
ಅಭಿವೃದ್ಧಿಯ ಹೆಸರೇ ಇಲ್ಲದ ಸತ್ವಹೀನ ಬಜೆಟ್
ಕೇಂದ್ರ ಸಚೀವ ಪ್ರಲ್ಹಾದ ಜೋಶಿ
ಕರುನಾಡ ಬೆಳಗು ಸುದ್ದಿ
ಹುಬ್ಬಳ್ಳಿ/ನವದೇಹಲಿ : 07 – ರಾಜ್ಯದ ಮುಖ್ಯಮಂತ್ರಿ ಇಂದು ವಿಧಾನಸಭೆಯಲ್ಲಿ ಮಂಡಿಸಿದ 2025-26 ನೇ ಸಾಲಿನ ರಾಜ್ಯ ಬಜೆಟ್ ರಾಜ್ಯವನ್ನು ಆರ್ಥಿಕ ಪ್ರಗತಿಪಥದತ್ತ ಕೊಂಡುಹೋಗುವ ಯಾವುದೇ ರಚನಾತ್ಮಕ ಪ್ರಸ್ತಾವನೆಗಳಿಲ್ಲದ ಸತ್ವಹೀನ ಬಜೆಟ್ ಎಂದು ಕೇಂದ್ರ ಸಚೀವ ಪ್ರಲ್ಹಾದ ಜೋಶಿ ಪ್ರತಿಕ್ರಯಿಸಿದ್ದಾರೆ.
ಎಲ್ಲದಕ್ಕೂ ಕೇಂದ್ರ ಸರ್ಕಾರದಡೆ ಬೊಟ್ಟು ಮಾಡುವುದನ್ನೇ ರೂಢಿ ಮಾಡಿಕೊಂಡಿರುವ ಮುಖ್ಯಮಂತ್ರಿ ಅಲ್ಪಸಂಖ್ಯಾತರ ತುಷ್ಠೀಕರಣದೊಂದಿಗೆ ಓಟ್ ಬ್ಯಾಂಕ್ ರಾಜಕಾರಣದ ಲೇಪನ ಈ ಬಜೆಟ್ನಲ್ಲಿ ಎದ್ದು ಕಾಣುತ್ತಿದೆ. ಒಟ್ಟಾರೆ ಬಜೆಟ್ಗೆ ಯಾವದೇ ಅರ್ಥಿಕ ಮೂಲತತ್ವಗಳ ಸ್ಪರ್ಶ ನೀಡುವಲ್ಲಿ ವಿಫಲರಾಗಿದ್ದಾರೆ. ನೋಡಲು ರೂ 4.9 ಲಕ್ಷ ಕೋಟಿ ಬೃಹತ್ಗಾತ್ರದ ಬಜೆಟ್ ಮಂಡಿಸಿದ್ದರೂ ಸರ್ವವರ್ಗದ ಸಮಭಾವ ಹಾಗೂ ಸರ್ವಪ್ರದೇಶಗಳ ಅಭಿವೃದ್ಧಿಯ ಸಮತೋಲನ ಮಾಡಿದ್ದು ಎಲ್ಲಿಯೂ ಕಾಣುವುದಿಲ್ಲ. ರಾಜ್ಯದ ಒಟ್ಟು ಸಾಲ ರೂ 8 ಲಕ್ಷ ಕೋಟಿಗೆ ಸಮೀಪಿಸಿದ್ದು ರಾಜ್ಯ ಜಿಡಿಪಿಯ 23% ರಷ್ಟಾಗಿರುವುದು ಕಳವಳಕಾರಿಯಾಗಿದೆ.
ರೆವೆನ್ಯು ವೆಚ್ಚ ರೂ 3,11,400 ಲಕ್ಷ ಕೋಟಿ, ಬಂಡವಾಳ ವೆಚ್ಚ ರೂ 76,400 ಕೋಟಿ ಇದ್ದು ವಿತ್ತೀಯ ಕೊರತೆ ನಿಗದಿ ಪಡಿಸುವಲ್ಲಿ ಯಾವುದೇ ತಾತ್ವಿಕ ವ್ಯವಸ್ಥೆ ಪಾಲಿಸಲಾಗಿಲ್ಲ. ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ 14% ರಷ್ಟು ಅನುದಾನ ನೀಡಲಾಗಿದೆ ಹಾಗೂ ಶಿಕ್ಷಣ ಹಾಗೂ ಆರೋಗ್ಯಕ್ಕೆ ಕ್ರಮವಾಗಿ 10% ಹಾಗೂ 5% ರಷ್ಟು ಅನುದಾನ ತೃಪ್ತಿಕರವಾಗಿಲ್ಲವೆಂದಿರುವ ಕೇಂದ್ರ ಸಚೀವ ಜೋಶಿಯವರು ಹಲವಾರು ಕ್ಷೇತ್ರಗಳಿಗೆ ನೀಡಿದ ಅನುದಾನ ಹಾಗೂ ಗ್ಯಾರಂಟಿಗಳಿಗೆ ಹೇಗೆ ಹಣ ಹೊಂದಿಸಲಾಗುವುದೆ0ಬ ಬಗ್ಗೆ ನಿರ್ದಿಷ್ಟ ಪ್ರಸ್ತಾವನೆಗಳಿಲ್ಲದ ಜನರಿಗೆ ಧನಾತ್ಮಕ ನಿರೀಕ್ಷೆ ನೀಡದ ಬಜೆಟ್ ಎಂದಿದ್ದಾರೆ.
ಅಲ್ಲದೇ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಈ ಬಜೆಟ್ನಲ್ಲಿ ಗಮನಾರ್ಹ ಹಂಚಿಕೆ ಇಲ್ಲದಿರುವುದು ಆರ್ಥಿಕ ಪ್ರಗತಿಗೆ ದೊಡ್ಡ ಹೊಡೆತವಾಗಿದೆ. ರಸ್ತೆಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳು ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತವೆ ಮತ್ತು ಖಾಸಗಿ ಹೂಡಿಕೆಯನ್ನು ಆಕರ್ಷಿಸುತ್ತವೆ. ಆದರೆ, ಈ ಬಜೆಟ್ನಲ್ಲಿ ಇಂತಹ ಯೋಜನೆಗಳಿಗೆ ಆದ್ಯತೆ ನೀಡದಿರುವುದು ರಾಜ್ಯದ ಸ್ಪರ್ದಾತ್ಮಕತೆಯನ್ನು ಕುಗ್ಗಿಸುತ್ತದೆ ಎಂದು ಸಚಿವ ಶ್ರೀ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.