WhatsApp Image 2024-06-07 at 5.55.31 PM

ಅದ್ದೂರಿಯಿಂದ ರೈತ ಸಂಘದ ಅಧ್ಯಕ್ಷ ಕೃಷ್ಣಪ್ಪನ 55ನೇ ಹುಟ್ಟುಹಬ್ಬ ಆಚರಣೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 7- ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಸಂಗನಕಲ್ಲು ಕೃಷ್ಣಪ್ಪ ಅವರ, ಹುಟ್ಟುಹಬ್ಬ ದಿನೋತ್ಸವವನ್ನು ಇಂದು ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರೈತ ಸಂಘದ ಸದಸ್ಯರು ಮತ್ತು ಕೃಷ್ಣಪ್ಪ ಅವರ ಅಭಿಮಾನಿಗಳು ಮಿತ್ರರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ರಾಯಚೂರು ಸಂಘದ ಪದಾಧಿಕಾರಿಗಳಾದ ಬೇವಿನ ಮರ ಏರಿಸ್ವಾಮಿ ಮಾತನಾಡುತ್ತಾ, ಸಂಗನಕಲ್ಲು ಕೃಷ್ಣಪ್ಪ ಅವರು ಜಿಲ್ಲಾ ಅಧ್ಯಕ್ಷರಾದಾಗ್ಗಿನಿಂದ ಅ ರೈತರ ಸಮಸ್ಯೆಗಳು ಪರಿಷ್ಕರಿಸುವ ಜೊತೆಗೆ, ಸರ್ಕಾರ ಅನ್ನದಾತರಗಾಗಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವುದರಲ್ಲಿ ತಮ್ಮದೇ ಆದ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಇವರಿಗೆ ಭಗವಂತ ಮತ್ತೆಷ್ಟು ಆಯಸ್ಸು ಆರೋಗ್ಯವನ್ನು ನೀಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಗಂಗಾ ದಡೇಕರ್, ಮತ್ತು ರೈತ ಸಂಘದ ಪದಾಧಿಕಾರಿಗಳಾದ, ಭಾಷಾ, ಪುನೀತ್, ಭೀಮ, ಕೊಳಗಲ್ಲು ತಿಮ್ಮಪ್ಪ, ನಾಗರೆಡ್ಡಿ, ಮಾರಣ್ಣ, ಎರಿಸ್ವಾಮಿಗಳ ಜತೆಗೆ ಹಲವಾರು ಮಂದಿ ರೈತರು, ಸಂಗನಕಲ್ಲು ಕೃಷ್ಣಪ್ಪ ಅವರ ಅಭಿಮಾನಿಗಳು ಮಿತ್ರರು, ಕೃಷ್ಣಪ್ಪ ಅವರಿಗೆ ಹೂ ಮಾಲೆ ಹಾಕಿ ಸಿಹಿಯನ್ನು ತಿನಿಸಿ ಅಭಿನಂದಿಸಿದರು.

Leave a Reply

Your email address will not be published. Required fields are marked *

error: Content is protected !!