ಬಗ್ಗೂರು : ಮೂಲ ಸೌಲಭ್ಯವನ್ನು ಒದಗಿಸುವಂತೆ ಒತ್ತಾಯಿಸಿ ಗ್ರಾಮಸ್ಥರಿಂ ರಸ್ತೆ ತಡೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,4- ತಾಲೂಕಿನ ಬಗ್ಗೂರು ಗ್ರಾಮದಲ್ಲಿ ವಿವಿಧ ಮೂಲ ಸೌಲಭ್ಯವನ್ನು ಒದಗಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು.
ಗ್ರಾಮಸ್ಥರಾದ ಹುಲುಗಪ್ಪ ಎರೆಪ್ಪ ಮಾರೆಪ್ಪ ಚಂದ್ರಶೇಖರಯ್ಯ ವೀರೇಶ ಪಂಪನಗೌಡ ಬಸವನಗೌಡ ಚಂದ್ರಶೇಖರ ಅವರು ನಮ್ಮ ಗ್ರಾಮದಲ್ಲಿ ಕಳೆದ ಅನೇಕ ವರ್ಷಗಳಿಂದ ಉತ್ತಮ ರಸ್ತೆಗಳಿಲ್ಲ ಕೆರೆ ಇದ್ದರೂ ಕುಡಿ ಯಲು ನೀರಿನ ಸೌಲಭ್ಯವಿಲ್ಲ ಚರಂಡಿ ನೀರು ಸರಾಗವಾಗಿ ಹರಿಯದೆ ನಿಂತಲ್ಲಿ ನಿಂತು ಗಬ್ಬು ನಾರುತಿದೆ ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಅಲ್ಲದೆ ಗ್ರಾಮದಲ್ಲಿ ಸ್ಮಶಾನ ವಿಲ್ಲದಿರುವುದರಿಂದ ಹಗರಿ ದಡದಲ್ಲಿ ಶವ ಸಂಸ್ಕಾರ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ ಪಂಚಾಯಿತಿ ಅಧಿಕಾರಿಗಳಿಗೆ ಅನೇಕ ಬಾರಿ ತಹ ಸೀಲ್ದಾರರಿಗೂ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯ ಪಡಿಸಿದರು.
