WhatsApp Image 2024-12-17 at 5.19.34 PM

ಕರಮುಡಿ ಗ್ರಾಮದಲ್ಲಿ ಶ್ರೀ ಕರ ವೀರಭದ್ರೇಶ್ವರ ಕಾರ್ತಿಕೋತ್ಸವ 

ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರ ಕೂಡಿಸಿ

ಶ್ರೀ ವಿಜಯ ಮಹಾಂತ ಮಹಾಸ್ವಾಮಿಗಳು

 

ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 17 ಮನುಷ್ಯನ ಕತ್ತಲೆಯನ್ನು ಕಳಿದು ಹೂಸ ಬೆಳಕನ್ನು ಮೂಡಿಸುತ್ತದೆ ಅಂಧಕಾರವನ್ನು ಹೋಗಲಾಡಿಸಲು ದ್ವೀಪವನ್ನು ಹಚ್ಚಬೇಕು.ಎಲ್ಲಾ ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ.ಸಂಸ್ಕಾರ ನೆಡೆ. ನುಡಿ ಶಿಕ್ಷಣ ಕೊಡಿಸಬೇಕು ಎಂದು ಶ್ರೀಮ.ನಿ.ಪ್ರ ಜಗದ್ಗುರು ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು ಮೈಸೂರು ಮಠ ಕುದ್ರಿಮೋತಿ ಹೇಳಿದರು.
ತಾಲೂಕಿನ ಕರಮುಡಿ ಗ್ರಾಮದಲ್ಲಿ ಶ್ರೀ ಕರ ವೀರಭದ್ರೇಶ್ವರ ಕಾರ್ತಿಕೋತ್ಸವದ ಕಾರ್ಯಕ್ರಮದಲ್ಲಿ ಉಭಯ ಶ್ರೀ ಗಳಾದ ಪರಮ್ಮ ಪೊಜ್ಯ ಶ್ರೀ ಮ.ನಿ.ಪ್ರ. ಜಗದ್ಗುರು ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು ಮೈಸೂರುಮಠ ಕುದುರಿಮೋತಿ.ಮತ್ತು ಶ್ರೀ ಷ. ಬ್ರ.ಮುಪ್ಪಿನ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಲಕೇರಿ ಇವರು ಸಾನ್ನಿಧ್ಯ ವಹಿಸಿದರು ನಂತರ ಮಾತನಾಡಿದ ಅವರು ಪ್ರತಿ ವರ್ಷದಂತ ಈ ವರ್ಷವು ಸಹ ಕರಮುಡಿ ಗ್ರಾಮದಲ್ಲಿ ಕರ                       ವೀರಭದ್ರೇಶ್ವರ ಕಾರ್ತಿಕೋತ್ಸವನ್ನು ಎಲ್ಲರೂ ಜಾತಿ ಬೇದ ವಿಲ್ಲದೆ ಎಲ್ಲರೂ ಮಾಡುವ ಈ ಕಾರ್ತಿಕೋತ್ಸವ  ಜಾತ್ರಾ ಮಹೋತ್ಸವ ಒಂದು ಹಬ್ಬವಿದಂತೆ . ಇಂದಿನ ಯುವಕರು ದುಶ್ಟಚಟ್ಟಗಳನ್ನು ಬಿಟ್ಟು ಸನ್ ಮಾರ್ಗದಲ್ಲಿ ನಡೆಯಬೇಕು ನಿಮ್ಮ ತಂದಿ ತಾಯಿಗಳಿಗೆ. ಊರಿಗೆ.ಕಿತಿ೯ ತರುವಂತ ಮಕ್ಕಳಾಗಬೇಕು ಎಂದು ಹೇಳಿದರು.

