಯ.
ದೇಹ ನಾಲ್ಕು ಜನರ ಜೀವನಕ್ಕೆ ಆಸರೆ -
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 03- ತಾಲೂಕಿನ ಕಿನ್ನಾಳ ಗ್ರಾಮದ ಗ್ರಾ, ಪಂ ಸದಸ್ಯ ಮಲ್ಲಪ್ಪ ಉದ್ದಾರ( 36) ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಇಹಲೋಕ ತೇಜಿಸಿದ್ದಾನೆ.
ಘಟನೆ ವಿವರ; ಇತ್ತೀಚಿಗೆ ಡಿ.24 ರಂದು ಮೆದುಳು ನಿಷ್ಕ್ರೀಯಗೊಂಡಿದ್ದ ವೀರಾಪುರ ಗ್ರಾಮದ ಬಳಿ ರಸ್ತೆ ಅಪಘಾತದಲ್ಲಿ ತೀವ್ರಗಾಯಗೊಂಡಿದ್ದ.ಮೊದಲು ಜಿಲ್ಲಾ ಆಸ್ಪತ್ರೆ ನಂತರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಪ್ರಯೋಜನವಾಗಲಿಲ್ಲ.
ಮೆದುಳು ನಿಷ್ಕ್ರೀಯಗೊಂಡಿರುವುದನ್ನು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು.
ಅಂಗಾಂಗ ದಾನ ; ಅಪಘಾತದಲ್ಲಿ ಮೇದಳು ನಿಷ್ಕ್ರೀಯ ಗೊಂಡಿದ್ದರಿಂದ ಅವರ ಸಹೋದರರಾದ ಮಂಜುನಾಥ ಮತ್ತು ಶೇಖರಪ್ಪ ಅವರು ಕುಟುಂಬದವರೊಂದಿಗೆ ಮತ್ತು ಗ್ರಾಮದವರೊಂದಿಗೆ ಚರ್ಚೆ ಮಾಡಿ ಅಂಗಾಂಗ ದಾನ ಮಾಡುವ ನಿರ್ಧಾರ ಮಾಡಿದ್ದಾರೆ.
ಪರಿಣಾಮ ಮೆದುಳು ನಿಷ್ಕ್ರೀಯಗೊಂಡಿದ್ದ ಯುವಕನ ಕಿಡ್ನಿ, ಲೀವರ್, ಹೃದಯ ಸೇರಿ ಇನ್ನಿತರ ಅಂಗಾಂಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಈ ಯುವಕನ ದೇಹ ನಾಲ್ಕು ಜನರ ಜೀವನಕ್ಕೆ ಆಸರೆಯಾಗಿದೆ.
ಕಿನ್ನಾಳ ಗ್ರಾಮದ ಗ್ರಾಪಂ 6ನೇ ವಾರ್ಡ್ ಸದಸ್ಯರಾಗಿದ್ದ ಮಲ್ಲಪ್ಪ ಉದ್ದಾರ ಬದುಕಿದ್ದರೆ ಇನ್ನೊಂದುವರೆ ತಿಂಗಳಲ್ಲಿ ಮದುವೆಯಾಗುತ್ತಿದ್ದರು.ಈಗಾಗಲೇ ಮದುವೆಯ ನಿಶ್ಚಯವಾಗಿದ್ದು, ಇನ್ನೇನು ಮದುವೆ ದಿನಾಂಕ ನಿಗದಿ ಮಾಡಿ, ಮದುವೆ ಮಾಡುವ ಸಂಭ್ರಮದಲ್ಲಿ ಮನೆಯವರಿದ್ದರು. ವಿಧಿಯಾಟದಲ್ಲಿ ಮೆದುಳು ನಿಷ್ಕ್ರೀಯಗೊಂಡಿದ್ದರಿಂದ ಅಂಗಾಂಗ ದಾನ ಮಾಡಿದ್ದಾರೆ.
ಮೆರವಣಿಗೆ: ಕಿನ್ನಾಳ ಗ್ರಾಮದ ಯುವಕ ಅಪಘಾತದಲ್ಲಿ ಗಾಯಗೊಂಡು, ಮೆದುಳು ನಿಷ್ಕ್ರೀಯಗೊಂಡಿದ್ದರಿಂದ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ ಎನ್ನುವ ಬಗ್ಗೆ ಕೊಂಡಾಡಿದರಲ್ಲದೆ ಪಾರ್ಥಿವ ಶರೀರವನ್ನು ಗ್ರಾಮಸ್ಥರು ಮೆರವಣಿಗೆ ಮಾಡವ ಮೂಲಕ ಗೌರವ ಸಲ್ಲಿಸಿ ಮಾದರಿಯಾಗಿದ್ದಾರೆ.
ಬುಧವಾರ ಸಂಜೆ ಗ್ರಾಮಕ್ಕೆ ಮಲ್ಲಪ್ಪ ಉದ್ದಾರನ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಇಡೀ ಸಗ್ರಾಮಸ್ಥರು ಮೆರವಣಿಗೆ ನಡೆಸಿದರು. ಅಸಂಖ್ಯ ಸಂಖ್ಯೆಯಲ್ಲಿ ಜನರು ಜಮಾಯಿಸಿ, ಘೋಷಣೆ ಕೂಗುತ್ತಾ, ಸ್ಮಶಾನದವರೆಗೂ ಮೆರವಣಿಗೆ ಮಾಡಿದರು.


