
ಕೆಂಪೇಗೌಡರು ಎಲ್ಲಾ ಜಾತಿ ಧರ್ಮದವರನ್ನು ಒಟ್ಟುಗೂಡಿಸಿದ್ದರು : ಬಿ.ರಾಜೇಶ್ವರಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 28- ಎಲ್ಲಾ ಜಾತಿ ಧರ್ಮದವರನ್ನು ಒಟ್ಟುಗೂಡಿಸಿ ಬೆಂಗಳೂರು ನಗರ ಕಟ್ಟಿದ ನಾಡಪ್ರಭು ಕೆಂಪೇಗೌಡರು ನಿಜವಾದ ಜಾತ್ಯತೀತರು ಅವರು ಬದುಕಿದಂತೆ ಸಮಾಜದ ಎಲ್ಲಾ ಜನರು ಬದುಕಿ ಅವರನ್ನು ಸ್ಮರಿಸಬೇಕು ಎಂದು ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ ರಾಜೇಶ್ವರಿ ಅವರು ಅಭಿಪ್ರಾಯಪಟ್ಟರು.
ಸಿರುಗುಪ್ಪ ನಗರದ ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ಸರ್ವರ ಸಹಯೋಗದಲ್ಲಿ ಆಯೋಜಿಸಿದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ದೀಪ ಬೆಳಗಿಸಿ ಹಾಗೂ ಕೆಂಪೇಗೌಡರ ಭಾವಚಿತ್ರಕ್ಕೆ ಹೂ ಮಾಲೆ ಪುಷ್ಪ ಅರ್ಪಿಸಿ ಗೌರವಿಸಿ ನಮನ ಸಲ್ಲಿಸಿ ಸ್ಮರಿಸಿ ಅವರು ಮಾತನಾಡುತ್ತಾ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅವರ ದೂರದೃಷ್ಟಿ ಅವಿಸ್ಮರಣೀಯ ಎಂದು ಹೇಳಿದರು.
ರಾಷ್ಟ್ರೀಯ ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ಮಾತನಾಡಿ ನಾಡ ದೊರೆ ಕೆಂಪೇಗೌಡರು ಆತ್ಮ ವಿಶ್ವಾಸದಿಂದ ನೂತನ ಬೆಂಗಳೂರು ಮಹಾನಗರವನ್ನು ಸೃಷ್ಟಿ ಮಾಡಿದ ಅವರು ಕೋಟೆ ಪೇಟೆ ಉದ್ಯಾನವನ ಕೆರೆಗಳು ವಿವಿಧ ಅಭಿವೃದ್ಧಿ ಯೋಜನೆಗಳನ್ನು ತಮ್ಮ ಅವಧಿಯಲ್ಲೇ ರೂಪಿಸಿ ಅವರ ಯೋಜನೆ ದೂರದೃಷ್ಟಿಗೆ ಸಾಕ್ಷ್ಯವಾಗಿದೆ ಕೆಂಪೇಗೌಡರ ಜಾತ್ಯತೀತತೆ ಜೀವನ ಮತ್ತು ಸಾಧನೆ ಎಲ್ಲರಿಗೂ ಮಾದರಿ ಯಾಗಿದೆ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿ ಪಾಲನೆ ಮಾಡಬೇಕು ಎಂದು ಅಬ್ದುಲ್ ನಬಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಕಚೇರಿಯ ಶಂಕರ ನಾಯಕ್ ಮತ್ತಿತರ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.