2

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ದರಾಗಿ : ಮಾಜಿ ಶಾಸಕ ಸೋಮಲಿಂಗಪ್ಪ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 11- ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋತಿರುವುದು ಪ್ರತಿಯೊಬ್ಬ ಕಾರ್ಯಕರ್ತರಿಗೆ ನೋವು ತಂದಿದೆ ಸೋಲಿನ ಕಾರಣವನ್ನು ಹುಡುಕಲಾಗಿದೆ ಬೂತ್ ಮಟ್ಟದಲ್ಲಿ ಹೆಚ್ಚಿನ ಹಿನ್ನಡೆಯಾಗಿದೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ಅವರು ಹೇಳಿದರು.

ನಗರದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಹಮ್ಮಿಕೊಂಡ ಬಸವರಾಜ್ ಕ್ಯಾವಟರ್ ಸೋಲಿನ ಹಿನ್ನೆಲೆಯಲ್ಲಿ ಆತ್ಮಾವಲೋಕನ ಸಭೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದ್ದು ನೋವು ತಂದಿದೆ ಆದರೂ ಕಾರ್ಯಕರ್ತರು ಎದೆಗೊಂದದೆ ಕೆಲಸ ಮಾಡಿದ್ದು ಮರೆಯುವಂತಿಲ್ಲ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ಕೊಟ್ಟರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ ಹೆಚ್ ಸುರೇಶ್ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.

ಬಿಜೆಪಿ ತಾಲೂಕ ಅಧ್ಯಕ್ಷ ಕೆ ಮಲ್ಲಿಕಾರ್ಜುನ ಸ್ವಾಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡ ಹುಲುಗಪ್ಪ ಮಾತನಾಡಿದರು ಜಿಲ್ಲಾ ಉಪಾಧ್ಯಕ್ಷ ಗಾಳಿ ಶಂಕ್ರಪ್ಪ ಜಿಲ್ಲಾ ರೈತ ಮಾಜಿ ಅಧ್ಯಕ್ಷ ಎಂಆರ್ ಬಸವನಗೌಡ ಜಿಲ್ಲಾ ಯುವ ಅಧ್ಯಕ್ಷ ಎಂಎಸ್ ಸಿದ್ದಪ್ಪ ನಾಯಕ ಕೊಪ್ಪಳ ಜಿಲ್ಲಾ ಎಸ್ ಸಿ ಅಧ್ಯಕ್ಷ ಗಣೇಶ್ ಜಿಲ್ಲಾ ಎಸ್ ಸಿ ಅಧ್ಯಕ್ಷ ಎಂ ವೀರೇಶ್ ಮುಖಂಡರಾದ ಹೆಚ್ ವೀರನಗೌಡ ಸಿದ್ದರಾಮಯ್ಯ ಗೌಡ ಸಿದ್ದಪ್ಪ ವಿಕ್ರಂ ಜೈನ್ ನರಸಿಂಹಮೂರ್ತಿ ಇದ್ದರು.

Leave a Reply

Your email address will not be published. Required fields are marked *

error: Content is protected !!