ಕೊಪ್ಪಳ ಜಿಲ್ಲಾ ದೇವಾಂಗ ಸಮಾಜದಿಂದ
ಜೂಲೈ 13 ರಂದು ದೋಟಿಹಾಳನಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,12- ದೇವಾಂಗ ಸಮಾಜದಿಂದ ಜಿಲ್ಲಾಮಟ್ಟದ ಪ್ರತಿಭಾಪುರಸ್ಕಾರ ಮತ್ತು ಸನ್ಮಾನ ಸಮಾರಂಭವ ಜೂಲೈ 13ರಂದು ಬೆಳಿಗ್ಗೆ 10-30ಕ್ಕೆ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ದೇವಲ ಮಹರ್ಷಿ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ದೇವಾಂಗ ಸಮಾಜದ ಅದ್ಯಕ್ಷ ಶಿವಶಂಕರಪ್ಪ ಚೆನ್ನಿ ಹೇಳಿದರು.
ಅವರು ಶನಿವಾರದಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಜಿಲ್ಲಾ ದೇವಾಂಗ ಸಂಘ ಕೊಪ್ಪಳ, ಕೊಪ್ಪಳ ಜಿಲ್ಲಾ ದೇವಾಂಗ ನೌಕರರ ಸಂಘ ಕೊಪ್ಪಳ, ತಾಲೂಕು ದೇವಾಂಗ ನೌಕರರ ಸಂಘ ಕೊಪ್ಪಳ ಹಾಗೂ ಭಾಗ್ಯನಗರ ಮತ್ತು ಕಿನ್ನಾಳ ದೇವಾಂಗ ಸಮಾಜ. ಸಹಯೋಗದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ದೇವಾಂಗ ಪೀಠಾಧ್ಯಕ್ಷರು ಹಾಗೂ ದೇವಾಂಗ ಜಗದ್ಗುರುಗಳಾದ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಪೂಜ್ಯ ಶ್ರೀ ಅಭಿನವ ಗವಿಸಿದ್ದೆಶ್ವರ ಮಹಾಸ್ವಾಮಿಗಳು ಗವಿಮಠ ಸಂಸ್ಥಾನ ಕೊಪ್ಪಳರವರು ಆಶೀರ್ವಚನ ನೀಡಲಿದ್ದಾರೆ. ಮಾನ್ಯ ಜಿಲ್ಲಾ ಉಸ್ತುವಾರಿಸಚಿವ ಶಿವರಾಜ ಎಸ್ ತಂಗಡಗಿರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು , ಕೊಪ್ಪಳ ಸಂಸದರಾದ ರಾಜಶೇಖರ , ಶಾಸಕ ರಾಘವೇಂದ್ರ ಹಿಟ್ನಾಳವರು ದೇವಲ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವರು, ಶಾಸಕ ದೋಡ್ಡನಗೌಡ ಪಾಟೀಲ್, ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ ಇತರ ಗಣ್ಯರು ಆಗಮಿಸಲಿದ್ದಾರೆ.
ವಿಶೇಷ ಆಹ್ವಾಣಿತರಾಗಿ ಮಾಜಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ನೇಕಾರ ಒಕ್ಕೂಟದ ಗೌರವ ಅಧ್ಯಕ್ಷಾದ ಎಂ.ಡಿ.ಲಕ್ಷ್ಮೀನಾರಾಯಣ (ಅಣ್ಣಯ್ಯ) ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರಾದ ರವೀಂದ್ರ ಕ ಕಲಬುರ್ಗಿ ರವರು ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷರಾದ ಶಿವಶಂಕರಪ್ಪ ಚೆನ್ನಯವರು ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯ 10 ವಿದ್ಯಾರ್ಥಿಗಳಿಗೆ, ಪಿಯಿಸಿಯ 15 ವಿದ್ಯಾರ್ಥಿಗಳಿಗೆ. ಪದವಿಯ 4 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಹಾಗೇ ಸರಕಾರಿ ಸೇವೆಯಿಂದ 5 ನೌಕರರನ್ನು ಸನ್ಮಾನಿಸಲಾಗುವುದು. ವಿಶೇಷ ಸೇವೆಯ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಿದ 10 ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ನಮ್ಮ ಸಮಾಜದ 600ಜನ ಸೇರುವ ನಿರಿಕ್ಷೆ ಇದ್ದು ಸಮಾಜದ ಸಂಘಟನೆ ಹಾಗೂ ಸಾದಕರಿಗೆ ಗೌರವ ಅರ್ಪಣೆ ನಮ್ಮ ಉದ್ದೇಶ ಎಂದರು. ಈ ಸಂದರ್ಭದಲ್ಲಿ ಸಮಾಜದ ಗೌರವ ಅದ್ಯಕ್ಷ ಪ್ರಲ್ಹಾದಗೌಡ ಮೇದ್ದಿಕೇರಿ, ಉಪಾದ್ಯಕ್ಷ ನಾರಾಯಣಪ್ಪ ಕೋಳ್ಳಿ, ಭಾಗ್ಯನಗರ ಅಧ್ಯಕ್ಷ ಚಂದ್ರಕಾಂತ ಬೇಟಗೇರಿ ಇದ್ದರು.
