IMG_20240227_154342

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಎಂಎಲ್,ಸಿ ಮಾಡಿ 

ಕರುನಾಡ ಬೆಳಗು ಸುದ್ದಿ 

ಕೊಪ್ಪಳ, 27-  ಜಿಲ್ಲೆಯ ಪ್ರಭಾವಿ ಮುಖಂಡ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರನ್ನು  ಎಂಎಲ್,ಸಿ ಆಗಿ   ನೇಮಕ ಮಾಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಬಸವರಾಜ ಚಿಲವಾಡಗಿ ಹಾಗೂ ಯುವ ಮುಖಂಡ ಅನಿಲ ಬೊರಟ್ಟಿ ಆಗ್ರಹಿಸಿದರು.

ಅವರು ಮಂಗಳವಾರದಂದು ಮೀಡಿಯಾ ಕ್ಲಬ್ ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದರು.
ಜಿಲ್ಲೆಯ ಪ್ರಬಾವಿ ಮುಖಂಡ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು. ಬಳಿಕ ಸಚಿವ ಸ್ಥಾನ ನೀಡಬೇಕು. ಲೋಕಸಭಾ ಕ್ಷೇತ್ರದ ಮುಸ್ಲಿಂ ಸಮುದಾಯದ ಹೆಚ್ಚಿನ ಬೆಂಬಲ ಸಿಗಲಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲು ಸಹಕಾರಿ ಆಗಲಿದೆ ಎಂದು ಒತ್ತಯಿಸಿದರು.

ಕಿನ್ನಾಳ ಗ್ರಾಮದ ಕಾಂಗ್ರೆಸ್ ಯುವ ಮುಖಂಡ ಅನಿಲ ಬೋರಟ್ಟಿ ಮಾತನಾಡಿ, ಜಿಲ್ಲೆಯ ಲೋಕಸಭೆ ಚುನಾವಣೆಯಲ್ಲಿ ಸತತ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಅನುಭವಿಸಿದ್ದು, ಇದರಿಂದ ಕೊಪ್ಪಳ ಲೋಕಸಭೆ ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ. ಮುಸ್ಲಿಂ ಸಮುದಾಯದ ನಾಯಕ ಇಕ್ಬಾಲ್ ಅನ್ಸಾರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರೆ, ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ ಲೋಕಸಭಾ ವ್ಯಾಪ್ತಿಯಲ್ಲಿ ಅವರದು ಬಹಳ ದೊಡ್ಡ‌ ಹಿಡಿತವಿದೆ ಎಂದರು.
ಮಾಜಿ ಸಚಿವ ಅನ್ಸರಿ ಅವರು ೨೦೧೩ರಲ್ಲಿ ಜೆಡಿಎಸ್ ನಲ್ಲಿದ್ದರೂ ಕಾಂಗ್ರೆಸ್ ಸರ್ಕಾರದಿಂದ ೭೫೦ ಕೋಟಿ ರೂ. ತಂದು, ಕ್ಷೇತ್ರ ಅಭಿವೃದ್ಧಿ ಮಾಡಿದರು. ಅಲ್ಲದೇ ಜೆಡಿಎಸ್ ಪಕ್ಷದಲ್ಲಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ನೀಡಿದ್ದಾರೆ ಈಗಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲೂವಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಷ್ಠಾವಂತ ನಾಯಕನನ್ನು ಸ್ವಪಕ್ಷೀಯರೇ ಕುತಂತ್ರದಿಂದ ಸೋಲಿಸಿದರು. ಈ ಹಿನ್ನಲೆಯಲ್ಲಿ ಎಂಎಲ್ಸಿಯನ್ನಾಗಿ ಮಾಡಿದರೆ, ಕ್ಷೇತ್ರದ ಅಭಿವೃದ್ಧಿಯ ಜತೆಗೆ ಪಕ್ಷವು ಬಲಿಷ್ಠವಾಗುತ್ತದೆ. ಸದ್ಯ ಕೆ.ಆರ್.ಪಿ.ಪಿ ಪಕ್ಷದ ಶಾಸಕ ಜನಾರ್ಧನರಡ್ಡಿ ನಯಾಪೈಸೆ ಅನುದಾನ ತರದೇ ಅಭಿವೃದ್ಧಿ ಮಾಡುತ್ತಿಲ್ಲ ಅನ್ಸಾರಿ ಅವರು ಎಂಎಲಸಿ ಆದರೆ ಕ್ಷೇತ್ರ ಹಾಗೂ ಜಿಲ್ಲೆ ಅಭಿವೃದ್ಧಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕೆ.ಎಂ.ಎಫ್ ನಿರ್ದೇಶಕ ದಾದಾಪೀರ್ ಗೊನೆಗೊಂಡಲ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!