ಕಿನ್ನಾಳ ಶ್ರೀ ಬನಶಂಕರಿ ದೇವಿ ಅಮ್ಮನವರ ಅದ್ದೂರಿ ರಥೋತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,25- ತಾಲೂಕಿನ ಕಿನ್ನಾಳ ಗ್ರಾಮದ ಆರಾಧ್ಯ ದೇವತೆ ಶ್ರೀ ಬನಶಂಕರಿ ದೇವಿ ಅಮ್ಮನವರ ಮಹಾರಥೋತ್ಸವವು ಭಾರತ್ ಹುಣ್ಣಿಮೆಯಂದು ಅದ್ದೂರಿಯಾಗಿ ನಡೆಯಿತು.
ಗ್ರಾಮದ ಎಲ್ಲಾ ಸಮಾಜದ ಬಂಧುಗಳೆಲ್ಲರೂ ಸೇರಿಕೊಂಡು ರಥೋತ್ಸವ ಅದ್ದೂರಿಯಾಗಿ ನೆರವೇರಿಸಿ ದೇವಿ ಕೃಪೆಗೆ ಪಾತ್ರರಾದರು.
ಬನಶಂಕರಿ ದೇವಿಯ ಮಹಾ ರಥೋತ್ಸವದ ಅಂಗವಾಗಿ ಹಮ್ಮಿಕೊಂಡಂತಹ ರಕ್ತದಾನ ಶಿಬಿರದಲ್ಲಿ ದೇವಾಂಗ ಸಮಾಜದ ಮತ್ತು ಸರ್ವ ಸಮುದಾಯ, ಜಿಲ್ಲಾ ದೇವಾಂಗ ಸಂಘ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು, ಗ್ರಾಮ ಪಂಚಾಯತಿ ಕಿನ್ನಾಳ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಆಡಳಿತ ಅಧಿಕಾರಿ ಗಳು ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಹಾಗೂ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದಂತಹ ರಕ್ತದಾನ ಶಿಬಿರದಲ್ಲಿ ಒಟ್ಟು 51 ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ ಜನರಿಗೆ ದೇವಾಂಗ ಸಮಾಜದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು ಸಮಾಜದ ವತಿಯಿಂದ ಅಭಿನಂದನೆಗಳನ್ನು ಈ ಮೂಲಕ ಸಲ್ಲಿಸಲಾಗಿದೆ. ಹಾಗೂ ಈ ಒಂದು ಶಿಬಿರದಲ್ಲಿ ಕಾರ್ಯನಿರ್ವಹಿಸಿದ ಕಾರ್ಯಕರ್ತರಿಗೂ ಕೂಡ ಅಭಿನಂದನೆಗಳು.

