
ಆರ್ಯ ವೈಶ್ಯ ಸಮಾಜದ
ಪ್ರತಿಭಾವಂತ ಯುವಕ ಹನುಮಂತಯ್ಯ
ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಆರ್ಯ ವೈಶ್ಯ ಸಮಾಜದ ಮನೆಗಳು ಕೇವಲ ಬೆರೆಳಿಕೆಯಷ್ಟು
ಆದರೂ ವೈಶ್ಯರೂ ಎಲ್ಲರಿಗು ಬೇಕು ಕಾರಣ ಏನೇಂದರೆ ದೈನಂದಿನ ಜೀವನಕ್ಕೆ ಬೇಕಾಗುವ ಕಿರಾಣಿ ದಿನಸಿ ಮತ್ತು ಹಣದ ಲೇವಾದೇವಿಯ ಕೆಲಸ ಇದ್ದದ್ದೇ ಇಂತಹ ಕುಲಸಬು ವ್ಯಾಪಾರದ ಜೊತೆ ಮಾತೆ ಕನ್ಯಕಾ ಪರಮೇಶ್ವರಿ ಅ ಮ್ಮನವರ ಹಾಗೂ ನಗರೇಶ್ವರ ಪರಮಆರಾಧಕರು ಈ ವೈಶ್ಯ ಕುಲದವರು
ಈ ಸಮಾಜದಲ್ಲಿ ಹಲವಾರು ಜನ ಸಾಹಿತಿಗಳು ವಿದ್ವಾಂಸರು ಕಲೆ ಚಿತ್ರಕಲೆ ದೊಡ್ಡ ಉದ್ಯಮ ಕಲಾ ಕ್ಷೇತ್ರದಲ್ಲಿ ಹೆಸರು ವಾಸಿಯಾದವರು ಇದ್ದಾರೆ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ವೈಶ್ಯ ಸಮಾಜದ ಪ್ರತಿಭಾವಂತರಿಗೇನೂ ಕೊರತೆಇಲ್ಲ. ಅಂತಹವುದರಲ್ಲಿ ಈಹನುಮಂತಯ್ಯ ಶ್ರೇಷ್ಟಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಕಿ ವಾಸಿಸುವ ಇವರು ಅನಿವಾರ್ಯವಾಗಿ ಬೆಂಗಳೂರು ಗೆ ಬದುಕ ನರಿಸಿ ಹೋಗಬೇಕಾಯಿತು ಅಲ್ಲಿ ಕೆಲಸ ಮಾಡುವ ಸಂಧರ್ಭದಲ್ಲಿ ಬಲಗೈ ನ ಮೂರು ನಾಲ್ಕು ಬೆರಳುಗಳು ಯಂತ್ರದ ಬಾಯಿಗೆ ಸಿಕ್ಜು ಮೂರು ಬೆರಳು ಕಟ್ ಆದವು ಜೀವನದ ಚಿಂತೆ ಎದುರಾಯಿತು
ಆದರೆ ಹನುಮಂತಯ್ಯ ದೃತಿಗೆಡದೆ ಎಲ್ಲ ಕೆಲಸ ಎಡಗೈ ಯಿಂದಲೇ ಮಾಡತೊಡಗಿದರು ಮೊದಲಿಂದಲೂ ಕಲೆಯಲ್ಲಿ ಆಸಕ್ತಿ ಇತ್ತು ಈರಣ್ಣ ಮುದ್ದೆಪ್ಪ ಬಡಿಗೇರ ಎನ್ನುವರು ಸರಸ್ವತಿ ಚಿತ್ರ ಬಿಡಿಸಿದರೆ ಅದೆ ಹನುಮಂತಯ್ಯ ಲಕ್ಷೀ ಚಿತ್ರ ಬಿಡಿಸಿ ತೋರಿಸಿ ಶಹಭಾಷ್ ಎನಿಸಿಕೊಂಡರು ನಂತರ ಚಿತ್ರಕಲೆಯಲ್ಲಿ ಮನದಾಸೆ ಮೊಳಕೆಯೊಡೆಯಿತು ನಂತರ ೫ ತರಗತಿ ಒದುವಾಗಲೇ ಶಾಲಸಹಂತದಲ್ಲಿ ಪ್ರಶಸ್ತಿ ಬಂದಿತು ಸರಸ್ವತಿ ಚಿತ್ರಕ್ಕೆ ಹೈಸ್ಕೂಲ್ ಗುರುಗಳು ಹನುಂತ ದಾಸರ ಗುರುತಿಸಿ ಡ್ರಾಯಿಂಗ್ ಪರೀಕ್ಷಾ ಬರೆಸಿದರು ಹೈಯರ್ ಗ್ರೇಡ್ ಪ್ರಥಮ ಸ್ಥಾನ ಪಡೆದರು ಪ್ರತಿಭಾ ಕಾರಂಜಿ ಯಲ್ಲಿ ಜಿಲ್ಲಾ ಹಂತದವರೆಗೂ ಹೋದರು ಮುಂದೆ ಜೀವನಕ್ಕಾಗಿ ಸರಕಾರದ ಯೋಜನೆಯ ಭಿತ್ತಿ ಪತ್ರದಮೂಲಕ ಗೋಡೆ ಬರೆಹ ಗಳು ಅಂಗನವಾಡಿ ಶಾಲೆಗಳಿಗೆ ಚಿತ್ರಪಟ ಗೋಡೆಚಿತ್ರಗಳು ಸ್ಲೋಗನ್ ಗಳು ಥರ್ಮಾಕೋಲ್ ನಲ್ಲಿ ಬಿ ಎಡ್ ಹುಡಗರಿಗೆ ಸ್ಕೂಲ್ ಗಳಿಗೆ ಟೀಚಿಂಗ್ ಎಡ್ ಮಾಡಿದರು
ವಿಶೇಷವಾಗಿ ಚಿತ್ರ ಬರೆಹ, ಕ್ಯಾನ್ವಾಸ್ ಡ್ರಾಯಿಂಗ್, ಡ್ರಾಯಿಂಗ್ ಶೀಟ್ ನಲ್ಕಿ ಚಿತ್ರ ಬರೆಹಗಳು ಸೈನ್ ಬೋಡ್೯ ಗಳನ್ನು ಬಾಲ್ಯದ ದಿನಗಳಿಂದಲೂ ಬರೆಯುತ್ತಾ ಬಂದ ಹನುಮಂತಯ್ಯ ಭರವಸೆಯ ಚಿತ್ರಕಲಾವಿದರಾಗಿದ್ದಾರೆ.
ಕುಷ್ಟಗಿ ತಾಲೂಕಿನಲ್ಲಿರುವ ಪ್ರತಿಭಾವಂತ ಚಿತ್ರಕಲಾವಿದರ ಹಲವಾರೂ ಜನ ಇದ್ದರೂ ನಮ್ಮ ಸಮಾಜದಲ್ಲಿ ಇಂತಹ ಎಡಗೈ ಮೂಲಕ ಚಿತ್ರ ರಚಿಸುವ ಕಲಾವಿದರು ಇರುವುದು ನಮಗೆ ಹೆಮ್ಮೆಯ ವಿಷಯ ಎಂದು ಪ್ರಶಾಂತ ಶ್ಯಾಮಸುಂದರ ಕುಷ್ಟಗಿ ಹೆಮ್ಮೆಯಿಂದ ಹೇಳುತ್ತಾರೆ
ನಗರದ ಕನ್ಯಕಾ ಪರಮೇಶ್ವರಿ ನಗರೇಶ್ವರ ದೇಗುಲ ದಲ್ಕಿ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನ ವನ್ನು ಥರ್ಮಾಕೋಲ್ ನಲ್ಕಿ ರಚಿಸಿದರು ನೋಡಿದ ಸಧ್ಬಕ್ತರು ರಾಯರ ಬೃಂದಾವನ ವನ್ನು ಕಂಡು ಆನಂದಿಸಿದರು ಎಂದು ದೇವಸ್ಥಾನದ ಅರ್ಚಕ ಪಾಂಡು ಆಚಾರ್ ಹಾಗೂ ಅಡವ್ಯಾಚಾರ್ ಆಚಾರ್ ಮನದುಂಬಿ ಹಾರೈಸಿದರು ನಂತರ ದೇವಸ್ಥಾನದ ಮುಖ್ಯಸ್ಥ ರು ವಾಸವಿ ಸೇವಾ ಸಮಾಜದಿಂದ ಹಾಗೂ ಅರ್ಯ ವೈಶ್ಯ ಹಿರಿಯರು ಯುವ ಮಂಡಳಿ ಮಹಿಳಾ ಮಂಡಳಿ ಗೌರವಿಸಿ ಸತ್ಕರಿಸಿದರು.
ಚಿತ್ರ ಲೇಖನ – ನಟರಾಜ್ ಸೋನಾರ್