WhatsApp Image 2024-05-26 at 3.45.08 PM

ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್  ಗೆಲ್ಲಿಸಿ : ಶಾಸಕ ಬಿ.ಎಂ.ನಾಗರಾಜ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 26- ಈಶಾನ್ಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಜೂನ್ 3ರ ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ ಚಂದ್ರಶೇಖರ ಬಿ ಪಾಟೀಲ್ ಅವರ ಪರವಾಗಿ ಶಾಸಕ ಬಿ ಎಂ ನಾಗರಾಜ ಅವರು ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಂಡ ಸಿರುಗುಪ್ಪ ತಾಲೂಕಿನಾದ್ಯಂತ ಭರ್ಜರಿ ಪ್ರಚಾರ ಕೈಗೊಂಡಿದೆ.

ತಾಲೂಕಿನ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಈಗಾಗಲೇ ಕಾಂಗ್ರೆಸ್ ಗೆ ಮತ ನೀಡುವಂತೆ ಮನವಿ ಮಾಡಲಾಗುತ್ತಿದೆ ವಿಧಾನ ಪರಿಷತ್ ಚುನಾವಣೆಯೆಂದರೆ ಇಲ್ಲಿಯವರೆಗೆ ಪದವೀಧರರು ನೇರವಾಗಿ ಮತದಾನ ಕೇಂದ್ರಕ್ಕೆ ಹೋಗಿ ಮತದಾನ ಮಾಡುತ್ತಿದ್ದರು ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಬೆಂಬಲಿಗರನ್ನು ಪ್ರತಿ ತಾಲೂಕಿನಲ್ಲಿ ಪ್ರಚಾರಕ್ಕಾಗಿ ನಿಯೋಜನೆ ಮಾಡಿದ್ದಾರೆ ಸ್ಥಳಿಯ ನಾಯಕರೊಂದಿಗೆ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ.

ಕಾಂಗ್ರೆಸ್ ಅಭ್ಯರ್ಥಿ ಡಾ ಚಂದ್ರಶೇಖರ ಬಿ ಪಾಟೀಲ್ ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ ಆದರೂ ಮತದಾರರನ್ನು ಸಂಪರ್ಕಿಸುವ ಮತ್ತು ಕಾಂಗ್ರೆಸ್ ಅಭ್ಯರ್ಥಿ ಡಾ ಚಂದ್ರಶೇಖರ ಪಾಟೀಲ್ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದೇವೆ ನಮ್ಮ ಕಾರ್ಯಕರ್ತರ ಶಕ್ತಿಯಿಂದ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲವು ಖಚಿತ ಎಂದು ಅವರು ನುಡಿದರು .

Leave a Reply

Your email address will not be published. Required fields are marked *

error: Content is protected !!