
ಆಯುಷ್ಮಾನ್ ಭಾರತ್ ಶಿಕ್ಷಕರಿಗೆ ತರಬೇತಿ : ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಧರಣಾ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 29- ಮನುಷ್ಯನಿಗೆ ಆರೋಗ್ಯದ ವಿಶೇಷ ಕಾಳಜಿ ವಹಿಸುವದರ ಜೊತಗೆ ಹಣ ಅಸ್ತಿಗಿಂತ ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳವದು ಮುಖ್ಯ ಕರ್ತವ್ಯ ಎಂದು ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಎಸ್ ವಿ ಧರಣಾ ಹೇಳಿದರು.
ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯುಷ್ಮಾನ್ ಭಾರತ್ ಕಾರ್ಯಕ್ರಮ ಕುರಿತ ತರಬೇತಿ ನಡೆಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಧರಣಾ ಮಾತನಾಡಿ,ಶಿಕ್ಷಕರ ಮತ್ತು ಮಕ್ಕಳ ಆರೋಗ್ಯವು ಶೈಕ್ಷಣಿಕ ಸಾಧನೆಗೆ ಮತ್ತು ಸುಧಾರಣೆಗೆ ಪರಿಣಾಮ ಬೀರುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಉತ್ತಮ ಆರೋಗ್ಯದಿಂದ ಇರಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಶಿಕ್ಷಕರು ವಿಶೇಷ ಕಾಳಜಿವಹಿಸಬೇಕು.
ಕ್ರಮಬದ್ಧವಾದ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಮಕ್ಕಳಿಗೆ ಆದರ್ಶ ಶಿಕ್ಷಕರಾಗಿ ಗುರುತಿಸಿ ಕೊಳ್ಳಬೇಕಾಗುತ್ತದೆ’ ಎಂದರು.
ನೌಕರರ ಸಂಘದ ಅಧ್ಯಕ್ಷ ಮಹೇಶ ಸಬರದ್, ಆಯುಷ್ಮಾನ್ ಭಾರತ ಉತ್ತಮ ಕಾರ್ಯಕ್ರಮ. ಐದು ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ ಶಾಲೆಗಳಲ್ಲಿ ಆರೋಗ್ಯದ ಕುರಿತಾದ ಕೆಲವು ಸಲಹೆ ಸೂಚನೆಗಳು, ಮಾರ್ಗದರ್ಶನಗಳು ದೊರೆಯುತ್ತವೆ. ಅವುಗಳನ್ನು ಅನುಸರಿಸುವ ಮೂಲಕ ಆರೋಗ್ಯ ಸಂರಕ್ಷಣೆಗೆ ವಿಶೇಷ ಒತ್ತು ನೀಡಬೇಕಾಗುತ್ತದೆ’ ಎಂದರು.
ನಂತರ ಮಾತನಾಡಿದ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶರಣಯ್ಯ ಸರಗಣಾಚಾರ ಅವರು ಮಾತನಾಡಿ ಮಕ್ಕಳ ಅಪೌಷ್ಠಿಕತೆಯನ್ನು ಗುರುತಿಸಿ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸುವುದರ ಬಗ್ಗೆ ಕಾಳಜಿ ತೋರಬೇಕಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸಿದ್ದಲಿಂಗಪ್ಪ ಶ್ಯಾಗೋಟಿ, ಸಿದ್ದಪ್ಪ ಕಟ್ಟಿಮನಿ, ಕೊಟ್ರೇಶ್ ಬೆನ್ನಳ್ಳಿ, ಪ್ರವೀಣಯ್ಯ ಸಸಿಮಠ, ಶಿವಪ್ಪ ಉಪ್ಪಾರ, ಈರಪ್ಪ ಗಾಣಿಗೇರ ಇನ್ನು ಹಲವಾರು ಶಿಕ್ಷಕ ವರ್ಗದವರು ಮತ್ತು ಇತರರು ಭಾಗವಹಿಸಿದ್ದರು.