WhatsApp Image 2024-05-25 at 5.28.02 PM

ಕರ್ನಾಟಕ ವಿಧಾನ ಪರಿಷತ್ ಇಬ್ಬರು ಅಲ್ಪಸಂಖ್ಯಾತರಿಗೆ ಅವಕಾಶ ನೀಡಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 25- ಕರ್ನಾಟಕ ರಾಜ್ಯ ವಿಧಾನಸಭೆಯಿಂದ ಕರ್ನಾಟಕ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಇಬ್ಬರು ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕು ಇದರಲ್ಲಿ ಕಾಂಗ್ರೆಸ್ ನಾಯಕ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಅವಕಾಶ ಕಲ್ಪಿಸಬೇಕು.

ಈ ಬಗ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು ಡಾ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಸಚಿವರಾದ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ರಾಜ್ಯಸಭಾ ಸಂಸದ್ ಡಾ ಸೈಯದ್ ನಾಸೀರ್ ಹುಸೇನ್ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಸಾಬ್ ಶಾಸಕರಾದ ಖನೀಜ್ ಫಾತಿಮಾ ತನ್ವೀರ್ ಸೇಟ್ ಸೆಂಟ್ರಲ್ ಲೋಕಸಭಾ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮತ್ತಿತರ ಕಾಂಗ್ರೆಸ್ ನಾಯಕರು ವಿಧಾನ ಸಭಾ ಸದಸ್ಯರಿಂದ ಆಯ್ಕೆಗಾಗಿ 11 ವಿಧಾನ ಪರಿಷತ್ ಸದಸ್ಯರ ಅವಧಿ ಜೂನ್ 17ರಂದು ಮುಗಿಯಲಿದೆ ಅದಕ್ಕಾಗಿ ಚುನಾವಣೆ ಘೋಷಣೆ ಯಾಗಿದೆ.

ಈ ಸ್ಥಾನಗಳ ಪೈಕಿ 7 ಸ್ಥಾನಗಳು ಕಾಂಗ್ರೆಸ್ ಗೆ ಲಭ್ಯವಾಗಲಿ ಅದರಲ್ಲಿ ಇಬ್ಬರು ಅಲ್ಪಸಂಖ್ಯಾತರಲ್ಲಿ ಅನ್ಸಾರಿ ಇಕ್ಬಾಲ್ ಅವರಿಗೂ ಅವಕಾಶ ನೀಡಬೇಕು ಸದ್ಯ ಕರ್ನಾಟಕ ವಿಧಾನ ಪರಿಷತ್ ಗೆ ನಾಮ ನಿರ್ದೇಶನಕ್ಕೆ ಕೇಳಿ ಬರುತ್ತಿರುವ ಹೆಸರುಗಳಲ್ಲಿ ಒಬ್ಬರು ಅಲ್ಪಸಂಖ್ಯಾತರ ಹೆಸರುಗಳಿಲ್ಲ ಆದರೆ ಕಳೆದ ವಿಧಾನಸಭಾ ಚುನಾವಣೆ ಮತ್ತು ಈಗಿನ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಒಮ್ಮತದಿಂದ ಬೆಂಬಲ ಸೂಚಿಸಿದ್ದಾರೆ ಹೀಗಾಗಿ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷವು ಅವಕಾಶ ನೀಡಬೇಕು.

ಜನಪರ ಚಿಂತಕರು ಶಿಕ್ಷಣ ಪ್ರೇಮಿ ಸೈಯದ್ ಮೋಹಿಯುದ್ದೀನ್ ಖಾದ್ರಿ ಸಾಹೇಬ್ ಅವರ ನೇತೃತ್ವದಲ್ಲಿ ಹಾಜಿ ಅಬ್ದುಲ್ ನಬಿ ಹಾಜಿ ಹಂಡಿ ಹುಸೇನ್ ಭಾಷಾ ಡಾ ಮೊಹಮ್ಮದ್ ಅಲಿ ಖತೀಬ್ ಜಹೀರುದ್ದೀನ್ ಬಾಬು ಹಾಜಿ ಅಬ್ದುಲ್ ಹಮೀದ್ ಫಾರುಕೀ ಡಬಲ್ ಬಾಂಡ್ ಹಾಜಿ ಟಿಜಿ ಅಬ್ದುಲ್ ಗನಿ ಚಿಟಗಿ ಹುಸೇನ್ ಭಾಷಾ ಅಡ್ವಕೇಟ್ ಎ ಎಸ್ ಅಮೀರ್ ಭಾಷಾ ಮುಲ್ಲಾ ಬಾಬು ಅವರ ಮಕ್ಕಳು ಮುಲ್ಲಾ ದಾದಾ ಖಲಂದರ್ ಮುಲ್ಲಾ ಕಲೀಂ ಹಂಡಿ ಹಾಶೀಂ ಮೀರ್ ಹುಸೇನ್ ಮಿಂತಿ ಟಿ ಮೊಹಮ್ಮದ್ ಶಫಿ ಟಿ ನಜೀರ್ ಮೋದಿನ್ ಹಾಜಿ ಚೌದ್ರಿ ಖಾಜಾ ಸಾಬ್ ಹಾಜಿ ದೇಶನೂರ್ ಅಬ್ದುಲ್ ಗಫೂರ್ ಬಿ ಕೆ ಅಲ್ಲಾಭಕ್ಷಿ ಮತ್ತಿತರ ಗಣ್ಯರು ಒತ್ತಾಯಿಸಿ ಮನವಿ ಮಾಡಿದ್ದಾರೆ .

Leave a Reply

Your email address will not be published. Required fields are marked *

error: Content is protected !!