IMG_20240227_132220

ಇಪ್ಪತ್ತು ಲಕ್ಷ ಕಳ್ಳತನ; ಒಂದೇ ದಿನದಲ್ಲಿ‌ ಆರೋಪಿಗಳ ಬಂಧನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 27- ಇತ್ತೀಚಿಗೆ ಜಿಲ್ಲೆಯ ಕಾರಟಗಿ ಬಳಿ‌ ಕಳ್ಳತನ ವಾಗಿದ್ದ 20 ಲಕ್ಷ ಹಣ ದೋಚಿದ ಮೂವರು ಆರೋಪಿಗಳಲ್ಲಿ ಇಬ್ಬರು ಆರೋಪಿ ಹಾಗೂ‌ ಅವರಿಗೆ ಸೇರಿದ ಕಾರು , ಅವರು ಬಳಸಿದ್ದ ಚಾಕುವನ್ನು‌ ವಶಪಡಿಸಿಕೊಂಡ 17,32000 ಹಣ ಜಪ್ತಿ ಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹೇಳಿದರು.
ಅವರು ಮಂಗಳವಾರದಂದು ಜಿಲ್ಲಾ ಪೋಲಿಸ್ ಕಚೇರಿಯಲ್ಲಿ ಜರುಗಿದ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.

 

ಫೆ 25 ಕಳ್ಳತನ ವಾಗಿದ್ದು ರಾಬರಿ ಆಗಿ ಒಂದು ದಿನದಲ್ಲಿ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ವಿವರ : ಪಿರ್ಯಾದಿದಾರ ಸುರೇಶರೆಡ್ಡಿ ತಂದೆ ವೆಂಕೋಬ ನಾ ಅಮರಾಪುರ ರವರು ತಮ್ಮ ಮೋಟರ ಸೈಕಲ್ ಮೇಲೆ ಸಿಂಧನೂರು ಕಡೆಗೆ ಹೋಗುತ್ತಿರುವಾಗ ಸಿದ್ದಾಪೂರ ಗ್ರಾಮದಾಟಿದ ನಂತರ ಪೆ – 25 ರಂದು ಮದ್ಯಾಹ್ನ ಸುಮಾರು 01-45 ಗಂಟೆಯಿಂದ 02-00 ಗಂಟೆ ಮದ್ಯದ ಅವಧಿಯಲ್ಲಿ ಗಂಗಾವತಿ ಕಡೆಯಿಂದ ಬಿಳಿ ಬಣ್ಣದ ಕಾರನಲ್ಲಿ ಬಂದವರು ದೋಟಾರ್ ಸೈಕಲ್ ಮುಂದೆ ಹೋಗದಂತೆ ನಿಲ್ಲಿಸಿ ಕಾರಿನಲ್ಲಿದ್ದ 28-30 ವರ್ಷದ ಒಬ್ಬ ವ್ಯಕ್ತಿ ಫಿರ್ಯಾದಿ ಹತ್ತಿರ ಬಂದು ಸೂಳೇ ಮಗನೇ ಕಾರಿನಲ್ಲಿ ಹತ್ತು ಅಂತಾ ಗದರಿಸಿದ್ದು ಯಾಕೆ ಅಂತಾ ಕೇಳುವಷ್ಟರಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ 30-35 ವರ್ಷದ ಇನ್ನೊಬ್ಬ ವ್ಯಕ್ತಿ ತನ್ನ ಕೈಯಲ್ಲಿ ಉದ್ದನೇಯ ಚಾಕುವನ್ನು ಹಿದಿದು ಫಿರ್ಯಾದಿ ಎದೆಯ ಮೇಲಿನ ಶರ್ಟ ಹಿಡಿದು ಛೇ ಸೂಳೆ ಮಗನೆ ಕಾರಿನಲ್ಲಿ ಹತ್ತು ಅಂತಾ ಗದರಿಸಿ.
