ಹುವಿನಾಳ್ : ಇನ್ನರ್ ವಿಲ್ಹ್ ಕ್ಲಬ್ ನಿಂದ ಪರಿಸರ ದಿನ ಆಚರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 3- ಇನ್ನರ್ ವಿಲ್ಹ್ ಕ್ಲಬ ಕೊಪ್ಪಳರವರು ಕೊಪ್ಪಳ ತಾಲೂಕಿನ ಹುವಿನಾಳ್ ಗ್ರಾಮದಲ್ಲಿ ಸಸಿ ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ಮೂಲಕ ವಿಧ್ಯಾರ್ಥಿಗಳಲ್ಲಿ, ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯಯರಾದ ಶ್ರೀ ವೀರೇಶ ಸರ್ ಹಾಗೂ ಶಾಲಾ ಸಿಬ್ಬಂದಿ , ಎಸ್.ಡಿ.ಎಮ್ ಸಿ ಸದಸ್ಯರು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಹಾಗೂ IWC ಹಿರಿಯರಾದ ಶ್ರೀಮತಿ ಡಾ. ರಾಧಾ ಕುಲಕರ್ಣಿ, IWC ಕ್ಲಬಿನ ಅಧ್ಯಕ್ಷರಾದ ಶ್ರೀಮತಿ ಉಮಾ ತಂಬ್ರಳ್ಳಿ, ಉಪಾಧ್ಯಕ್ಷರಾದ ಮಧು ಶೆಟ್ಟರ, ಕಾರ್ಯದರ್ಶಿ ಮಿನಾಕ್ಷಿ ಸಿ.ಬಿ, ಖಜಾಂಚಿ ಆಶಾ ಗೌಡರ, ಐಎಸ್ಓ ಮಧು ನಿಲೋಗಲ್, ಎಡಿಟರ್ ನಾಗವೇಣಿ ಗರೂರ ಹಾಗೂ ಇ.ಸಿ ಸದಸ್ಯರಾದ ಸುಜಾತ ಪಟ್ಟಣಶೆಟ್ಟಿ, ನೀತಾ ತಂಬ್ರಳ್ಳಿ ಮತ್ತು ಪದ್ಮ ಜೈನ್ ಹಾಗೂ ಎಲ್ಲಾ , IWC ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
