ಹಂಪಿ ಉತ್ಸವ: ಪುಸ್ತಕಗಳ ಮಳಿಗೆ ಕಾಯ್ದಿರಿಸಲು ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ) ಜ.11 : 2024ನೇ ಸಾಲಿನ ಹಂಪಿ ಉತ್ಸವ ಹಿನ್ನಲೆಯಲ್ಲಿ ವಿವಿಧ ಮಳಿಗೆಗಳನ್ನು ಸಿದ್ದಪಡಿಸಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರಕಾಶಕರಿಂದ ಮಳಿಗೆ ಕಾಯ್ದಿರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಉತ್ಸವದಲ್ಲಿ ಮಳಿಗೆಗಳು 10*10 ಅಡಿ ಅಳತೆಯಲ್ಲಿದ್ದು, 2 ಮೇಜುಗಳನ್ನು ಒದಗಿಸಲಾಗುವುದು. ಹೆಚ್ಚಿನ ಮೇಜುಗಳಿಗಾಗಿ ಮುಂಚಿತವಾಗಿ ಬೇಡಿಕೆ ಸಲ್ಲಿಸಬೇಕು. ಪ್ರಕಾಶಕರು ತಮ್ಮ ಹೆಸರನ್ನು ನೋಂದಾಯಿಸಲು ಅಧ್ಯಕ್ಷರು, ಹಂಪಿ ಉತ್ಸವ, ವಿಜಯನಗರ ಇವರ ಹೆಸರಿನಲ್ಲಿ ರೂ. 3000 ಮೊತ್ತದ ಡಿ.ಡಿ.ಯನ್ನು ಜನವರಿ 18 ರೊಳಗಾಗಿ ಪಾವತಿಸಿ ತಮ್ಮ ಹೆಸರನ್ನು ನೋಂದಾಯಿಸಬಹುದು.
ಕನ್ನಡ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಆರ್ಥಿಕ, ಸಾಮಾಜಿಕ, ವೈಜ್ಞಾನಿಕ, ಸಂಶೋಧನೆ, ಜನಪದ ಸಾಹಿತ್ಯ, ಪ್ರವಾಸ, ಹವ್ಯಾಸ ಮುಂತಾದ ಪ್ರಕಾರಗಳ ಪುಸ್ತಕಗಳನ್ನು ಪ್ರದರ್ಶನ ಮಾಡಬಹುದಾಗಿದೆ. ಯಾವುದೇ ಕಾರಣಕ್ಕೂ ಕೆಟ್ಟ ಅಭಿರುಚಿಯನ್ನು ಬೆಳೆಸುವ, ಜನರ ಮಧ್ಯೆ ವಿರಸ ಮೂಡಿಸುವ, ದೇಶದ ಐಕ್ಯತೆ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುವ ಹಾಗೂ ನಿಷೇಧಿತ ಪುಸ್ತಕಗಳನ್ನು ಪ್ರದರ್ಶಸಿ ಮಾರಾಟ ಮಾಡುವಂತಿಲ್ಲ.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾಣಿಗಾಗಿ ಬಳ್ಳಾರಿ/ವಿಜಯನಗರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಫಾಲಾಕ್ಷ ಟಿ. ಮೊ.ಸಂ: 8861128848, 8310969813 ಹಾಗೂ ಚಿತ್ತವಾಡಿಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ನೋಡಲ್ ಅಧಿಕಾರಿಗಳಾದ ನಾಗರಾಜ್ ಹವಾಲ್ದಾರ್ ಮೊ.ಸಂ: 8197123522 ಹಾಗೂ ವಿನೋದ ಮೊ.ಸಂ: 8123890903 ಗೆ ಸಂಪರ್ಕಿಸಬಹುದಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
