WhatsApp Image 2024-02-29 at 5.11.52 PM

ಕೇಂದ್ರ ಸರಕಾರದ ಉಜ್ವಲಾ ಯೋಜನೆಯ ಫಲಾನುಭವಿಗಳ ಸಂಪರ್ಕ ಅಭಿಯಾನ

ಕರುನಾಡ ಬೆಳಗು ಸುದ್ದಿ

ಗಂಗಾವತಿ,29- ಇಂದು ಫಲಾನುಭವಿಗಳ ಸಂಪರ್ಕ ಅಭಿಯಾನದ ಪ್ರಾರಂಭದ ಅಂಗವಾಗಿ ಪ್ರಯುಕ್ತ ನಗರದ ವಾರ್ಡ್ ನಂಬರ್ 2 ರಲ್ಲಿ ಕೇಂದ್ರ ಸರಕಾರದ ಉಜ್ವಲಾ ಯೋಜನೆಯ ಫಲಾನುಭವಿಗಳಾದ ಶ್ರೀಮತಿ ರತ್ನಮ್ಮ ಗಂಡ ಹನುಮಂತಪ್ಪ ಇವರ ಮನೆಗೆ ತೆರಳಿ ಅವರಿಗೆ ಯೋಜನೆಯಿಂದಾದ ಅನುಕೂಲದ ಬಗ್ಗೆ ವಿಚಾರಿಸಲಾಯಿತು.

ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿಯವರು ಮನೆಯವರು ನೀಡಿದ ಆತಿಥ್ಯ ಸ್ವೀಕರಿಸಿ ಇದೇ ರೀತಿ ಕೇಂದ್ರ ಸರಕಾರದ ಎಲ್ಲಾ ಯೋಜನೆಗಳ ಸದುಪಯೋಗ ಪಡೆದುಕೊಂಡು ಮುಂದಿನ ಚುನಾವಣೆಯಲ್ಲಿ ಸಹ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನ ಮಂತ್ರಿಯನ್ನಾಗಿ ಮಾಡಲು ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಬೇಕೆಂದು ವಿನಂತಿಸಿಕೊಂಡರು.

ಅಭಿಯಾನದ ಸಂಚಾಲಕರಾದ ಚಂದ್ರಶೇಖರ ಅಕ್ಕಿ, ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ ಚಿತ್ರಗಾರ, ಮುಖಂಡರಾದ ಮಲ್ಲೇಶಪ್ಪ ಹೋಸಮಲಿˌ ವೀರಭದ್ರಪ್ಪ ನಾಯಕˌ ಜೋಗದ ಹನುಮಂತಪ್ಪ ನಾಯಕˌ ಹನುಮಂತಪ್ಪ ಚೌಡ್ಕಿˌ ಶ್ರೀನಿವಾಸ ಧೂಳ, ಸಂಗಯ್ಯ ಸ್ವಾಮಿ ˌ ಕನಕಪ್ಪ ನಾಯಕˌ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!