ಅಪರಿಚಿತ ವ್ಯಕ್ತಿ ಶವ ಪತ್ತೆ: ವಾರಸುದಾರರ ಪತ್ತೆಗೆ ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 6- ಗಂಗಾವತಿ ತಾಲ್ಲೂಕಿನ ವೆಂಕಟಗಿರಿ ಹೋಬಳಿಯ ರಾಮನ ಮೂಲೆಯ ಗುಡ್ಡದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮೃತ ದೇಹವು ಮಾರ್ಚ್ 09 ರಂದು ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (ಯು.ಡಿ .ಆರ್ ನಂ:05/2024 ಕಲಂ: 174(ಸಿ) ಸಿ.ಆರ್.ಪಿ.ಸಿ ಅಡಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯು ಅಂದಾಜು 50-55 ವಯಸ್ಸಿನವರಾಗಿದ್ದು, 5.2 ಅಡಿ ಎತ್ತರವಿದ್ದು, ಶವದ ಮೇಲೆ ಹಳೆಯ ಮಾಸಿದಂತ ಅರ್ಧ ತೋಳಿನ ಬಿಳಿ ಬಣ್ಣದ ಶರ್ಟ್ ಇರುತ್ತದೆ. ಶರ್ಟಿನ ಮೇಲೆ ಆರ್.ಬಿ ಟೇಲರ್, ಬಸಾಪಟ್ಟಣ ಎಂದು ಇರುತ್ತದೆ. ವ್ಯಕ್ತಿಯ ದೇಹವನ್ನು ಕಾಡು ಪ್ರಾಣಿಗಳು ಕಿತ್ತು ತಿಂದಿರುವಂತೆ ಇರುತ್ತದೆ.
ಮೃತ ವ್ಯಕ್ತಿಯ ಸಂಬಂಧಿಕರು ಹಾಗೂ ವಾರಸುದಾರರಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ದೂ.ಸಂ: 08533-230754, ಸಿಪಿಐ ಗಂಗಾವತಿ ವೃತ್ತ: 9480803730 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪ್ರಕಟಣೆ ಕೋರಿದೆ.
