ಅನಿತಾ ಎಂ ಅವರಿಗೆ ಪಿಎಚ್ ಡಿ: ಸನ್ಮಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 17- ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇರಕಲ್ಲಗಡಾದ ದೈಹಿಕ ಶಿಕ್ಷಣ ನಿರ್ದೇಶಕರಾದ ಅನಿತಾ ಎಂ ಅವರಿಗೆ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ.
ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ, ದೈಹಿಕ ಶಿಕ್ಷಣ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅನಿತಾ ಎಂ ಅವರು ಪ್ರೊ. ಡಿ ಎಂ ಜ್ಯೋತಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಫಿಜಿಯೋಲಾಜಿಕಲ್ ಆಂಡ್ ಫಿಸಿಕಲ್ ಪ್ರೊಫೈಲ್ ಆಫ್ ಕಬಡ್ಡಿ ಪ್ಲೇಯರ್ಸ್ ಆಫ್ ಕರ್ನಾಟಕ ಸ್ಟೇಟ್’ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ವಿಜಯಪುರ ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಪಿಎಚ್ ಡಿ ಪದವಿ ನೀಡಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇರಕಲ್ಲಗಡದ ಪ್ರಾಂಶುಪಾಲರಾದ ಅನಿತ ಎಂ ಪಾಟೀಲ್, ಪ್ರೊ. ಪ್ರಕಾಶಗೌಡ, ಪ್ರೊ. ಶಂಕ್ರಯ್ಯ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಸಂಗಮೇಶ ಬಾದವಾಡಗಿ, ಶಿಕ್ಷಣ ಪ್ರೇಮಿಗಳಾದ ವೀರಬಸಪ್ಪ ಪಟ್ಟಣಶೆಟ್ಟಿ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಜೊತೆಗೆ ಸಿ.ಡಿ.ಸಿ ಸದಸ್ಯರು ಪಿಎಚ್ ಡಿ ಪದವಿ ಪಡೆದ ಅನಿತಾ ಎಂ ಇವರನ್ನು ಅಭಿನಂದಿಸಿ, ಸನ್ಮಾನಿಸಿದರು.

