
ಕಟ್ಟಡ ಕಾರ್ಮಿಕರಿಂದ ಅ.30ಕ್ಕೆ ಪ್ರತಿಭಟನಾ ಧರಣಿ
- ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28 – ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಘಟಕದ ಕರೆಯ ಮೇರೆಗೆ ಅಕ್ಟೋಬರ್ 30 ರಂದು ಸೋಮವಾರ ಬೆಳಿಗ್ಗೆ 10.00 ಗಂಟೆಗೆ ಜಿಲ್ಲಾ ಆಡಳಿತ ಭವನದ ಮುಂದೆ ಪ್ರತಿಭಟನಾ ಧರಣಿ ನಡೆಸಲು ನಿರ್ಧರಿಸಿದ್ದಾರೆ.
ಭಾಗ್ಯನಗರದ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಹಾಗೂ ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ. ರಿ (ಎಐಟಿಯುಸಿ ಸಂಯೋಜಿತ) ದ ಕಾರ್ಯಾಲಯದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘವು ನಿರಂತರ ಹೋರಾಟ ಹಾಗೂ ಸತತ ಆಗಿನ ಸಚಿವರ. ಅಧಿಕಾರಿಗಳಿಗೆ ಮನವರಿಕೆ ಮಾಡಿದರ ಪರಿಣಾಮವಾಗಿ 2007ರ ಜನವರಿಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಪ್ರಾರಂಭಗೊಂಡಿದೆ.
ಕಟ್ಟಡ ಕಾರ್ಮಿಕರಿಗೆ ಸೌಲಭ್ಯದ ಹಣ ನೇರವಾಗಿ ಖಾತೆಗೆ ಜಮಾ ಆಗುತಿರುವುದರಿಂದ ತಮಗೆ ಯಾವುದೇ ಲಾಭವಿಲ್ಲ ವೆಂದು ಈ ಹಿಂದಿನ ರಾಜ್ಯ ಸರ್ಕಾರದ ಕಾರ್ಮಿಕ ಸಚಿವರು ವಿವಿಧ ಕಿಟ್ ಗಳ ಹೆಸರಿನಲ್ಲಿ ಕೋಟ್ಯಂತರ ಹಗರಣ ಮಾಡಿದ್ದಾರೆ. ಅನೇಕ ಹೋರಾಟಗಳನ್ನು ಮಾಡಿದರೂ ಬಿಡದೆ ತನ್ನ ಭ್ರಷ್ಟಾಚಾರ ಮುಂದುವರಿಸಿದ್ದರು. ಕಟ್ಟಡ ಕಾರ್ಮಿಕರು ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ತಂದರು. ಈಗಿನ ಕಾರ್ಮಿಕ ಸಚಿವರು ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ ಶಿಪ್ ಹಣ ಬಿಡುಗಡೆ ಮಾಡದೆ. ಅನಗತ್ಯವಾಗಿ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಗೆಂದು ಕೋಟ್ಯಂತರ ರೂಪಾಯಿ ಮಂಜೂರು ಮಾಡುತ್ತಿರುವುದು. ಆಗಿನ ಸರ್ಕಾರದ ಬಹುಕೋಟಿ ಹಗರಣ ನ್ಯಾಯಾಂಗ ತನಿಖೆಗೆ ಒಪ್ಪಿಸದ ಇರೋದನ್ನು ನೋಡಿದರೆ ಹಿಂದಿನ ಕಾರ್ಮಿಕ ಸಚಿವರ ಜೊತೆ ಹೊಂದಾಣಿಕೆ ಮಾಡಿಕೊಂಡಂತೆ ಕಾಣುತ್ತಿದೆ. ತಾನು ನಡೆಸಿದ ಭ್ರಷ್ಟಾಚಾರದಿಂದ ಬಚಾವಾಗಲು ಮಾಜಿ ಕಾರ್ಮಿಕ ಸಚಿವರು ಕಾಂಗ್ರೆಸ್ ಪಕ್ಷ ಸೇರಬಹುದು ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಸಮಿತಿ ಸದಸ್ಯ ಹುಲುಗಪ್ಪ ಅಕ್ಕಿ ರೊಟ್ಟಿ ಮಾತನಾಡಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣ ಪೋಲು ಮಾಡುವುದನ್ನು ತಡೆಯಲು ಹಾಗೂ ಮಂಡಳಿ ಉಳಿಸಿಕೊಳ್ಳಲು ಅಕ್ಟೋಬರ್ 30 ರಂದು ಸೋಮವಾರ ಹೋರಾಟ ನಡೆಯಲಿದೆ ಎಂದು ಹೇಳಿದರು.
ಭಾಗ್ಯನಗರದ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಹಾಗೂ ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ ರಿ.(ಎಐಟಿಯುಸಿ ಸಂಯೋಜಿತ)ದ ಉಪಾಧ್ಯಕ್ಷ ತುಕಾರಾಮ ಬಿ. ಪಾತ್ರೋಟಿ ಮಾತನಾಡಿ ಎಲ್ಲಾ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರು ಹೋರಾಟದಲ್ಲಿ ಭಾಗವಹಿಸಲು ಶ್ರಮಿಸುವಂತೆ ಕೋರಿದರು.
ಪೂರ್ವ ಭಾವಿ ಸಭೆ ಅಧ್ಯಕ್ಷತೆ ವಹಿಸಿದ್ದ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಹಾಗೂ ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ. ರಿ.(ಎಐಟಿಯುಸಿ ಸಂಯೋಜಿತ)ದ ಅಧ್ಯಕ್ಷ ಮೌಲಾ ಸಾಬ್ ಕಪಾಲಿ ಮಾತನಾಡಿ ಕಟ್ಟಡ ಕಾರ್ಮಿಕರ ಪರವಾಗಿ ನ್ಯಾಯ ಕೊಡಿಸುವ ಹೋರಾಟಕ್ಕೆ ಹೆಚ್ಚಿನ ಕಟ್ಟಡ ಕಾರ್ಮಿಕರು ಸೇರಬೇಕೆಂದು ಕರೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಸಂಘಟನೆ ಮುಖಂಡರಾದ ಮಂಜುನಾಥ್ ವಡ್ಡರ್. ಜಗದೀಶ್ ಕಟ್ಟಿಮನಿ. ಅಶೋಕ್ ಭಾವಿಮನಿ. ಗೈಬು ಸಾಬ್ ಮಾಳೆಕೊಪ್ಪ ಮೇಸ್ತ್ರಿ. ಅಮೀರ್ ಬಾಷಾ. ಹನುಮಂತಪ್ಪ ವಡ್ಡರ್. ಶೇಖಪ್ಪ ವಡ್ಡರ್. ಯಲ್ಲಪ್ಪ ಬೆದವಟ್ಟಿ. ಜಾಫರ್ ಕುರಿ ಮೇಸ್ತ್ರಿ ಮುಂತಾದವರು ಉಪಸ್ಥಿತರಿದ್ದರು.