
ಅಕ್ರಮ ಸಾಗಾಣಿಕೆ ಪಡಿತರ ಅಕ್ಕಿ ಪೊಲೀಸರಿಂದ ವಶ ಪ್ರಕರಣ ದಾಖಲು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 27- ವಿವಿಧ ಯೋಜನೆಗಳ ಅಡಿಯಲ್ಲಿ ಬಡ ಕುಟುಂಬಗಳಿಗೆ ಉಚಿತ ವಿತರಣೆಯಾಗುವ ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆ ಮಾಡುತ್ತಿದ್ದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲಾ ಆಲೂರು ತಾಲೂಕು ಹೊಳಗುಂದ ಗ್ರಾಮದ ಕಡೆಯಿಂದ ಸಿರುಗುಪ್ಪ ಕಡೆಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆ ಮಾಡಿಕೊಂಡು ಆದೋನಿ ರಸ್ತೆಯ ಸಿರುಗುಪ್ಪ ಪಟ್ಟಣದ ಕಡೆ ಟಾಟಾ ಕಂಪನಿಯ ಲಗೇಜ್ ಆಟೋ ಬುಧವಾರ ಬೆಳಗಿನ ಜಾವ ಸಿರುಗುಪ್ಪ ತಾಲೂಕು ಆಹಾರ ನಿರೀಕ್ಷಕ ಮಹಾ ರುದ್ರಗೌಡ ಇವರಿಗೆ ಬಂದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪಡಿತರ ಅಕ್ಕಿ ಸಾಗಾಣಿಕೆಯ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸದರಿ ಅಕ್ಕಿಯು ಸರ್ಕಾರದ ಉಚಿತವಾಗಿ ವಿತರಣೆಯಾಗುವ ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆ ಮಾಡುತ್ತಿದ್ದು ಸದರಿ ಕೃತ್ಯದಲ್ಲಿ ಭಾಗಿಯಾಗಿರುವ ವರ ಕರ್ನಾಟಕ ಅಗತ್ಯ ವಸ್ತುಗಳ ನಿಯಂತ್ರಣ ಆದೇಶದ ಅಡಿಯಲ್ಲಿ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿ ತನಿಖೆ ಕೈ ಗೊಂಡಿರುವುದಾಗಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಿಮ್ಮಣ್ಣನಾಯಕ ತಿಳಿಸಿದ್ದಾರೆ.