ಅವರ ಜೇಬಿನಲ್ಲಿದ್ದ ರೆಡ್ಡಿ ನೋಟ್ ಮೋಬೈಲ್ ಪೋನ್ ದೋಚಿದ್ದು ಅದೇ ವೇಳೆಗೆ ದಾರಿ ಹೋಕರು ನೋಟೆ ನಿಲ್ಲಿಸಿ ಹತ್ತಿರ ಬರುತ್ತಿರಲು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತ ವ್ಯಕ್ತಿಯ ಕೈಯಲ್ಲಿದ್ದ ಉದ್ದನೇಯ ಚಾಕುವನ್ನು ನೋಡಿ ಸ್ಕೂಟಿ ವಾಹನದವರು ತಮ್ಮ ವಾಹನವನ್ನು ಚಾಲು ಮಾಡಿಕೊಂಡು ಹೋಗಿದ್ದು, ಮುಂದಿನ ಸೀಟಿನಿಂದ ಇಳಿದು ಬಂದಿದ್ದ ವ್ಯಕ್ತಿಯು ಫಿರ್ಯಾದಿದಾರರು ಹಾಕಿಕೊಂಡಿದ್ದ 20,00,000 ಹಣ ಇರುವ ಬ್ಯಾಗನ್ನು ದೋಚಿಕೊಂಡು ಎಲ್ಲಾದು ಸೇರಿ ಕಾರಿನಲ್ಲಿಯೇ ಕುಳಿತುಕೊಂಡು ಕಾರಟಗಿ ಕಡೆಗೆ ಹೋಗಿದ್ದು, ಕಾರಿನಲ್ಲಿ ನಾಲ್ಕು ಜನರಿದ್ದು ಕಾರಿಗೆ ನಂಬರ ಪ್ಲೇಟ ಇರುವುದಿಲ್ಲಾ ಬಿಳಿ ಬಣ್ಣದ್ದು ಇರುತ್ತದೆ ಘಟನೆ ಕುರಿತು ದಿ, 25 ರಂದು ಕಾರಟಗಿ ರಾಣಾ ಗುನ್ನೆ ನಂ 47/2024 ಕಲಂ 382 R/W 34 ಐಪಿಸಿ ನೇದ್ದರ ಮೇಲೆ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಕರಣ ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ಭೇದಿಸಲು ಅಗತ್ಯ ಮಾರ್ಗದರ್ಶನ ನೀಡಿ ಸಿದ್ದಲಿಂಗನಗೌಡ ಪಾಟೀಲ್ ಡಿ.ಎನ್ ಪಿ ಗಂಗಾವತಿ ರವದ ನೇತೃತ್ವದಲ್ಲಿ ಮುತ್ತಣ್ಣ, ಡಿ.ಎಸ್.ಪಿ. ಕೊಪ್ಪಳ ಉಪವಿಭಾಗ ಪ್ರದೀಪ ಬಿಸ್, ಪಿ.ಐ. ಕಾರಟಗಿ ಪೊಲೀಸ್ ಠಾಣೆ. ಸುರೇಶ ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತ, ಮೌನೇಶ ಮಾಲೀಪಾಟೀಲ್, ಸಿಪಿಐ, ಯಲಬುರ್ಗಾ ವೃತ್ತ ಜಯಪ್ರಕಾಶ ಪಿ.ಐ ಕೊಪ್ಪಳ ನಗರ ಪೊಲೀಸ್ ಠಾಣೆ, ವಾಸುಕುಮಾರ, ಪಿ.ಐ. ಗಂಗಾವತಿ ನಗರ ಪೊಲೀಸ್ ಠಾಣೆ. ಬೋರಣ್ಣವರ ಎ.ಎಸ್.ಐ. ಅತೀಕ್ ಆಹ್ಮದ್, ಚಿರಂಜೀವಿ ಹೆಚ್.ಸಿ ಗಂಗಾವತಿ ನಗರ ಪೊಲೀಸ್ ಠಾಣೆ ಮರಿಶಾಂತಗೌಡ ಹೆಚ್ ಸಿ ಗಂಗಾವತಿ ನಗರ ಪೊಲೀಸ್ ಠಾಣೆ ವಿಶ್ವನಾಥ ಹೆಚ್.ಸಿ. ಗಂಗಾವತಿ ನಗರ ಪೊಲೀಸ್ ಠಾಣೆ, ಶಶಿಕಾಂತ ರಾರೋಡ ಎ.ಎಸ್.ಐ ಆಳವಂಡಿ ಠಾಣೆ ಲಕ್ಕಪ್ಪ ಹೆಚ್.ಸಿ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ. ರಮೇಶ ಹೆಚ್‌ಸಿ, ಮುತ್ತುರಾಜ ಪಿ.ಸಿ, ನಾಗರಾಜ ಪಿ.ಸಿ. ನಿರುಪಾದಿ ಪಿಸಿ ಕೊಪ್ಪಳ ಗ್ರಾಮೀಣ ಪೊಲೀನ್ ಠಾಣೆ ಅನಿಲ್ ಪಿಸಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ. ತಾಜುದ್ದೀನ್ ಪಿಸಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ. ಖಾಜಾನಾಬ್ ಹೆಚ್ ಸಿ ಕೊಪ್ಪಳ ನಗರ ಪೊಲೀಸ್ ಠಾಣೆ. ದೇವೇಂದ್ರ ಪಿಸಿ ಕೊಪ್ಪಳ ನಗರ ಪೊಲೀಸ್ ಠಾಣೆ ಕೋಟೇಶ ಹೆಚ್.ಸಿ. ಸಿ.ಡಿ.ಆರ್ ಘಟಕ ಕೊಪ್ಪಳ, ರಾಯನಗೌಡ ಎಪಿಸಿ ರವರನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು.

