ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರು ಯುವಕರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 13- ರಾಷ್ಟ್ರೀಯ ಭಾರತೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರ ನಾಯಕತ್ವದ ರಾಹುಲ್ ಗಾಂಧಿ ಅವರ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮತ್ತು ಯುವಕರಿಗೆ ವಾರ್ಷಿಕ ತಲಾ ಒಂದು ಲಕ್ಷ ರೂಪಾಯಿ ನೀಡುವ ಗ್ಯಾರಂಟಿ ಯೋಜನೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಸಹಿ ಹಾಕಿದ್ದಾರೆ.
ಮಹಾಲಕ್ಷ್ಮಿ ಯುವ ನ್ಯಾಯ ಯೋಜನೆಗಳಲ್ಲದೆ ರೈತರ ಸಾಲ ಮನ್ನಾ ಮತ್ತು ಶ್ರಮಿಕ ನ್ಯಾಯ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಜಾರಿಗೊಳಿಸಿ ಬಡವರಿಗೆ ರೈತರಿಗೆ ಮತ್ತು ಶ್ರಮಿಕರಿಗೆ ನೆರವಾಗಲಿದೆ ಎಂದು ಅವರು ಮತದಾರರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರಿಗೆ ಬೆಂಬಲಿಸಿ ಕಾಂಗ್ರೆಸ್ ಗೆ ಮತ ಚಲಾಯಿಸಿ ಅಧಿಕಾರಕ್ಕೆ ತರಬೇಕು ಎಂದು ಅವರು ಸರ್ವರಲ್ಲಿ ವಿನಂತಿಸಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮತಯಾಚನೆಯಲ್ಲಿ ಸಿರುಗುಪ್ಪ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ತಾಲೂಕ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ ಮಾರುತಿ, ವರ ಪ್ರಸಾದ ರೆಡ್ಡಿ, ಗ್ರಾಮ ಪಂಚಾಯತ್ ಅಧ್ಯಕ್ಷ ಬಿ ನಾಗಮ್ಮ, ಸಣ್ಣ ಮುದುಕಪ್ಪ, ಉಪಾಧ್ಯಕ್ಷ ಶ್ರೀದೇವಿ, ನರಸಪ್ಪ, ಗ್ರಾಮ ಪಂಚಾಯತ್ ಸದಸ್ಯರು ಕಾಂಗ್ರೆಸ್ ಹಿರಿಯ ಮುಖಂಡ ಬಿ ಎಂ ಸತೀಶ್, ವೈ ರಾಮಸ್ವಾಮಿ, ಸಾಹುಕಾರ ಬೀರಳ್ಳಿ ಗೋವಿಂದ ರೆಡ್ಡಿ, ಸೈಯದ್ ಮೊಯಿದ್ದೀನ್ ಖಾದ್ರಿ, ಗೊರವರ ಶ್ರೀನಿವಾಸ್ ಕೊಡ್ಲೆ, ಮಲ್ಲಿಕಾರ್ಜುನ ಚಿಕ್ಕ ಬಳ್ಳಾರಿ, ಶ್ರೀ ನಿವಾಸ ರೆಡ್ಡಿ, ವಕೀಲ ಗಂಗಾರಾಮ ಸಿಂಗ್, ಬೀರಳ್ಳಿ ಮಲ್ಲಿಕಾರ್ಜುನ ರೆಡ್ಡಿ, ಚೊಕ್ಕ ಪಾಲಾಕ್ಷ ಗೌಡ ರಾವಿಹಾಳ್, ಹುಸೇನ್ ಪೀರ ಕೊತ್ತಲ, ಚಿಂತಾ ಕೃಷ್ಣಪ್ಪ ಚಳ್ಳೆ ಕೂಡ್ಲೂರು, ವಿರುಪಾಕ್ಷಯ್ಯ ಸ್ವಾಮಿ ಹಚ್ಚೋಳ್ಳಿ, ಗಂಗಾಧರ ಸ್ವಾಮಿ ವತ್ತು ಮುರುಣಿ ಭೀಮ ಲಿಂಗಪ್ಪ ಸಿರುಗುಪ್ಪ ನಗರಸಭಾ ಸದಸ್ಯ ಹೆಚ್ ಗಣೇಶ್ ಚಳ್ಳೆ ಕೂಡ್ಲೂರು ಗ್ರಾಮದ ಮುಖಂಡರು ಗ್ರಾಮ ಪಂಚಾಯತ್ ಸದಸ್ಯರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು ಮನೆ ಮನೆ ತೆರಳಿ ಮತಯಾಚಿಸಿದರು.
