
ಉದ್ಯೋಗ ಜಾಗೃತಿಯ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 1- ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಥಾನೀಕರಣ ಕೋಶದ ವತಿಯಿಂದ ಬಿ.ಎ, ಬಿ.ಕಾಂ, ಬಿ ಎಸ್ಸಿ ಹಾಗೂ ಬಿ. ಬಿ. ಎ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಜಾಗೃತಿಯ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಸ್ಥಾನೀಕರಣ ಕೋಶದ ಸಂಚಾಲಕರು ಹಾಗೂ ಬಿ ಬಿ.ಎ ವಿಭಾಗದ ಮುಖ್ಯಸ್ಥರು ಆದ ಶಿವನಾಥ್ ಇ ಜಿ ಇವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಂಧ್ರಪ್ರದೇಶದ ನಂದ್ಯಾಲ್ ನಲ್ಲಿನ ಗುರು ರಾಘವೇಂದ್ರ ಕೋಚಿಂಗ್ ಸೆಂಟರ್ ನ ಪಿ.ದಸ್ತಗಿರಿ ರೆಡ್ಡಿ ಆಗಮಿಸಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಉದ್ಯೋಗಗಳ ಬಗ್ಗೆ ಅರಿವನ್ನು ತಂದುಕೊಟ್ಟರು.
ಪ್ರಾಂಶುಪಾಲರಾದ ತಿಮ್ಮಾರೆಡ್ಡಿ ಮೇಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದವಿ ವಿದ್ಯಾರ್ಥಿಗಳಿದ್ದರು.