aacaf190-666b-4301-bfef-11bd8b606863

ಅನಧಿಕೃತ ಚರ್ಚಗಳನ್ನು ತೆರವುಗೊಳಿಸಲು ಬುಲ್ಡೋಝರ್

ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ,೧೯- ರಾಜ್ಯದಲ್ಲಿ ಇರುವ ೩೬೦೦ ತಾಂಡಾಗಳಲ್ಲಿ ಅರ್ಧಕ್ಕೂ ಹೆಚ್ಚು ತಾಂಡಾಗಳಲ್ಲಿ ಮತಾಂತರ ನಡೆಯುತ್ತಿದ್ದು, ೧೫೦೦ ಅನಧಿಕೃತ ಚರ್ಚಗಳು ಮತಾಂತರದಲ್ಲಿ ತೊಡಗಿದ್ದು ರಾಜ್ಯಸರ್ಕಾರ ಅವುಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಶ್ರೀರಾಮ ಸೇನೆ ಹಿಂದು ಯುವಕರ ತಂಡದೊಂದಿಗೆ ಅನಧಿಕೃತ ಚರ್ಚಗಳನ್ನು ತೆರವುಗೊಳಿಸಲು ಬುಲ್ಡೋಝರ್ ಹಚ್ಚುತ್ತೆವೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್ ಎಚ್ಚರಿಸಿದರು.
ಕೊಪ್ಪಳದ ಕೆ, ಎಸ್‌ ಆಸ್ಪತ್ರೆಯಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾನೂನನ್ನು ಕಟ್ಟು ನಿಟ್ಟಿನಿಂದ ಜಾರಿಗೊಳಿಸಬೇಕು. ರಾಜ್ಯದಲ್ಲಿ ಇರುವ ೩೬೦೦ ಲಂಬಾಣಿ ತಾಂಡಾಗಳಲ್ಲಿ ೧೫೦೦ತಾಂಡಾ ಗಳನ್ನು ಗುರಿಯಾಗಿಸಿಕೊಂಡು ಕ್ರಿಶ್ಚಿಯನ್ನರು ಮತಾಂತರ ಹುನ್ನಾರ ನಡೆಸಿದ್ದು ಅವುಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ಕಾಂಗ್ರಸ್ ಪಕ್ಷ ಹಾಗೂ ಸರ್ಕಾರ ಹಿಂದು ವಿರೋಧಿ ಧೋರಣೆ ಮಾಡಿ ಮುಸ್ಲಿಂರ ಓಲೈಕೆ ಮಾಡುವ ಹಿಂದೂ ವಿರೋಧಿ ಪಕ್ಷ, ರಾಮ ಕಾಲ್ಪನಿಕ ಎಂದು ಸುಪ್ರೀಂ ಕೋರ್ಟಗೆ ಅಫಿಡವಿಟ್ ನೀಡಿದ ನೀಚರ ಕಾಂಗ್ರೆಸಿಗರು, ಅವರು ರಾಮನ ವಿರೋಧಿಸಿ ಬಾಬರನ ಪರವಾಗಿ ನಿಂತವರು, ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಅನುದಾನ ನೀಡಿದ್ದು, ಚರ್ಚ್ ಹಾಗೂ ಮಂಗಳೂರಿನಲ್ಲಿ ಹಜ್ ಭವನಕ್ಕೆ ನೂರಾರು ಕೋಟಿ ಹಣ ನೀಡಿ, ಹಿಂದು ದೇವಾಲಯಗಳ ಅಭಿವೃದ್ಧಿಗೆ ಒಂದು ರೂಪಾಯಿ ಸಹ ನೀಡದೇ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಜನ ವಿರೋಧಿ ಅಲೆ ಇದ್ದು, ಸಂಪೂರ್ಣವಾಗಿ ಹತಾಶರಾಗಿದ್ದಾರೆ, ಶಾಲೆಯಲ್ಲಿ ದೇವರ ಪೂಜೆ ಮಾಡಬಾರದು, ಸರಸ್ವತಿ ಪೂಜೆ ಮಾಡಬಾರದು ಎಂದು ಆದೇಶ ಹೊರಡಿಸಿದ್ದಲ್ಲದೇ, ‘ಕೈ ಮುಗಿದು ಒಳಗೆ ಬಾ’ ಎನ್ನುವ ವಾಕ್ಯವನ್ನು ತೆಗೆಸುವಂತೆ ಆದೇಶ ನೀಡಿದ್ದು ಮುಸ್ಲಿಂಮರ ಓಲೈಕೆಗೆ ಎಂದು ಕಿಡಿ ಕಾರಿದರು.

 

 

Leave a Reply

Your email address will not be published. Required fields are marked *

error: Content is protected !!