WhatsApp Image 2024-06-03 at 1.23.08 PM

ಸಿರಿಗೇರಿಯಿಂದ ಬೆಂಗಳೂರಿಗೆ ಬಸ್ ಗ್ರಾಮಸ್ಥರ ಹರ್ಷ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 3- ತಾಲೂಕು ಸಿರಿಗೇರಿ ಗ್ರಾಮ ಪಂಚಾಯತ್ ಅತಿ ದೊಡ್ಡ ಹೊಂದಿರುವ ಭಾಗದಿಂದ ಇದುವರೆಗೂ ಬೆಂಗಳೂರಿಗೆ ಸಂಪರ್ಕಿಸುವ ಬಸ್ ವ್ಯವಸ್ಥೆ ಇದ್ದಿಲ್ಲ ಇದರಿಂದಾಗಿ ಅನೇಕ ಬಾರಿ ಮನವಿಗಳು ಮತ್ತು ಹೋರಾಟಗಳನ್ನು ಮಾಡಿದರು ನೇರ ಬಸ್ ಸೌಕರ್ಯ ಇರಲಿಲ್ಲ ಆದರೆ ಈಗ ಹೋರಾಟಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಪಂದಿಸಿದ ಸಿರುಗುಪ್ಪ ತಾಲೂಕು ಸಿರಿಗೇರಿಯಿಂದ ನೇರವಾಗಿ ಬೆಂಗಳೂರು ಮತ್ತು ಬೆಂಗಳೂರಿನಿಂದ ಸಿರಿಗೇರಿಗೆ ಬಸ್ ಸೌಲಭ್ಯ ಕಲ್ಪಿಸುವ ಮೂಲಕ ಗ್ರಾಮಸ್ಥರ ಬೇಡಿಕೆ ಈಡೇರಿಸಿದೆ.

ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಬೆಂಗಳೂರಿಗೆ ತೆರಳಲು ಆಗಮಿಸಿದ ಬಸ್ ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ಚಾಲಕ ಮತ್ತು ನಿರ್ವಾಹಕರಿಗೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮ ಪಟ್ಟರು ಈ ಸಂದರ್ಭದಲ್ಲಿ ಗ್ರಾಮಸ್ಥರಲ್ಲಿ ಹರ್ಷ ತುಂಬಿತ್ತು.

Leave a Reply

Your email address will not be published. Required fields are marked *

error: Content is protected !!