2c136fae-be38-4577-97e1-318669006cc9

ಕನಕಗಿರಿ ಪ.ಪಂ : ಆಸ್ತಿ ಮಾಲೀಕರಿಂದ ಅರ್ಜಿ ಆಹ್ವಾನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 19- ಕನಕಗಿರಿ ಪಟ್ಟಣದಲ್ಲಿನ ನಿವೇಶನ ರಹಿತ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಖಾಸಗಿಯವರಿಂದ 10 ಎಕರೆ ಜಮೀನು ಖರೀದಿಸುವ ಅವಶ್ಯಕತೆ ಇದ್ದು, ಪಟ್ಟಣ ವ್ಯಾಪ್ತಿಯಲ್ಲಿ ಜಮೀನು ಹೊಂದಿರುವ ಆಸ್ತಿ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪಕ್ಕಾ ದಾಖಲೆಗಳನ್ನು ಹೊಂದಿರುವ ಆಸಕ್ತ ಜಮೀನು ಮಾಲೀಕರು ಜೂನ್ 29 ರೊಳಗಾಗಿ ಪಟ್ಟಣ ಪಂಚಾಯತಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಪಟ್ಟಣ ಪಂಚಾಯತಿ ಆಡಳಿತಾಧಿಕಾರಿಗಳು ಹಾಗೂ ಮುಖ್ಯಾಧಿಕಾರಿಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!