2c136fae-be38-4577-97e1-318669006cc9

ಹಿರೇಸಿಂದೋಗಿ : ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,  25- ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರೇಸಿಂದೋಗಿಯ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜಿನಲ್ಲಿ ಖಾಲಿ ಇರುವ ಆಂಗ್ಲಭಾಷಾ ವಿಷಯದ ಬೋಧನೆಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅಭ್ಯರ್ಥಿಗಳು ಎಂ.ಎ.ಬಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಯನ್ನು ವಿದ್ಯಾರ್ಥಿಗಳು ಹಾಕುವ ಮತಗಳಿಂದ ಆಯ್ಕೆ ಮಾಡಲಾಗುವುದು (ಮಾದರಿ ಪಾಠ ಬೋಧನೆ ಆಧಾರದ ಮೇಲೆ). ನೇರವಾಗಿ ವಸತಿ ಕಾಲೇಜಿನಲ್ಲಿ ಅರ್ಜಿ ಪಡೆದು ಸಂಬAಧಿಸಿದ ವಿದ್ಯಾರ್ಹತೆಯ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗೆ ಕವಶಿಸ ಸಂಘ ಬೆಂಗಳೂರು ರವರು ನಿಗದಿಪಡಿಸಿರುವ ವೇತನ ನೀಡಲಾಗುವುದು.

ಅರ್ಜಿ ಸಲ್ಲಿಸಲು ಜುಲೈ 02 ಕೊನೆಯ ದಿನವಾಗಿದೆ. ಜುಲೈ 03 ರಂದು ಮಾದರಿ ಪಾಠ ಬೋಧನಾ ಪ್ರಕ್ರಿಯೆ ನಡೆಸಲಾಗುವುದು. ಮಾದರಿ ಪಾಠ ಬೋಧನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಟಿಎ ಮತ್ತು ಡಿಎ ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಶರಣಗೌಡ, ಪ್ರಾಂಶುಪಾಲರು, ಮೊದೇಪಪೂವವಿಕಾ ಹಿರೇಸಿಂದೋಗಿ:7411999371, ಪರಶುರಾಮ ಬಿ ದ್ವಿ.ದ.ಸಹಾಯಕ: 9019531301 ಇವರನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!