ಅಂಗನವಾಡಿ ಮಕ್ಕಳ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ಕೊಪ್ಪಳ ನಗರದ ಗೌರಿ ಅಂಗಳ, ತೋಟದ ಬಾವಿ ಬ್ರಹ್ಮನವಾಡಿ ಅಂಗನವಾಡಿ ಕೇಂದ್ರದಲ್ಲಿ ಜುಲೈ 10 ರಂದು ಮಕ್ಕಳಿಗೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ತಾಯಂದಿಯರಿಗೆ, ಪೋಷಕರಿಗೆ ಶಾಲಾಪೂರ್ವ ಶಿಕ್ಷಣದ ಮಹತ್ವ ಕುರಿತು, ಮಗುವನ್ನು ಶಾಲೆಗೆ ಪ್ರತಿದಿನ ಕಳಿಸುವುದರ ಕುರಿತು ಹಾಗೂ ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ತಿಳಿಸಲಾಯಿತು. ಬಳಿಕ ಇಲಾಖೆಯಿಂದ ವಾರ್ಡಿನ ಸದಸ್ಯರಿಗೆ ಅಭಿನಂದನಾ ಪತ್ರ ಕೊಟ್ಟು ಗೌರವಿಸಲಾಯಿತು. ಮಕ್ಕಳಿಗೆ ಸನಗರಸಭೆಯ ವಾರ್ಡಿನ ಸದಸ್ಯರು ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ನಿರೂಪಣಾಧಿಕಾರಿಗಳಾದ ಗಂಗಪ್ಪ, ಮಹಿಳಾ ಅಭಿವೃದ್ಧಿ ಅಧಿಕಾರಿಗಳಾದ ಅನ್ನಪೂರ್ಣ, ಶಾಲಾ ಶಿಕ್ಷಕಿಯರಾದ ರೇಣುಕಾ, ಕಲಿಕಾ ಟಾಟಾ ಟ್ರಸ್ಟ್ನ ಜಿಲ್ಲಾ ವ್ಯವಸ್ಥಾಪಕರಾದ ಅಶೋಕ, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಸಿದ್ದಪ್ಪ ಕುರಿ, ವಲಯ ಹಿರಿಯ ಮೇಲ್ವಿಚಾರಕಿಯರಾದ ಭುವನೇಶ್ವರಿ ಸೇರಿದಂತೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಕ್ಕಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
