ರಂಜಾನ್ ಹಬ್ಬದ ಕೊನೆಯ ದಿನ ಸಾಮೂಹಿಕ ಪ್ರಾರ್ಥನೆ : ಅನ್ಯಧರ್ಮಿಯರಿಂದ ನೀರಿನ ವ್ಯವಸ್ಥೆ
ಕರುನಾಡಬೆಳಗು ಸುದ್ದಿ
ವಿಜಯನಗರ, 11- ಅಂಬೇಡ್ಕರ್ ವೃತ್ತದ ಬಳಿ ಇರುವ 1962ನೇ ಸಾಲಿನಲ್ಲಿ ನಿರ್ಮಾಣ ವಾಗಿರುವ ಹಜರತ್ ಸಯ್ಯದ್ ಗುಲಾಬಾ ಶಹ ವಲಿ ಯವರ ದರ್ಗಾದ , ಈದ್ಗಾ ಮೈದಾಣದಲ್ಲಿ ಪವಿತ್ರ ರಂಜಾನ್ (ಈದ್ ಉಲ್ ಫಿತರ್) ಹಬ್ಬವು ಸಡಗರ ಸಂಬ್ರಮದಿಂದ ಆಚರಣೆ ನಡೆಯಿತು.
ನಗರದ ವಿವಿದ ಈದ್ಗಾ ಮೈದಾನಗಳಾದ ಆರ್ ಟಿ ಒ ಆಫೀಸ್ ಈದ್ಗಾ ಮೈದಾನ ಹಾಗು ಬಸ್ ಡಿಪೋ ಈದ್ಗಾ ಮೈದಾನ, ಕಾರಿಗನೂರು ಈದ್ಗಾ ಮೈದಾನ, ಟಿ ಬಿ ಡ್ಯಾಂ ಈದ್ಗಾ ಮೈದಾನ್ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಧರ್ಮ ಗುರುಗಳಾದ ಹಾಫಿಜ್ ಅಬ್ದುಲ್ ಸಮದ್ ರವರು ನಮಾಜ್ ನೆರವೇರಿಸಿ ಕೊಟ್ಟರು. ನಂತರ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಎಚ್.ಎನ್. ಮಹಮ್ಮದ ಇಮಾಮ್ ನಿಯಾಜಿರವರು ಪ್ರಾರ್ಥನಾ ಸ್ಥಳದಲ್ಲಿ ಉಪಸ್ಥಿತರಿದ್ದ ಇತರೆ ಸಮಾಜದ ಮುಖಂಡರುಗಳಿಗೆ ಖರ್ಜುರು ಹಾಗು ಶರಬತ್ ಅನ್ನು ನೀಡಿ ಪರಸ್ಪರ ಆಲಿಂಗಿಸಿಕೊಳ್ಳುವ ಮೂಲಕ ಶುಭಾಶಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಹಬ್ಬವನ್ನು ಉದ್ದೇಶಿ ಮಾತಾನಾಡಿದ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ಅಧ್ಯಕ್ಷ. ಮಹಮ್ಮದ ಇಮಾಮ್ ನಿಯಾಜಿ 30ದಿನಗಳ ಉಪವಾಸವನ್ನು ಪೂರೈಸಿದಎಲ್ಲಾ ಮುಸ್ಲಿಂ ಬಾಂದವರು, ಇಂದಿನಿಂದ ಮುಂದಿನ ವರ್ಷದ ರಂಜಾನ್ ಹಬ್ಬದವರೆಗೂ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾ ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ಮಾಡಬಾರದು ಎಂದು ಪ್ರತೀಜ್ಞೆಯನ್ನು ಮಾಡುತ್ತಾ ಇಂದಿನ ರಂಜಾನ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆಯನ್ನು ಭಗವಂತನಿಗೆ ಸಲ್ಲಿಸಿ, ಕ್ಷೇತ್ರದ ಸಮಸ್ತ ಜನತೆ ಹಾಗೂ ದೇಶದ ಪ್ರತಿಯೊಬ್ಬರಿಗೂ ಸುಃಖ ಶಾಂತಿ, ನೆಮ್ಮದಿ ಸೌಹಾರ್ದತೆ, ನೀಡಿ ಪ್ರೀತಿ ಪ್ರೇಮ ವಾತ್ಸಲ್ಯದಿಂದ ಸಮೃದ್ದಿಗೊಂಡು ಉತ್ತಮ ಆರೋಗ್ಯ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ ಸಮಸ್ತ ನಾಡಿನ ಜನತೆಗೆ ರಂಜಾನ್ (ಈದ್ ಉಲ್ ಫಿತರ್) ಹಬ್ಬದ ಶುಭಕೋರಿದರು.
