5

ಕಸಾಪದಿಂದ ಸರ್ವಾಧ್ಯಕ್ಷೆ ಮಾಲಾ ಬಡಿಗೇರ್ ಅವರಿಗೆ ಅಧಿಕೃತ ಆಹ್ವಾನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 05- ತಾಲೂಕಿನ ಹಲಗೇರಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿರುವ ಕೊಪ್ಪಳ ತಾಲೂಕಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಕವಯಿತ್ರಿ ಸಾಹಿತಿ ಮಾಲಾ ಬಡಿಗೇರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ತಾಲೂಕಾ, ಜಿಲ್ಲಾ ಘಟಕದಿಂದ ಅವರ ಮನೆಗೆ ತೆರಳಿ ಅಧಿಕೃತ ಆಹ್ವಾನ ನೀಡಲಾಯಿತು.

 

ಈ ಸಂದರ್ಭದಲ್ಲಿ ನಿಕಟಪೂರ್ವ ಸರ್ವಾಧ್ಯಕ್ಷರಾದ ಶರಣಪ್ಪ ಬಾಚಲಾಪೂರ ಅವರು ಮಾತನಾಡಿ ಮಾಲಾ ಬಡಿಗೇರ್ ಅವರ ಸಾಹಿತ್ಯ ಬಹು ಮೌಲ್ಯಯುತವಾಗಿವೆ. ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕಸಾಪ ಕೊಪ್ಪಳ ತಾಲೂಕಾ ಘಟಕದ ಅಧ್ಯಕ್ಷರಾದ ರಾಮಚಂದ್ರಗೌಡ ಬಿ ಗೊಂಡಬಾಳ ಅವರು ಮಾತನಾಡಿ ಕೊಪ್ಪಳ ತಾಲೂಕಾ ಸಮ್ಮೇಳನಗಳ ಆಯೋಜನೆಯಲ್ಲಿ ಈ ಸಲ ಎರಡನೇ ಬಾರಿಗೆ ಮಹಿಳಾ ಲೇಖಕಿಯರಿಗೆ ಅವಕಾಶ ಒದಗಿ ಬಂದಿದೆ ಎಂದು ತಿಳಿಸಿದರು.

ಅಲ್ಲಮಪ್ರಭು ಬೆಟ್ಟದೂರು, ಈಶ್ವರ ಹತ್ತಿ,, ಶಿ. ಕಾ. ಬಡಿಗೇರ್, ರಮೇಶ ಕುಲಕರ್ಣಿ, ಮುಂತಾದವರು ಮಾತನಾಡಿದರು. ನಂತರ ಕಸಾಪದಿಂದ ಗೌರವ ಸನ್ಮಾನ ಮಾಡುವುದರೊಂದಿಗೆ ಆಹ್ವಾನ ನೀಡಲಾಯಿತು. ರಮೇಶ ತುಪ್ಪದ, ಸೋಮನಗೌಡ ಹೊರಗನಾಳ, ಮಾರುತೇಶ ಅಂಗಡಿ ಮಂಜುನಾಥ ಅಂಗಡಿ, ಮಲ್ಲಿಕಾರ್ಜುನ ಹ್ಯಾಟಿ, ಗಿರೀಶ್ ಪಾನಘಂಟಿ, ರಾಜೇಶ ಯಾವಗಲ್, ಅನಿಲ ಬಾಚನಹಳ್ಳಿ, ಹುಲುಗಪ್ಪ ಕಟ್ಟಿಮನಿ, ಚನ್ನಬಸಪ್ಪ ಕಡ್ಡಿಪುಡಿ, ಶೇಖರಗೌಡ ಮಾಲಿ ಪಾಟೀಲ್, ಶರಣು ಡೊಳ್ಳಿನ, ಗೀತಾ ಚಕ್ಕಡಿಮಠ, ದಾನಪ್ಪ ಕವಲೂರು, ಶಿವಪ್ರಸಾದ್ ಹಾದಿಮನಿ, ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿವಕುಮಾರ ಕುಕನೂರು ಅವರು ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!