- 💐ಕರುನಾಡು💐
——-///—–
ಸಾವಿರಾರು ವರ್ಷಗಳ ಇತಿಹಾಸ ಹೊಂದಿ
ದ್ರಾವಿಡ ಭಾಷೆಯಲ್ಲಿ ಒಂದಾದ.
ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆ ಕನ್ನಡ
ನಮ್ಮ ಹೆಮ್ಮೆಯ ನಾಡು ಕರುನಾಡು! (೧))
ಹಲವು ರೂಪದ ಸಾಹಿತ್ಯದ ಸಂಪು
ಹಲವು ಶಿಲ್ಪಕಲೆಗಳ ತಂಪು.
ನವರಸಗಳ ನಾಟ್ಯದ ಕಂಪು
ಕರ್ನಾಟಕದ ಸಂಗೀತದ ಇಂಪು.
ಸವಿಯನು ನೀಡುವ ನಾಡು!
ನಮ್ಮ ಹೆಮ್ಮೆಯ ನಾಡು ಕರುನಾಡು!!(೨)
ಕಾವೇರಿ ನೀರು ಕಡಲ ತೀರ ನಾಡು
ಸಹ್ಯಾದ್ರಿ ಬೆಟ್ಟದಿ ಕುಣಿಯುವ ನಾಡು.
ಗಂಧದ ಕಾಡಿನಲ್ಲಿ ನಲಿಯುವ ನಾಡು
ಚಿನ್ನವ ಧರಿಸಿ ಚಂದದಿ ನಗುವ ನಾಡು!
ನಮ್ಮ ಹೆಮ್ಮೆಯ ನಾಡು ಕರುನಾಡು!! (೩)
ಕದಂಬರು ಗಂಗರು ಆಳಿದ ನಾಡು
ರತ್ನತ್ರಯರನು ಪಡೆದ ನಾಡು.
ರಾಜ ಮಹಾರಾಜರಾಳಿದ ನಾಡು
ದಾಸ ಶರಣರನ್ನು ಕಂಡ ನಾಡು!
ನಮ್ಮ ಹೆಮ್ಮೆಯ ನಾಡು ಕರುನಾಡು!! (೪)
ನಾಡಿನ ಎಲ್ಲಾ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ
ಹಾರ್ದಿಕ ಶುಭಾಶಯಗಳು💐💐💐💐💐💐💐
ನೋಡಲೇರಡು ಕಣ್ಣು ಸಾಲದು
ಗದಗಿನ ಕನ್ನಡಮ್ಮನ ವೈಭವ
ಕನ್ನಡ ರಾಜ್ಯೋತ್ಸವದ ಸುವರ್ಣ ಸಂಭ್ರಮ
ಕರುನಾಡಿನಲ್ಲಿ ಹುಟ್ಟುದ್ದು ಜನ್ಮ ಸಾರ್ಥಕವಾಯಿತು
ಆ ಎಲ್ಲಾ ಸುವರ್ಣ ಕರ್ನಾಟಕ ರಾಜ್ಯೋತ್ಸವನ್ನು ಆಚರಿಸಿದ ಸವೀಕ್ಷಣಗಳು ತಮ್ಮೊಂದಿಗೆ
ಬನ್ನಿ ಕನ್ನಡ ಉಳಿಸೋಣ
ಕನ್ನಡ ಬೆಳೆಸೋಣ
ಕನ್ನಡವೇ ಜನನ
ಕನ್ನಡವೇ ಮರಣ
ಮತ್ತೊಮ್ಮೆ ಮಗದೊಮ್ಮೆ ಸರ್ವ ಸವಿ ಕನ್ನಡ ಹೃದಯಿಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
💐💐💐💐💐💐💐💐💐💐💐💐💐💐💐
ರಚನೆ: ಈರಮ್ಮ.ಪಿ.ಕುಂದಗೋಳ