ಸಿರುಗುಪ್ಪ ಲೋಕಸಭೆ ಟಿಕೆಟ್ ಜೆಡಿಎಸ್ ಗೆ ನೀಡಲು ಮನವಿ : ಮೀನಳ್ಳಿ ಡಿ. ತಾಯಣ್ಣ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,7- ಲೋಕಸಭಾ ಕ್ಷೇತ್ರ ಅಥವಾ ಕೊಪ್ಪಳ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಕ್ಕೂ ಮೈತ್ರಿ ಧರ್ಮ ಪಾಲಿಸುತ್ತಿವೆ ಅಷ್ಟೇ ಆದರೆ ಜೆಡಿಎಸ್ ಗೆ ಲೋಕಸಭೆ ಟಿಕೆಟ್ ನೀಡಬೇಕು ಎಂದು ಬಳ್ಳಾರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೀನಳ್ಳಿ ಡಿ ತಾಯಣ್ಣ ಅವರು ಅಭಿಪ್ರಾಯ ಪಟ್ಟರು.
ಸಿರುಗುಪ್ಪ ನಗರದ ಅಭಯಾಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಸಿರುಗುಪ್ಪ ತಾಲೂಕು ಜನತಾದಳ ಜಾತ್ಯಾತೀತ ಪಕ್ಷದ ರಾಜ್ಯ ಯುವ ಕಾರ್ಯಾಧ್ಯಕ್ಷರು ಹಾಗೂ ಬಳ್ಳಾರಿ ಜಿಲ್ಲಾ ನೂತನ ಅಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷದಲ್ಲಿ ಕಲ್ಯಾಣ ಕರ್ನಾಟಕದ ಬಳ್ಳಾರಿ ಲೋಕಸಭಾ ಕ್ಷೇತ್ರ ಕೊಪ್ಪಳ ಲೋಕಸಭಾ ಕ್ಷೇತ್ರ ಯಾವುದಾದರೂ ಒಂದರಲ್ಲಿ ಟಿಕೆಟ್ ಜೆಡಿಎಸ್ ಗೆ ಬಿಟ್ಟುಕೊಡಲು ಪಕ್ಷದ ವರಿಷ್ಠರಾದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸಹಕಾರಣಗಳೊಂದಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಅವರು ಮಾತನಾಡುತ್ತಿದ್ದರು.
ಸಿರುಗುಪ್ಪ ವಿಧಾನಸಭೆ ಕ್ಷೇತ್ರದ ಜೆಡಿಎಸ್ ತಾಲೂಕು ಅಧ್ಯಕ್ಷ ಶಿವನಾರಾಯಣ ಅವರು ಸ್ವಾಗತ ಬಯಸಿದರು.
ಜೆಡಿಎಸ್ ನಗರ ಅಧ್ಯಕ್ಷರು ಬಾಷಾ ಮುಲ್ಲಾರ್ ಅವರು ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸು ವುದಕ್ಕೆ ಮೈತ್ರಿ ಧರ್ಮ ಪಾಲಿಸುತ್ತೇವೆ ಮುಂದಿನ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸಲು ಅನುಮಾನವಿಲ್ಲ ಎಂದರು.
ಜೆಡಿಎಸ್ ಜಿಲ್ಲಾ ಉಸ್ತುವಾರಿ ಎಲ್ಲನಗೌಡ ಅವರು ವರಿಷ್ಠರ ದೇಶದಂತೆ ನಾವು ಮೈತ್ರಿ ಧರ್ಮ ಪಾಲಿಸುತ್ತೇವೆ ಎಂದರು.
ಜೆಡಿಎಸ್ ಎಸ್ ಸಿ ಅಧ್ಯಕ್ಷರು ಎಸ್ ಪ್ರಸಾದ್, ಜೆಡಿಎಸ್ ಮಹಿಳಾ ಅಧ್ಯಕ್ಷೆ ಭವಾನಿ ಬೈರಾಪುರ, ಹನುಮಂತ ಗೌಡ ಬೈರಾಪುರ, ಬಸವನಗೌಡ ಇಬ್ರಾಹಿಂಪುರ್, ಚಿತಾನಂದ ಇಬ್ರಾಹಿಂಪುರ್, ವೀರೇಶಪ್ಪ, ಜೆಡಿಎಸ್ ಹಿರಿಯ ಮುಖಂಡ ಮುದುಕಪ್ಪ ಕೋರಿ ಮತ್ತಿತರರು ಉಪಸ್ಥಿತರಿದ್ದರು.
