15 ವರ್ಷಗಳ ನಂತರ ಕಾಂಗ್ರೆಸ್ ತೆಕ್ಕೆಗೆ ಕೊಪ್ಪಳ ಲೋಕಸಭೆ
ಕಾಂಗ್ರೆಸ ಕಿನ್ನಳ ಮುಖಂಡ ಮನೋಹರರಾವ ದೇಸಾಯಿ ಹರ್ಷ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 06- ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕೊಪ್ಪಳದಲ್ಲಿ 15ವರ್ಷದ ನಂತರ ಗೆದ್ದು ಬಿಗಿದ್ದು ಕಾಂಗ್ರೆಸ್ ಅಭ್ಯರ್ಥಿ ಕೆ ರಾಜಶೇಖರ ಹಿಟ್ನಾಳ ಗೆಲವು ಸಾದಿಸಿದ್ದು ಕಾರ್ಯಕತ್ರರಿಗೆ ಸಂತಸ ಉಂಟು ಮಾಡಿದೆ ಎಂದು ಕಿನ್ನಾಳ ಗ್ರಾಮದ ಕಾಂಗ್ರಸ ಮುಖಂಡ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಮನೋಹರರಾವ ದೇಸಾಯಿ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ ಗೆಲವು ಸಾದಿಸಿದ್ದು ಕಾರ್ಯಕತ್ರರು ಹಾಗೂ ಮುಖಂಡರಿಗೆ ಆನೆ ಬಲ ಬಂದಿದ್ದು ಸಾಮಾಜಿಕ ನ್ಯಾಯಕ್ಕೆ ಬೆಲೆ ಸಿಕ್ಕಿದೆ ಎಂದಿದ್ದಾರೆ,
ಬರುವ ದಿನಗಳಲ್ಲಿ ಕಾಂಗ್ರೆಸ ಪಕ್ಷ ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಸಹ ಉತ್ತಮ ಸಂಘಟನೆ ಗೊಂಡು ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಮಾಜಿ ಸಂಸದ ಸಂಗಣ್ಣ ಕರಡಿ ಪಕ್ಷಕ್ಕೆ ಸೇಪ್ರಡೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಿದ್ದು ಜಿಲ್ಲೆ ಸೇರಿದಂತೆ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಸಹಕಾರಿಯಾಗಿದೆ ಎಂದಿದ್ದಾರೆ.
