WhatsApp Image 2024-05-18 at 6.58.01 PM

ಉಚಿತ ನೇತ್ರ ತಪಾಸಣಾ ಶಸ್ತ್ರ ಚಿಕಿತ್ಸೆ ಶಿಬಿರ ಕಣ್ಣು ಬಹು ಅಮೂಲ್ಯ 

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 18- ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ಕರೂರಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂದತ್ವ ನಿಯಂತ್ರಣ ಕಾರ್ಯಕ್ರಮ ವಿಭಾಗ ಬಳ್ಳಾರಿ ದತ್ವ ಮುಕ್ತ ಬಳ್ಳಾರಿ ಅಭಿಯಾನ ಎನ್‌ ಎಂ‌ ಡಿ ಸಿ ಎಸ್ ಆರ್ ಅನುದಾನದಡಿಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಿರುಗುಪ್ಪ ಶ್ರೀ ಕಂಚಿ ಕಾಮ ಕೋಟಿ ಮೆಡಿಕಲ್ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಯಿತು

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ. ಬಾಲಾಜಿ ರವರು ಕಣ್ಣು ಬಹು ಅಮೂಲ್ಯ ಅಂಗ ಅದರ ರಕ್ಷಣೆ ಅನಿವಾರ್ಯ. ಕಣ್ಣಿಗೆ ತೊಂದರೆ ಬಂದಲ್ಲಿ ಇಂತಹ ಶಿಬಿರಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಏ ಇರುವ ಪಪಾಯಿ, ಮೋಸಂಬಿ, ಆರೆಂಜ್ , ಕ್ಯಾರೆಟ್ ಮೊದಲಾದ ಹಣ್ಣು ಹಂಪಲು, ಹಸಿರು ಸೊಪ್ಪು ತಿನ್ನಬೇಕು.

ಬಿಸಿಲಿನಿಂದ, ತೀವ್ರ ಬೆಳಕಿನಿಂದ ರಕ್ಷಣೆಗೆ ಕಪ್ಪು, ತಂಪು ಕನ್ನಡಕ ಬಳಸುವುದು.
ವಿಪರೀತ ಟಿವಿ ಮೊಬೈಲ್ ಕಂಪ್ಯೂಟರ್ ಬಳಕೆಯಿಂದ ಕಾರ್ನಿಯಾ ಹಾಳಾಗುವ ಸಂಭವವಿದೆ. ಮಕ್ಕಳನ್ನು ಇವುಗಳಿಂದ ದೂರವಿರಿಸಲು ಮಾಹಿತಿ ನೀಡಿದರು.

ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗದ ಆರೋಗ್ಯ ಸಿಬ್ಬಂದಿಯು ತಪಾಸಣೆಗೆ ಆಗಮಿಸಿದ ಜನರಿಗೆ ಮಧುಮೇಹ ಅಧಿಕ ರಕ್ತದೊತ್ತಡ ಪರೀಕ್ಷಿಸಿ ಕಣ್ಣಿನ ಪರಿಶೀಲನೆ ನಡೆಸಿ ಶಸ್ತ್ರ ಚಿಕಿತ್ಸೆಗೆ ಅರ್ಹರಾದ ಫಲಾನುಭವಿಗಳನ್ನು ಗುರುತಿಸಿದರು.

ಕಣ್ಣಿನ ಆಸ್ಪತ್ರೆ ಡಾಕ್ಟರ್ ಅಮೃತ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯಂಕಪ್ಪ , ಫಾರ್ಮಸಿಯ ಆಫೀಸರ್ ಬಾಲಪ್ಪ, ಅಫ್ತಾಮಲಾಜಿಸ್ಟ ವರಲಕ್ಷ್ಮಿ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಸಮುದಾಯ ಆರೋಗ್ಯ ಅಧಿಕಾರಿಗಳು ಕಿರಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!