62a3ed44-53bf-4158-ad4f-fea46b211bd8

ಒನಕೆ ಓಬವ್ವನ ಉತ್ಸವ

ಪೂರ್ವಭಾವಿ ಸಭೆ

ಕರುನಾಡ ಬೆಳಗು ಸುದ್ದಿ

ಕೂಡ್ಲಿಗಿ (ವಿಜಯನಗರ) ಫೆ.19 : ತಾಲೂಕಿನ ಒನಕೆ ಓಬವ್ವನ ತವರೂರಾದ ಗುಡೇಕೋಟೆ ಹೋಬಳಿಯಲ್ಲಿ ಒನಕೆ ಓಬವ್ವನ ಉತ್ಸವ ಕುರಿತು ಪೂರ್ವ ಭಾವಿ ಸಭೆಯು ಶಾಸಕರ ನೇತೃತ್ವದಲ್ಲಿ ನಡೆಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಉತ್ಸವವನ್ನ ಯಶಸ್ವಿಯಾಗವುದಕ್ಕೆ ಶಾಸಕ ಡಾ. ಶ್ರೀನಿವಾಸ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಉತ್ಸವವನ್ನ ಸರ್ಕಾರದಿಂದಲೇ ಫೆಬ್ರವರಿ 24 ರಿಂದ 25 ರವರೆಗೆ, ಎರೆಡು ದಿನಗಳ ಕಾಲ ಅದ್ದೂರಿಯಾಗಿ ಪಕ್ಷಾತೀತವಾಗಿ, ಜಾತ್ಯತೀತವಾಗಿ, ಆಚರಿಸಲಾಗುವುದು ಹಾಗಾಗಿ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ನಾನು ಗುಡೇಕೋಟೆಯ ಒನಕೆ ಓಬವ್ವ ಉತ್ಸವವನ್ನು ಸರ್ಕಾರದಿಂದ ಆಚರಣೆಮಾಡಲು, ಚುನಾವಣೆ ಪೂರ್ವದಲ್ಲಿ ಮತದಾರರಲ್ಲಿ ಕೇಳಿಕೊಂಡಿದ್ದೆ. ನನಗೆ ಶಾಸಕನಾಗಿ ಆರ್ಶಿವಾದ ಮಾಡಿದ್ದಾರೆ. ಹಾಗಾಗಿ ಉತ್ಸವವನ್ನ ಸರ್ಕಾರದಿಂದ ಆಚರಿಸಲು ಕ್ರಮ ಕೈಗೊಂಡಿದ್ದು , ಜನತೆಗೆ ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದೇನೆ.

ಉತ್ಸವ ಮಾಡಲು ಮಾನ್ಯ ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪ ಮಾಡಿ ಒಪ್ಪಿಗೆ ಪಡೆದು ಸರ್ಕಾರದಿಂದ 30 ಲಕ್ಷ ರೂಪಾಯಿ ಮಂಜೂರು ಮಾಡಿಸಿದ್ದೇನೆ, ಉತ್ಸವ ಅಧಿಕೃತ ಸರ್ಕಾರಿ ಕಾರ್ಯಕ್ರಮವಾಗಿದ್ದು. ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ರವಾನಿಸಬೇಕು. ರಾಜ್ಯದಲ್ಲಿ ವಿಶೇಷತೆಯಿಂದ ಕೂಡಿದ ಉತ್ಸವ ಇದಾಗಬೇಕು.

ಉತ್ಸವ ಯಶಸ್ವಿಯಾಗಲು ಎಲ್ಲರ ಸಹಕಾರ ಅತ್ಯಗತ್ಯ , ಅಧಿಕಾರಿಗಳು ನಿಮ್ಮ ಜವಾಬ್ದಾರಿಯನ್ನು ಅರಿತು ಅಚ್ಚುಕಟ್ಟಾಗಿ ನಿಭಾಯಿಸಿ, ಸ್ಥಳೀಯ ಕಲಾವಿದರಿಗೆ ಮೊದಲನೇ ಆದ್ಯತೆಯನ್ನ ನೀಡಲಾಗುವುದು. ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿ ,ಸಂಭಾವನೆ, ಕಲಾ ತಂಡಗಳ ಸಂಖ್ಯೆ, ಕಲಾ ತಂಡದವರಿಗೆ ವಸತಿ ,ಊಟ ವ್ಯವಸ್ಥೆಗೆ ಕ್ರಮವಹಿಸಿ, ಸಾರ್ವಜನಿಕರು ಭಾಗವಹಿಸುವುದರಿಂದ ಕುಡಿಯುವ ನೀರು, ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಪಾಲಿಸಿ, ಉತ್ಸವದಲ್ಲಿ ಯಾವುದೇ ಕೊರತೆ, ಗೊಂದಲ ,ಅನಾನುಕೂಲ ಆಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂಧರ್ಭದಲ್ಲಿ ತಹಸೀಲ್ದಾರ್ ರಾಜು ಪಿರಂಗಿ, ಕನ್ನಡ ಸಂಸ್ಕೃತ ಇಲಾಖೆಯ ಸಿದ್ದಲಿಂಗಪ್ಪ ರಂಗಣ್ಣನವರು, ಸಿಪಿಐ ತಳವಾರ್ ಸುರೇಶ್,ಕೆ, ರಾಘವೇಂದ್ರ ರಾವ್, ಗುಡೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಕೃಷ್ಣ, ಶಿವರಾಜ್ ವರ್ಮ, ವಿಶಾಲಾಕ್ಷಿ ರಾಜಣ್ಣ, ಕಾಟೀರ್ ಹಾಲೇಶ್,ಟಿ. ಉಮೇಶ್,ಕೋಗಳಿ ಕೊಟ್ರೇಶ್, ಬ್ಯಾಳಿ ಶಿವಪ್ರಸಾದ್,ಮಾರಪ್ಪ,ಜೆ. ಶಿವಕುಮಾರ್, ನಾಗರಾಜ್ ಕೊಟ್ರಪ್ಪನವರ, ಗ್ರಾ.ಪಂ. ಸ.ಪೇಟ್ ತಿಪ್ಪೇಸ್ವಾಮಿ, ಗ್ರಾ.ಪಂ. ಸ.ಬೊಮ್ಮಣ್ಣ, ಜೆ.ನಾಗೇಶ್,ಜಿಲ್ಲಾನ್,ಉಮೇಶ್ ನಾಯ್ಕ್,ಅಮನುಲ್ಲಾ,ತಿಂದಪ್ಪ,ಕೊಟ್ರೇಶ್,ಇನ್ನು ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!