ಆಗಸ್ಟ್ 4ರಂದು ಸ್ಟೀಲ್ ಸಿಟಿ ರನ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 5- ಬಳ್ಳಾರಿ ಸೈಕಲಿಸ್ಟ್ ಮತ್ತು ರನ್ನರ್ ಫೌಂಡೇಶನ್ ಬರುವ ಆಗಸ್ಟ್ 4 ರಂದು, ಸ್ಟೀಲ್ ಸಿಡಿ ರನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಬಳ್ಳಾರಿ ಸೈಕ್ಲಿಸ್ಟ್, ಮತ್ತು ರನ್ನರ್ಸ್ ಫೌಂಡೇಶನ್ ಅಧ್ಯಕ್ಷ ಡಾ. ರವಿಶಂಕರ್ ಮತ್ತು ಬಿಕೆ ಸುಂದರ್ ಅವರು ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದರು. ಜಿಂದಾಲ್, ಕಿಷ್ಕಿಂದ ವಿಶ್ವವಿದ್ಯಾಲಯ, ಮೋದಿ ಫೌಂಡೇಶನ್, ಎಸ್ ಬಿ ಐ ಬ್ಯಾಂಕ್, ಬಿಕೆ ಫೌಂಡೇಶನ್ ಮತ್ತು ಶ್ರೀ ನಂದಿ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ಇತರ ಸಂಸ್ಥೆಗಳ ಸಹಕಾರದಿಂದ ಈ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು. ಸ್ಟೀಲ್ ಸಿಟಿ ರನ್ನನ್ನು ಮೊದಲು ಬಾರಿಗೆ 2022 ರಲ್ಲಿ ಹಮ್ಮಿಕೊಂಡಿದ್ದಾಗ 1500 ಜನರು ಕಳೆದ ವರ್ಷ 2500 ಜನ ಪಾಲ್ಗೊಂಡಿದ್ದರು ಈ ಬಾರಿ 3000ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್ ಉಪಾಧ್ಯಕ್ಷ ಶ್ರುತಿ, ಕಾರ್ಯದರ್ಶಿ ಸಂದೀಪ್ ಶರ್ಮ, ಖಜಾಂಜಿ ಪ್ರಶಾಂತ್ ನಿರಾಜ್ ವಿಕಾಸ್ ಜೈನ್ ಡಾಕ್ಟರ್ ತಿಪ್ಪಾರೆಡ್ಡಿ ಅವರು ಇದ್ದರು.