ಅಂಜುಮನ್ ಕಮಿಟಿಯಿಂದ ಅಭಿವೃದ್ದಿ ಕಾರ್ಯಕ್ರಮಗಳು ನೆಡೆಯುತ್ತಿವೆ, ಅಭಿವೃದ್ದಿ ಕೇವಲ ಕಮಿಟಿಯ ಪದಾಧಿಕಾರಿಗಳಿಂದ ಸಾಧ್ಯವಿಲ್ಲ ಅದಕ್ಕೆ ತಮ್ಮೆಲ್ಲರ ತನು ಮನ ಧನದ ಸಹಕಾರ ಅಗತ್ಯ ಇದೆ, ಎಂದು ಹೇಳಿ ಅಂಜುಮನ್ ಕಮಿಟಿಯ ಕಾರ್ಯಕ್ರಮಗಳ ವಿವರ ನೀಡಿದರು
ಉಪಾಧ್ಯಕ್ಷ ಎಮ್ ಫಿರೋಜ್ ಖಾನ್, ಕಾರ್ಯದರ್ಶಿ ಎಮ್.ಡಿ.ಅಬೂಬಕ್ಕರ್, ಖಾಜಾಂಚಿ ಜಿ ಅನ್ಸರ್ ಭಾಷ ,ಸಹಕಾರ್ಯದರ್ಶಿ ಡಾ.ಎಮ್.ಡಿ.ದುರ್ವೇಶ್ ಮೈನುದ್ದಿನ್, ಹಾಗು ಸದ್ಯಸರುಗಳಾದ ಕೋತ್ವಾಲ್ ಮೊಹಮ್ಮದ್ ಮೋಸಿನ್, ಅಡ್ವೊಕೇಟ್ ಸದ್ದಾಮ್ ಮತ್ತು ಎಲ್ .ಗುಲಾಮ್ ರಸೂಲ್, ಅಬ್ದುಲ್ ಖಾದರ್ ರಫಾಯಿ ಖದೀರ್ ಹಾಗೂ ಮುಸ್ಲಿಂ ಮುಖಂಡರುಗಳಾದ ಖದೀರ್. ಬಡಾವಲೀ. ವಾಹೀದ್ , ನಾಸೀರ್. ಖಾನ್ಸಾಬ್. ರಜಾಕ್. ಹಾಗೂ ಸಾವಿರಾರು ಮುಸ್ಲಿಂ ಭಾಂಧವರು ಹಾಗು ಇತರೆ ಸಮಾಜದ ಮುಖಂಡರುಗಳಾದ ಸಾಲಿ ಸಿದ್ದಯ್ಯ, ಆರ್ ಕೊಟ್ರೇಶ್, ರವಿಶಂಕರ್, ಪಿ, ವೆಂಕಟೇಶ್, ಬಂಡಿ ಸೀನಪ್ಪ, ಕಬ್ಬೇರ್ ಗಾಳೆಪ್ಪ, ಹಾನಗಲ್ ವೆಂಕೋಬಣ್ಣ, ಸತ್ಯ ನಾರಾಯಣ, ವಿಜಯ ಕುಮಾರ್, ತಳವಾರ್ ಕೇರಿ ಹನುಮಪ್ಪ, ವಾಸಪ್ಪ, ಬಂದಿ ನಾರಾಯಣ, ನೀಲಕಂಠ, ಕಿಚಡಿ ಶ್ರೀನಿವಾಸ, ವಿಜಯ ಕುಮಾರ್, ಉಪಸ್ಥಿತರಿದ್ದರು.
ಇದ್ಗಾ ಕಡೆಗೆ ಹೋಗುವ ಬಹುತೇಕ ರಸ್ತೆಗಳು ಪೋಲೀಸ್ ಬ್ಯಾರಿಕೇಡಗಳಿಂದಾಗಿ ವಾಹನ ಗಳಿಗೆ ಬಂದ್ ಮಾಡಲ್ಪಟ್ಟಿದ್ದವು. ಇದರಿಂದಾಗಿ ಪ್ರಾರ್ಥನೆ ಮಾಡುವವರಿಗೆ ಯಾವುದೇ ಅಡಚಣೆ ಉಂಟಾಗಿಲ್ಲ.ಬಿಸಿಲಿನ ಬೇಗೆಯ ನಿಮಿತ್ತ ಪ್ರಾರ್ಥನೆಗೆ ಹೊರಡುವವರಿಗೆ ದಾರಿಯಲ್ಲಿ ತಂಪಾದ ಪಾನೀಯ ವ್ಯವಸ್ಥೆಯನ್ನು ಅನ್ಯಧರ್ಮಿಯರು ಕಲ್ಪಿಸಿದ್ದು ಕಂಡುಬಂದಿತು.

