006b9520-660f-4664-b8cf-b59a1e3c9b7a

 ಅದ್ದೂರಿಯಾಗಿ ಜರುಗಿದ ಶ್ರೀ ಮ. ನಿ. ಪ್ರ. ಬಸವಲಿಂಗ ಮಹಾಸ್ವಾಮಿಗಳ ಅಡ್ಡಪಲಕ್ಕಿ
ಮಹೋತ್ಸವ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ19-  ಯಲಬುರ್ಗಾ ಪಟ್ಟಣದ ಶ್ರೀ ಧರಮುರಡಿ ಹಿರೇಮಠದಿಂದ ನವಲಗುಂದ ಗವಿಮಠದ ಪರಮ ಪೊಜ್ಯ ಶ್ರೀ ಮ.ನಿ.ಪ್ರ ಬಸವಲಿಂಗ ಮಹಾಸ್ವಾಮಿಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಸಂಬ್ರಮದಿಂದ ಜರುಗಿತು.

ನಗರದ ಪ್ರಮುಖ ರಾಜ ಬೀದಿಗಳ ಮುಖಾಂತರ ಮೆರವಣಿಗೆ ಸಾಗಿ. ಮೆರವಣಿಗೆಯಲ್ಲಿ ಸಕಲ ವಾದ್ಯಮೇಳದೂಂದಿಗೆ ಮಹಿಳೆಯರು ಕುಂಭ ಕಳಸ ಕನ್ನಡಿಯೊಂದಿಗೆ ಶ್ರೀ ಬಸವಲಿಂಗೇಶ್ವರ ಕತು೯ಗದುಗೆ ತಲುಪಿ ಕನಕದಾಸ ಸಕ೯ಲ್ ಅಪ್ಪು. ವೀರ ರಾಣಿ ಕಿತ್ತೋರ ಚನ್ನಮ್ಮ ಸಕ೯ಲ್ ಮುಖಾಂತರ ಸಾಗುತ್ತಾ ಪುನಾ108 ಶ್ರೀ ಷ. ಬ್ರ. ಬಸವಲಿಂಗೇಶ್ವರ ಶ್ರೀಗಳ 22 ನೇಸವರ್ಷದ ಪೀಠಾರೋಹಣ ವಾಷಿ೯ಕೋತ್ಸವ ವೇದಿಕೆಗೆ ತಲುಪಿತು.

ಈ ಸಂದರ್ಭದಲ್ಲಿ ಯುವಕರು ಹಷ೯ದಿಂದ ಶ್ರೀಗಳಿಗೆ ಜೈಕಾರ ಹಾಕಿದರು.ಈ ವೇಳೆ ಶ್ರೀ ಮಠದ ಸದ್ಬಕ್ತರು ಮತ್ತು ಕಮೀಟಿಯವರು ಗಣ್ಯ ಮಾನ್ಯರು. ರಾಜಕೀಯ ಧುರೀಣರು ಮುಖಂಡರು ಊರಿನ ಹಿರಿಯರು.ಮತ್ತು ತಾಲೂಕಿನ ಸುತ್ತಮುತ್ತಲಿನ ಗ್ರಾಮದವರು ಮತ್ತು ಇತರರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!