ರಾಬಕೊವಿ ನಿರ್ದೇಶಕರ ಚುನಾವಣೆ
ಕಾಂಗ್ರೆಸ್ ಬೆಂಬಲಿತರಿಗೆ ಜಯ: ಬೆಂಬಲಿತರ ಗೆಲ್ಲಿಸಿ ಬಿಗಿದ ಬಸವರಾಜ ಹಿಟ್ನಾಳ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 11- ತೀವ್ರ ಕುತುಹಲ ಕೇರಳಿಸಿದ್ದ ಬಳ್ಳಾರಿ- ವಿಜಯನಗರ- ರಾಯಚೂರು- ಕೊಪ್ಪಳ ಹಾಲು ಒಕ್ಕೂಟದಿಂದ 12 ನಿರ್ದೇಶಕ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ನಾಲ್ಕು ನಿರ್ದೇಶಕ ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾದಿಸಿದ್ದು ವಿರೋದಿ ಬಣ ತೀವ್ರ ಮುಖಬಂಗ ಅನುಭವಿಸಿದೆ.
ಕೊಪ್ಪಳ ಜಿಲ್ಲೆಯ ನಾಲ್ಕು ನಿರ್ದೇಶಕ ಸ್ಥಾನಗಳಿಗೆ 8 ಜನರು ಅಖಾಡದಲ್ಲಿದ್ದರು. ಈ ಪೈಕಿ ಕೊಪ್ಪಳ ತಾಲೂಕಿನ ಕೃಷ್ಣಾರಡ್ಡಿ ಗಲಬಿ 106, ಯಲಬುರ್ಗಾದಲ್ಲಿ ಕಮಲವ್ವ 92, ಕುಷ್ಟಗಿಯ ಮಂಜುನಾಥ 94 ಹಾಗೂ ಗಂಗಾವತಿಯ ಎನ್. ಸತ್ಯನಾರಾಯಣ 93 ಮತಗಳನ್ನು ಪಡೆದು ಭರ್ಜರಿ ಗೆಲವು ಸಾದಿಸಿದ್ದಾರೆ.
ಹಿನ್ನಡೆ : ಪ್ರತಿಸ್ಪರ್ಧಿಗಳಾದ ಕೊಪ್ಪಳದ ವೆಂಕನಗೌಡ ಹಿರೇಗೌಡ್ರ, ಕುಷ್ಟಗಿಯ ಜಯತೀರ್ಥ ದೇಸಾಯಿ, ಶಿವಪ್ಪ ವಾದಿ ಹಾಗೂ ಕವಿತಾ ಗುಳಗಣ್ಣವರ ಪರಾಭವಗೊಂಡು ತೀವ್ರ ಮುಖಬಂಗ ಅನುಭವಿಸಿದ್ದಾರೆ.
ಹಿಟ್ನಾಳ ಕುಟುಂಬದ ಕೃಪೆ: ಕೊಪ್ಪಳ ತಾಲೂಕು ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಅಖಾಡಕ್ಕೆ ಕೃಷ್ಣಾರಡ್ಡಿ ಗಲಬಿ , ಯಲಬುರ್ಗಾದಲ್ಲಿ ಕಮಲವ್ವ , ಕುಷ್ಟಗಿಯ ಮಂಜುನಾಥ ಹಾಗೂ ಗಂಗಾವತಿಯ ಎನ್. ಸತ್ಯನಾರಾಯಣ ಅವರನ್ನು ಕಣಕ್ಕೆ ಇಳಿಸಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಹಿಟ್ನಾಳ ತಮ್ಮ ಮಾತಿಗೆ ಮನ್ನಣೆ ನೀಡದೇ ಸೆಡ್ಡು ಹೊಡೆದು ಸ್ಪರ್ಧೆ ಮಾಡಿದ್ದರಿಂದ ಹಿಟ್ನಾಳ ಕುಟುಂಬ ತಾವೇ ಅಖಾಡಕ್ಕೆ ಇಳಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ ಅವರ ಗೆಲುವಿಗಾಗಿ ಇನ್ನಿಲ್ಲದ ಪ್ರಯತ್ನ ಮಾಡಿ ಜಯದ ದಡ ಸೇರಿಸಿದೆ.
ಸಂದಾನ ವಿಫಲ : ಶಾಸಕ ಕೆ, ರಾಘವೇಂದ್ರ ಹಿಟ್ನಾಳ ಹಾಗೂ ಕಾಂಗ್ರೆಸ ಮುಖಂಡರ ಸಂದಾನ ಪ್ರಯತ್ನಕ್ಕೆ ಬೆಲೆಕೊಡದೆ ಮತ್ತೊಮ್ಮೆ ಸ್ಪರ್ಧೆ ಮಾಡುವೆ ಎಂದು ಹಠಕ್ಕೆ ಬಿದ್ದ ವೆಂಕನಗೌಡ ಹಿರೇಗೌಡ್ರ ಹಿಟ್ನಾಳ ಕುಟುಂಬದ ವಿರುದ್ಧ ಜಿದ್ದಿಗೆ ಬಿದ್ದು, ಬಂಡಾಯವೆಂದು ಸ್ಪರ್ಧಿಸಿ ಪರಾಭವ ಗೊಂಡಿದ್ದಾರೆ.
——————————————————————————————————————————————————————————————–
ಕಾರ್ಯಕರ್ತರ ಹಾಗೂ ಹಿಟ್ನಾಳ ಕುಟುಂಬದ ಬೆಂಬಲದಿಂದ ಗೆಲುವು ಸಾಧ್ಯವಾಗಿದೆ. ಹಿರೆಗೌಡ್ರು ಪಕ್ಷದ ನಾಯಕರ ಮಾತನ್ನು ಧಿಕ್ಕರಿಸಿ, ಚುನಾವಣೆಗೆ ನಿಂತಿದ್ದರು. ಹೀಗಾಗಿ ಅವರಿಗೆ ಮತದಾರ ತಕ್ಕ ಪಾಠ ಕಲಿಸಿದ್ದಾನೆ ,ರೈತರ ಸೇವೆ ನಮ್ಮ ಗುರಿ
- – ಕೃಷ್ಣಾರಡ್ಡಿ ಗಲಬಿ ನಿರ್ದೇಶಕರು,
ಬಳ್ಳಾರಿ ಹಾಲು ಒಕ್ಕೂಟ
