WhatsApp Image 2024-02-29 at 7.00.39 PM

ಕುಕನೂರು ಪ.ಪಂ ಎಸ್‌ಡಿಎ ಸಿಬ್ಬಂದಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ

ಕರುನಾಡ ಬೆಳಗು ಸುದ್ದಿ

ಕುಕನೂರ,29-ಪಟ್ಟಣ ಪಂಚಾಯತಿ ಎಸ್‌ಡಿಎ ಸಿಬ್ಬಂದಿ ಜಗದೀಶ ಛಲವಾದಿ ಲಂಚಸ್ವೀಕರಿಸುತ್ತಿದ್ದಾಗ ಗುರುವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.

ಹಿನ್ನಲೆ : ಕುಕನೂರು ಪಟ್ಟಣದ 7ನೇ ವಾರ್ಡ್ನ ಕೊಳಿಪೇಟೆಯ ನಿವಾಸಿ ನಾಗರಾಜ ಕುಂಬಾರ ಎನ್ನುವರು ತಮ್ಮ ಕುಟುಂಬಸ್ಥರ ಆಸ್ತಿವಿಷಯಕ್ಕೆ ಪ.ಪಂಯ ಎಸ್‌ಡಿಎ ನೌಕರ ಜಗದೀಶ ಛಲವಾದಿ ಅವರಿಗೆ ವಿಭಾಗ ಮಾಡಿಕೊಡಲು ದಾಖಲಾತಿಗಳನ್ನು ಸಲ್ಲಿಸಿದ್ದರು, ಸರಕಾರದ ವಿಭಾಗದ ಫೀ ೩೦೦೦ ರೂ.ಹಣವನ್ನು ಪಾವತಿಸಲಾಗಿದೆ. ಕೆಸ್ ವರ್ಕರ್ ಜಗದೀಶನು ವಿಭಾಗ ಮಾಡಿಕೊಡಲು ಪ್ರತಿನಿತ್ಯ ಸತಾಯಿಸುತ್ತೀದ್ದನು.

ಖಾತಾ ಬದಲಾವಣೆ ಮಾಡಿಕೋಡಲು 2000ರೂ.ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಅರ್ಜಿ ಸಲ್ಲಿಸಿ 5 ತಿಂಗಳಾದರು ಕೆಲಸ ಮಾಡಿಕೊಡದಕ್ಕೆ ನೊಂದು. ನಾಗರಾಜ ಕುಂಬಾರ ಕೊಪ್ಪಳ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ದೂರಿನಾಧರಿಸಿ ಗುರುವಾರ ಮಧ್ಯಾನ್ಹ ೧.೩೦ರ ಗಂಟೆಯ ಸುಮಾರು ಕೊಪ್ಪಳ ಲೋಕಾಯುಕ್ತ ಪಿಎಸ್‌ಐ ರಾಜೇಶ ಬಟಗುರಕಿ ಮತ್ತು ಚಂದ್ರಪ್ಪ, ಗಿರೀಶ ರೊಡಕರ್ ನೇತೃತ್ವದಲ್ಲಿ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!