               ನಂತರ ಶ್ರೀ ಷ. ಬ್ರ. ಮುಪ್ಪಿನ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಕ್ತಿ ಎಂಬ ಚಳುವಳಿಯಿಂದ ಸಮಾಜದಲ್ಲಿ ಬೆಳಕನ್ನು ಚೆಲ್ಲಿದವರು ಬಸವಣ್ಣನವರು.
ವೀರಭದ್ರೇಶ್ವರರು ಪೌರಾಣಿಕ ಪುರುಷರು. ದ್ವೀಪ ಹಚ್ಚುವ ಕಾರ್ತಿಕೋತ್ಸವದ ಉದ್ದೇಶ ಪ್ರತಿಯೊಬ್ಬರ ಬಾಳಲ್ಲಿರುವ ಅಂಧಕಾರವನ್ನು ಹೋಗಲಾಡಿಸಲು ದ್ವೀಪವನ್ನು ಹಚ್ಚಬೇಕು ಪ್ರತಿಯೂಬ್ಬರು ಧಾನ ಮಾಡುವದರಿಂದ ಶ್ರೇಯಸು ಸಿಗುತ್ತದೆ ಕರಮುಡಿ ಗ್ರಾಮದ ಸದ್ಬಕ್ತರು ಎಲ್ಲಾ ಧಮ೯ದವರು ಒಟ್ಟಾಗಿ ಸೇರಿ ಭಾವ ಐಕತೆಯಿಂದ ಮಾಡುತ್ತಾರೆ .

              ಅವರ ಪ್ರಮಾಣಿಕತೆ ಪರಿಶ್ರಮದಿಂದ ಇಂತಹ ಪುರಾಣ. ಧಾರ್ಮಿಕ. ಕಾರ್ತಿಕೋತ್ಸವವನ್ನು ಮಾಡುವದು ಗ್ರಾಮದವರ ಪರಿಶ್ರಮ ಬಹಳವಿದೆ ಮನುಷ್ಯನು ಮಾನವನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರು ಎಲ್ಲರನ್ನೂ ಪರಸ್ಪರ ಪ್ರೀತಿ ಪ್ರೇಮ. ಗೌರವದಿಂದ ಕಾಣಬೇಕು ಮತ್ತು ಗುರು-.ಹಿರಿಯರನ್ನು ಗೌರವಿಸಬೇಕು ಎಲ್ಲರೂ ನೀವು ಮಾಡುವ ನಿತ್ಯ ಕಾಯಕವನ್ನು ಪ್ರಮಾಣಿಕ ಮಾಡಬೇಕು ಇದರಿಂದ ನಿಮ್ಮ ಜೀವನ ಸುಖಮಯವಾಗಲಿ.
ಮಾನವ ರಾಗಿ ಹುಟ್ಟಿದ ಮೇಲೆ ಧಾನ. ಧಮ೯ ಪರೋಪಕಾರ. ಸಮಾಜಮುಖಿ ಒಳ್ಳೆಯ ಕೆಲಸ ಮಾಡುವ ಮೂಲಕ ನಿಮ್ಮ ಜೀವನ ಪಾವನ ಮಾಡಿಕೂಳ್ಳಿ ಎಂದು ಹೇಳಿದರು. ನಂತರ ಶ್ರೀ ಕರವೀರಭದ್ರೇಶ್ವರ ದೇವರ ದಶ೯ನ ಪಡದುಕೂಂಡರು ಅನ್ನ ಸಂತರ್ಪಣೆ ನಡೆಯಿತು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿ. ಡಿ. ಓ ಬಸವರಾಜ ಕಿಳ್ಳಿಕ್ಯಾತರ ಗ್ರಾ.ಪಂ.ಅಧ್ಯಕ್ಷ ಲಿಂಗರಾಜ ಉಳ್ಳಾಗಡ್ಡಿ.ಉಪಾಧ್ಯಕ್ಷ ಲಕ್ಷಮ್ಮವ್ವ ಲಮಾಣಿ. ಎಸಡಿಎಂಸಿ ಅಧ್ಯಕ್ಷ ಶ್ಯಾಮಿದಸಾಬ ಮುಲ್ಲಾ. ಬಿ ಎಂ.ಪಾಟೀಲ.ಬಹದ್ದೊರ್ ದೇಸಾಯಿ.ಸಿಎಚ್ ಪೋಲೀಸ್ ಪಾಟೀಲ. ಕಳಕಪ್ಪಕಂಬಳಿ. ಡಾಕ್ಟರ್ ಮಂಜುನಾಥ ಕುಕನೂರು. ಶಂಕುತಲಾದೇವಿ ಮಾಲಿ ಪಾಟೀಲ. ವೀರಣ್ಣ ನಿಂಗೋಜಿ. ಗುರಪ್ಪ ಅಂಗಡಿ. ವೀರಪ್ಪ ನಿಡಶೇಸಿ. ಶರಣಗೌಡ ಪಾಟೀಲ ಭೀಮಣ್ಣ ಹವಳಿ.ಗಂಗಪ್ಪಹವಳಿ ಸಂಗಪ್ಪ ಬಂಡಿ ಶರಣಪ್ಪ ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!