ತಂಡ ಮಾಹಿತಿಯನ್ನು ಸಂಗ್ರಹಿಸಿ ದಿನಾಂಕ: 26 ರಂದು ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ಸದರಿ ತಂಡದೊಂದಿಗೆ ದಾಳಿ ಮಾಡಲಾಗಿ ಗಂಗಾವತಿಯ ರಾಯಚೂರು ರಸ್ತೆಯಲ್ಲಿ ಬರುವ ರಾಣಾ ಪ್ರತಾಪ ಸಿಂಗ್ ಸರ್ಕಲ್ ಹತ್ತಿರ ಬಿಳಿ ಕಾರಿನಲ್ಲಿ ಹುಬ್ಬಳ್ಳಿ ರಸ್ತೆಯ ಕಡೆಗೆ ಹೊರಟಿದ್ದ 03 ಜನರ ಆರೋಪಿತರ ಬಗ್ಗೆ ಸಂಶಯ ಬಂದು ಕಾರನ್ನು ನಿಲ್ಲಿಸಲು ಸೂಚಿಸಿದಾಗ್ಯೂ ಸಹ ಅರೋಪಿತರು ತಮ್ಮ ಕಾರನ್ನು ನಿಲ್ಲಿನದೇ ಜೋರಾಗಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಆರೋಪಿತರ ಕಾರಿಗೆ ಬೆನ್ನುಹತ್ತಿ 01) ಹುನೇನಭಾಷ @ ನಲಿಂ ತಂದೆ ಇಮಾಮನಾಟ ನುಳಕಲ್ ವಯಾ 32 ವರ್ಷ, ನಾ ಹಿರೇ ಜಂತಗಲ್ 2) ಶಿವಮೂರ್ತಿ ಮೂರ್ತಿ, ತಾಯಿ ಹನುಮಮ್ಮ ವಯಾ 30 ವರ್ಷ, ನಾ. ಹೆಚ್.ಆರ್.ಎನ್. ಕಾಲೋನಿ ಗಂಗಾವತಿ, 03] ಉದಯ ಸಿಂಗ್ @ ಉದಯ ತಂದೆ ಮೋಹನಸಿಂಗ್ ವಯಾ 34 ವರ್ಷ ನಾ. ಕಟರಾಂಪೂರ, ತಾ ಹೊಸಪೇಟೆ, ಹಾವ, ಗಂಗಾವತಿ. ಇವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಂತರ 27 ರಂದು ಬೆಳಗಿನ ಜಾವ 4-00 ಗಂಟೆಯ ಸುಮಾರಿಗೆ ಕೊಪ್ಪಳದ ಗಿಣಿಗೇರಾ ಹೈವೇ ಬೈಪಾ ಹತ್ತಿರ ಆಪಾದಿತರಾದ 04) ಹನುಮೇಶ ತಂದೆ ಕರಿಯಪ್ಪ ಅಂಗಜಾಲ, ವಯಾ 33 ವರ್ಷ, ಸಾ: ಡಾಣಾಪೂರು, ತಾ: ಗಂಗಾವತಿ, 05] ಹುಸೇನಬಾಷ @ ಬಾಷ ತಂದೆ ಅಬ್ದುಲ್ ಕರೀಂಸಾಬ, ವಯಾ 32 ವರ್ಷ, ಸಾ: ಹಿರೇ ಜಂತಗಲ್, 06] ಹೃದ್ವೀರಾಜ @ ಫ್ರದ್ವೀ ತಂದೆ ಶಂಕ್ರಯ್ಯ ಹಿರೇಮಠ, ವಯಾ 29 ವರ್ಷ, ಸಾ: ವಿರುಪಾಪೂರು, ತಾ: ಗಂಗಾವತಿ. ಇವರನ್ನು ವಶಕ್ಕೆ ಪಡೆದುಕೊಂಡಿದ್ದು ಮುಂದಿನ ಕಾನೂನು ಕ್ರಮ ಜರುಗಿಸುವ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ಸಿಕ್ಕಿಬಿದ್ದ ಅಪಾದಿತರಿಂದ ಒಟ್ಟು ನಗದು 1732000-00 ರೂಪಾಯಿಗಳು ಮತ್ತು ಕೃತ್ಯಕ್ಕೆ ಬಳಸಿದ 2 ಕಾರು ಅಂ.ಕಿ-10 ಲಕ್ಷ ರೂ. 1 ಮೋಟಾರ ಸೈಕಲ್ ಅಂ.ಕಿ-20,000/-ರೂ, 1 ದೊಡ್ಡ ಚಾಕು, ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!