12Ylb02

ಅಂಗನವಾಡಿ ಮಕ್ಕಳ ಬೀಳ್ಕೂಡುಗೆ ಸಮಾರಂಭ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 12- ತಾಲೂಕಿನ ಗಡಿ ಭಾಗದವೆಂದು ಹೆಸರಾದ ಯಡ್ಡೋಣಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಬೀಳ್ಕೂಡುಗೆ ಹಾಗೂ ಪ್ರವೇಶೋತ್ಸವ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮ ನಡೆಯಿತು.

ಕಾಂಗ್ರೆಸ್ ಯುವ ಧುರೀಣ ಆದೇಶ ಬಿ.ರೊಟ್ಟಿ ಮಾತನಾಡಿ, ಗ್ರಾಮದ ಎರಡು ಅಂಗನವಾಡಿ ಕೇಂದ್ರಗಳಲ್ಲಿ ಅಭ್ಯಾಸ ಮಾಡುತ್ತಿದ್ದ ಮಕ್ಕಳನ್ನು ಪರಸ್ಪರವಾಗಿ ಬೀಳ್ಕೂಡುಗೆ ಸಮಾರಂಭ ಬಹಳ ಅದ್ಧೂರಿಯಾಗಿ ನಡೆಸಲಾಗಿದೆ.

ಅಂಗನವಾಡಿಯಿಂದ ಸರಕಾರಿ ಶಾಲೆಗೆ ಪ್ರವೇಶ ಪಡೆಯುತ್ತಿರುವ ಹಿನ್ನೆಲೆ ಚಿಕ್ಕ ವಯಸ್ಸಿನಲ್ಲಿ ಇಂತಹ ಕಾರ್ಯಕ್ರಮವನ್ನು ಏರ್ಪಡಿಸುವುದು ಒಳ್ಳೆಯ ಬೆಳವಣಿಗೆ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಹೆಚ್ಚು ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ. ಸರಕಾರದಿಂದ ದೊರೆಯುವ ಸೌಲಭ್ಯವನ್ನು ಸಕಾಲಕ್ಕೆ ಪಡೆದುಕೊಳ್ಳಬೇಕು.ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಈ ವೇಳೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕ್ರಮ್ಮ ಹನಮಪ್ಪ ಬಿಜಕಲ್, ಅನುಸೂಯಾ ಬಸವರಾಜ ಹುಗ್ಗಿ, ಶರಣಪ್ಪ ಗುಡದೂರ, ಜಯಶ್ರೀ ಅಮರಪ್ಪ ವಂದಾಲಿ, ಹಿರಿಯ ಮುಖಂಡ ಮರಿಯಪ್ಪ ಹುಗ್ಗಿ ದಳಪತಿ, ಅಂಗನವಾಡಿ ಮೇಲ್ವಿಚಾರಕಿ ಗಿರಿಜಮ್ಮ ಕಡಿವಾಲ, ಕಾರ್ಯಕರ್ತೆಯರಾದ ಹನುಮಕ್ಕ ಶಿವಪ್ಪ ಗುನ್ನಾಳ, ಪದ್ಮಾ ಬಾಲಪ್ಪ ವಂಕಲಕುAಟಿ, ಸಹಾಯಕಿಯರಾದ ಶರಣಮ್ಮ ಭೀಮಪ್ಪ ಗೊಬ್ಬಿ, ಬಾಲಮ್ಮ ಗೋವಿಂದಪ್ಪ ತಳವಾರ, ಆಶಾ ಕಾರ್ಯಕರ್ತೆಯರಾದ ಕಮಲಾಕ್ಷಿ ಕುಮಾರಸ್ವಾಮಿ ಹಿರೇಮಠ, ರೇಣುಕಾ ಶಂಕ್ರಪ್ಪ ಬಡಿಗೇರ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸುಖಮುನಿಪ್ಪ, ಗ್ರಾಮದ ಮುಖಂಡರು ಇನ್ನಿತರರ ಇದ್ದರು.

Leave a Reply

Your email address will not be published. Required fields are marked *

error: Content is protected !!