೪-೧

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

ಅನ್ನ ಭಾಗ್ಯದ ಅಕ್ಕಿಗೆ ಕನ್ನ ಸಮಗ್ರ ತನಿಖೆಗೆ ಆಗ್ರಹ

 ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೦೪– ಗಂಗಾವತಿ ನಗರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ ವಿದೇಶಕ್ಕೆ ಮತ್ತು ಹೊರ ರಾಜ್ಯಗಳಿಗೆ ಕಳುಹಿಸುವ ಮೂಲಕ ಅನ್ನ ಭಾಗ್ಯದ ಅಕ್ಕಿಗೆ ಕನ್ನ ಹಾಕುತ್ತಿರುವ ವಾಣಿಜ್ಯೋದ್ಯಮಿಗಳು ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು.

  ಗುರುವಾರ ಪ್ರತಿಭಟನೆಮಾಡಿ ಮನವಿ ಸಲ್ಲಿಸಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡವರು ಹಸಿವಿನಂದ ಇರಬಾರದು ಎಂದು ಪಡಿತರ ವ್ಯವಸ್ಥೆಯ ಮೂಲಕ ಅಕ್ಕಿಯನ್ನು ಪೂರೈಕೆ ಮಾಡುತ್ತಿದ್ದು, ಇದನ್ನು ಸರ್ಕಾರದ ಅಧಿಕಾರಿಗಳು ಮತ್ತು ವಾಣಿಜ್ಯೋದ್ಯಮಿಗಳು ಸೇರಿಕೊಂಡು ಪಡಿತರ ಅಕ್ಕಿಯನ್ನು ಕನ್ನ ಹಾಕುವ ಕೆಲಸ ಮಾಡುತ್ತಿದ್ದಾರೆ.

    ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿನ ಸರ್ಕಾರದ ಗೋದಾಮಿನಲ್ಲಿ ಉಮಾ ಪಾಶ್ವರ ರೈಸ್ ಮಿಲ್ ಹೆಸರಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿ ಸದರಿ ಪಡಿತರ ಅಕ್ಕಿಯನ್ನು ಹೊರದೇಶಕ್ಕೆ ಸಾಗಾಣಿಕೆ ಮಾಡುವ ಹುನ್ನಾರ ನಡೆದಿರುತ್ತದೆ.

      ಇದೆ ರೀತಿಯಾಗಿ ಅಕ್ರಮ ದಾಸ್ತಾನ ಮಾಡಿದವರ ಮೇಲೆ ಯಾವುದೆ ಕ್ರಮ ಕೈಗೊಳ್ಳದೆ ಕೇವಲ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದು ನೋಡಿದರೆ ಇದರಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಪ್ರಭಾವಿ ವಾಣಿಜ್ಯೋದ್ಯಮಿಗಳು ಕೂಡ ಶಾಮೀಲಾಗಿರುವುದು ಕಂಡು ಬರುತ್ತದೆ ಎಂದು ರೋಪಿಸಿದ್ದಾರೆ.

      ಜಿಲ್ಲಾಧಿಕಾರಿಗಳು ಸಮಗ್ರವಾಗಿ ತನಿಖೆ ಮಾಡಿ, ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನ ಮಾಡಿರುವ ವಾಣಿಜ್ಯೋದ್ಯಮಿಗಳನ್ನು ಪತ್ತೆ ಹಚ್ಚಿ ವಾಣಿಜ್ಯೋದ್ಯಮಿಗಳ ಮೇಲೆ ಮತ್ತು ಇದಕ್ಕೆ ಸಹಾಯ ಸಹಕಾರ ನೀಡಿದ ಅಧಿಕಾರಿಗೆ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡುತ್ತೇವೆ.

ಸಾರ್ವಜನಿಕ ವಿತರಣೆಯ ರೇಷನ್ ಮೂಲಕ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಪಡಿತರ ಅಕ್ಕಿಯನ್ನು ಪೂರೈಕೆ ಮಾಡುವುದರ ಮೂಲಕ ಅಗತ್ಯ 14 ವಸ್ತುಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ಪಡಿತರದದಾರರಿಗೆ ವಿತರಿಸಬೇಕೆಂದು ತಮ್ಮಲ್ಲಿ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪ್ರತಿಭಟನೆ ನೇತೃತ್ವವನ್ನು ಜಿಲ್ಲಾ ಕಾರ್ಯದರ್ಶಿ ಸುಂಕಪ್ಪ ಗದಗ್. ಹುಸೇನಪ್ಪ ಕೆ. ಹನುಮಂತ ಸಿಡ್ಲ ,ದುರಗಮ್ಮ ಸಿಂಗನಾಳ.ನಾಗಮ್ಮ ಸಿಂಗನಾಳ ರಾಮಣ್ಣ ದೊಡ್ಡಮನಿ,ಶರಣಮ್ಮ ಗದಗಿನಮನಿ, ಬಸಮ್ಮ ಗದಗಿನ ಮನಿ, ಹನುಮಂತ ಪಡಚಿಂತಿ, ಪಕೀರಮ್ಮ ಮಿರಗನತಂಡಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!