ಅಂಬೇಡ್ಕರ್ ಜಯಂತಿ ಆಚರಣೆ ನಿರ್ಲಕ್ಷ್ಯ ಅಮಾನತ್ತಿಗೆ ಎಸ್ಎಫ್ಐ ಆಗ್ರಹ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 16- ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆಯನ್ನು ದಿನಾಂಕ ಕಡ್ಡಾಯವಾಗಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಚರಣೆ ಮಾಡಬೇಕೆಂದು ಶಾಲಾ ಶಿಕ್ಷಣ ಆಯುಕ್ತರು ಆದೇಶ ಹೋರಡಿಸಿದ್ದರು.
ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಕನಕಗಿರಿ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಡಿನಾಳ ಗ್ರಾಮದಲ್ಲಿ ನಿನ್ನೆ ಶಾಲೆಗೆ ಮುಖ್ಯೋಪಾಧ್ಯಾಯರು ಭಾಗವಹಿಸದೆ. ಅನಧಿಕೃತವಾಗಿ ಘೈರು ಹಾಜರಾಗಿ ಉದ್ದೇಶಪೂರ್ವಕವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಣೆ ಮಾಡದೆ ರಾಷ್ಟ್ರ ನಾಯಕರಿಗೆ ಅವಮಾನ ಮಾಡಿರುವುದನ್ನು ಎಸ್.ಎಫ್.ಐ ಸಂಘಟನೆ ಖಂಡಿಸಿ ಶಿಕ್ಷಕರ ಅಮಾನತ್ತಿಗೆ ಮನವಿ ಮೂಲಕ ಆಗ್ರಹಿಸಿದೆ.
ಹಾವೇರಿ ಜಿಲ್ಲೆಯಲ್ಲಿ ಡಾ. ಬಿಆರ್ ಅಂಬೇಡ್ಕರ್ ಪುತ್ತಳಿಯನ್ನು ಸ್ವಚ್ಛತೆ ಮಾಡದೆ ಇರುವುದಕ್ಕೆ ಆಚರಣೆಯಲ್ಲಿ ನಿರ್ಲಕ್ಷ ತೋರಿದ್ದಕ್ಕಾಗಿ ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತರನ್ನು ಅಮಾನತ್ತು ಮಾಡಿರುತ್ತಾರೆ.
ಗೋಡಿನಾಳ ಶಾಲೆಯಲ್ಲಿ ನಡೆದಿರುವ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ನಿರ್ಲಕ್ಷ ತೋರಿದ ಶಾಲೆಯ ಮುಖ್ಯೋಪಾಧ್ಯಾಯರನ್ನು ತಕ್ಷಣ ಅಮಾನತ್ತು ಮಾಡಬೇಕು ಇಲ್ಲವಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂದೆ ಧರಣಿ ಪ್ರತಿಭಟನೆ ಮಾಡಲಾಗುವುದು.
ಈ ಸಂದರ್ಭದಲ್ಲಿ ರಾಜ್ಯದ್ಯಕ್ಷರಾದ ಅಂಬರೀಶ್ ಕಡಗದ. ತಾಲೂಕ ಅಧ್ಯಕ್ಷ ಗ್ಯಾನೇಶ್. ಮುಖಂಡರಾದ ರಮೇಶ. ಮಂಜುನಾಥ್. ನೂರು ಹುಸೇನ್ ಉಪಸ್ಥೀತರಿದ್ದರು.
