WhatsApp Image 2025-03-07 at 6.17.12 PM

ಕಳುವಾದ ಮೊಬೈಲ್ ವಾರಸುದಾರರಿಗೆ ವಾಪಸ್

 ಎಸ್ಪಿ ಶ್ರೀ ಹರಿಬಾಬು ಶ್ಲಾಘನೆ

ಕರುನಾಡ ಬೆಳಗು ಸುದ್ದಿ

ಹೊಸಪೇಟೆ , 07-  ಹೊಸಪೇಟೆ ಉಪ ವಿಭಾಗದ ಸರಹದ್ದಿನಲ್ಲಿ ಸಾರ್ವಜನಿಕರು ಕಳೆದು ಕೊಂಡ ಮೊಬೈಲ್ ಗಳನ್ನು ಪತ್ತೆ ಹಚ್ಚಿ ಅವುಗಳನ್ನು ದೂರುದಾರರಿಗೆ ವಾಪಾಸು ಕೊಡುವಲ್ಲಿ ಶ್ರಮವಹಿಸಿದ ಎಲ್ಲಾ ಸಿಬ್ಬಂದಿಗಳನ್ನು ಜಿಲ್ಲಾ ಎಸ್ಪಿ ಶ್ರೀ ಹರಿಬಾಬು ಶ್ಲಾಘಿಸಿದರು.

ಅವರು ಇಂದು ಸಂಡೂರು ರಸ್ತೆಯಲ್ಲಿರುವ ಡಿವೈಎಸ್ಪಿ ಕಚೇರಿಯಲ್ಲಿ ಮೊಬೈಲ್ ಕಳೆದು ಕೊಂಡು ದೂರು ನೀಡಿದ್ದ ಎಲ್ಲರನ್ನು ಕರೆಧು ಸಂಭಂದಿಸಿದ ವರಿಗೆ ಮೊಬೈಲ್ ಗಳನ್ನ ಮರಳಿಸಿದರು. ಹೊಸಪೇಟೆ ಯ ಉಪವಿಭಾಗ ಗಳಾದ ಬಡಾವಣೆ ಠಾಣೆ, ಪಟ್ಟಣ ಠಾಣೆ, ಗ್ರಾಮೀಣ ಠಾಣೆ. ಚಿತ್ ವಾಡ್ಗಿ ಠಾಣೆ, ಕಮಲಾಪುರ,ಹಂಪಿ ಪ್ರವಾಸ ಠಾಣೆ, ಟಿ.ಬಿ.ಡ್ಯಾಂ ಠಾಣೆ, ಗಳಲ್ಲಿ ಕಳುವಾದ ಅಂದಾಜು _2 ಲಕ್ಷ ಕ್ಕೂಅಧಿಕ ಮೌಲ್ಯದ 123 ಮೊಬೈಲ್ ಗಳನ್ನು ,ಪತ್ತೆ ಹಚ್ಚಿ, ‌ವಾರಸುದಾರರಿಗೆ ಹಿಂದಿರುಗಿಸಿದರು. ಈ ವಿಭಾಗದಲ್ಲಿ ಕಳುವಾದ ಮೊಬೈಲ್ ಗಳು ಹೊರ ರಾಜ್ಯಗಳಾದ ಅಸ್ಸಾಂ, ಬಿಹಾರ, ಜಾರ್ಖಂಡ್, ತೆಲಂಗಾಣ, ಆಂದ್ರಪ್ರದೇಶ, ಕೇರಳ,ಮಹಾರಾಷ್ಟ್ರ, ಮತ್ತು ಕರ್ನಾಟಕ ದ ವಿವಿದ ಸ್ಥಳಗಳಲ್ಲಿ ಮಾರಾಟವಾಗಿದ್ದವುಗಳನ್ನು ಪತ್ತೆ ಹಚ್ಚಿದ ತಮ್ಮ ಸಿಬ್ಬಂದಿ ಗಳಾದ ಪಿ.ಎಸ್. ಐ.ವಿರುಪಾಕ್ಷ, ಮಹಿಳಾ ಪಿ.ಸಿ ಆರ್.ನಂದಿನಿ, ಸಿ ಡಿ ಆರ್ ಘಟಕದ ಕುಮಾರನಾಯ್ಕ, ಅವರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಎಎಸ್ಪಿ ಸಲೀಮ್ ಪಾಷಾ, ಡಿವೈಎಸ್ಪಿ ಮಂಜುನಾಥ ಮತ್ತು ಇತರ ಠಾಣೆಗಳ ಎಲ್ಲ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!