IMG-20260904-WA0004

ದ್ವಿಚಕ್ರ ವಾಹನ, ಹಣ, ಮೊಬೈಲ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ರೂ. 12.91 ಲಕ್ಷ ಮೌಲ್ಯದ‌ ಸ್ವತ್ತು ವಶ, ಆರೋಪಿಗಳ ಬಂಧನ

​ಕೊಪ್ಪಳ, _04- ಜಿಲ್ಲೆಯ ಕೊಪ್ಪಳ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ದ್ವಿಚಕ್ರ ವಾಹನ, ಹಣ ಮತ್ತು ಮೊಬೈಲ್ ಕಳ್ಳತನ ಪ್ರಕರಣಗಳನ್ನು ಕೊಪ್ಪಳ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು,

ಈ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿ, ಅವರಿಂದ ಕಳವು ಮಾಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಾಹಿಲ್ ಬಾಗ್ಲಾ ಹೇಳಿದರು.
ಶುಕ್ರವಾರ (ಸೆ. 4) ತಮ್ಮ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ವಿವರಗಳನ್ನು ಹಂಚಿಕೊಂಡರು.
16 ದ್ವಿಚಕ್ರ ವಾಹನಗಳ ವಶ: ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣದ ದ್ವಿ-ಚಕ್ರ ವಾಹನದ ಪಾರ್ಕಿಂಗ್ ಸ್ಥಳದಲ್ಲಿ ದಿನಾಂಕ: 21.08.2026 ರಂದು ಬೆಳಗ್ಗೆ 9-15 ಗಂಟೆಯಿಂದ ಸಂಜೆ 5-00 ಗಂಟೆಯ ನಡುವಿನ ಅವಧಿಯಲ್ಲಿ ಫಿರ್ಯಾದಿದಾರರು ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಅಂ.ಕಿ. ರೂ 90,000 ಬೆಲೆಬಾಳವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಗವಿಸಿದ್ದಪ್ಪ ಕೇರಿ ಸಾ:ಹಿರೆಕಾಸಕಂಡಿ ರವರು ನೀಡಿದ ದೂರಿನ ಮೇಲಿಂದ ದಿನಾಂಕ-25.08.2026 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 113/2026 ಕಲಂ.303(2) ಭಾರತೀಯ ನ್ಯಾಯ ಸಂಹಿತೆ-2023 ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಪತ್ತೆ ಕುರಿತು ರಚಿಸಿದ ವಿಶೇಷ ತಂಡವು ತಕ್ಷಣ ಕಾರ್ಯ ಪ್ರವೃತ್ತರಾಗಿ ವಿವಿಧ ಆಯಾಮಗಳಿಂದ ಮಾಹಿತಿಯನ್ನು ಮತ್ತು ಸಾಕ್ಷಾಧಾರಗಳನ್ನು ಸಂಗ್ರಹಿಸಿ ಸಂಶಯಾಸ್ಪದ ವ್ಯಕ್ತಿ ಮೊಹಮ್ಮದ್ ಇರ್ಫಾನ್ ತಂದೆ ಖಾಜಾಹುಸೇನ್, ವಯ:20ವರ್ಷ, ಉ:ಬೈಕ್ ಮೆಕ್ಯಾನಿಕ್, ಸಾ:ಕೌಲ್ ಬಜಾರ್, ಬಳ್ಳಾರಿ ಹಾ:ವಾ: ಹೊಸಪೇಟೆ, ವಿಜಯನಗರ ಜಿಲ್ಲೆ. ಎಂಬುವವನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದು ಆಪಾದಿತ ವ್ಯಕ್ತಿಯನ್ನು ದಸ್ತಗಿರಿ ಮಾಡಿ ಸದರಿಯವನಿಂದ ಅಂದಾಜು ಕಿಮ್ಮತ್ತು 11,90,000-00 ರೂ ಬೆಲೆಬಾಳವು ವಿವಿಧ ಕಂಪನಿಯ 16 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ಕೊಪ್ಪಳ ಉಪ-ವಿಭಾಗ, ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯ ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಕೊಪ್ಪಳ ಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ದಿನಾಂಕ:14-07-2026 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 29-07-2026 ರಂದು ಬೆಳಗ್ಗೆ 10-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮಗಳ ಚಿಕಿತ್ಸೆಗೆಂದು ಬಂದಿದ್ದ ಫಿರ್ಯಾದಿದಾರರ ಮೊಬೈಲ್ ಕಳ್ಳತನ ಮಾಡಿ, ಆ ಮೊಬೈಲ್‌ನ ಬ್ಯಾಕ್ ಕವರ್‌ನಲ್ಲಿದ್ದ ಎ.ಟಿ.ಎಮ್ ಕಾರ್ಡ್‌ನಿಂದ ರೂ. 99,500/- ಗಳನ್ನು ಬಿಡಿಸಿಕೊಂಡ ಬಗ್ಗೆ ದಿನಾಂಕ: 09-08-2026 ರಂದು ಸೀಮಣ್ಣ ಗಲ್ಲೂರು ರವರು ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:105/2026 ಕಲಂ:303(2) ಬಿ.ಎನ್.ಎಸ್-2023 ರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಪತ್ತೆ ಕುರಿತು ರಚಿಸಿದ ವಿಶೇಷ ತಂಡವು ತಕ್ಷಣ ಕಾರ್ಯ ಪ್ರವೃತ್ತರಾಗಿ ವಿವಿಧ ಆಯಾಮಗಳಿಂದ ಮಾಹಿತಿಯನ್ನು ಮತ್ತು ಸಾಕ್ಷಾಧಾರಗಳನ್ನು ಸಂಗ್ರಹಿಸಿ ಸಂಶಯಾಸ್ಪದ ವ್ಯಕ್ತಿ ಮಂಜುನಾಥ ತಂದೆ ಚಿನ್ನಪ್ಪ ಚಕ್ರಸಾಲಿ ವಯ: 32ವರ್ಷ, ಉ: ಹೋಟೆಲ್ ಕೆಲಸ, ಸಾ: ಬೂದಗುಂಪಾ ಎಂಬುವವನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡಿಕೊಂಡಿರುವದಾಗಿ ಒಪ್ಪಿಕೊಂಡಿದ್ದು, ಆಪಾದಿತ ವ್ಯಕ್ತಿಯನ್ನು ದಸ್ತಗಿರಿ ಪತ್ತೆ ಮಾಡಿ, ಈ ಆರೋಪಿತನಿಂದ ರೂ. 99,500 ಮತ್ತು ಒಂದು ಓಷ್ಟೋ ಮೊಬೈಲ್ ಫೋನ್‌ನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಎಲ್ಲಾ ಪ್ರಕರಣಗಳ ಪತ್ತೆ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಎಸ್‌.ಪಿ ಮತ್ತು ಡಿ.ವೈಎಸ್.ಪಿ ಕೊಪ್ಪಳ ರವರ ಮಾರ್ಗದರ್ಶನದಲ್ಲಿ ಕೊಪ್ಪಳ ನಗರ ಠಾಣೆಯ ಪಿ.ಐ. ಮತ್ತು .ಎಸ್.ಐ (ಕಾಹಿಸು) ಹೀರಪ್ಪ ಪಿ., ಎ.ಎಸ್.ಐ ಶಂಕ್ರಯ್ಯ ಸಾರಂಗಮಠ, ಸಿಬ್ಬಂದಿಯವರಾದ ಹೆಚ್‌ಸಿ ಖಾಜಾಸಾಬ, ಗಂಗಾಧರ, ಗಣೇಶ ಮತ್ತು ಸಿಪಿಸಿ ರವರಾದ ಮಂಜುನಾಥ, ಮಂಗಳೇಶ, ಗೂಡಸಾಬ, ಮಲ್ಲಿಕಾರ್ಜುನ, ತನಿಖಾಸಹಾಯಕರಾದ ಕುಮಾರಸ್ವಾಮಿ, ಲಕ್ಷ್ಮಿದೇವಿ.ಕೆ ಮಪಿಸಿ, ಬಸಯ್ಯ, ಶಂಕ್ರಪ್ಪ ಎಪಿಸಿ ಮತ್ತು ಡಿಪಿಓ ತಾಂತ್ರಿಕ ವಿಭಾಗದ ಪ್ರಸಾದ್ ಎಪಿಸಿ, ಮಂಜುನಾಥ ಎಪಿಸಿ ಇವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು ಎಂದರು.
ಈ ಎರಡು ಸ್ವತ್ತಿನ ಪ್ರಕರಣದಲ್ಲಿ ಆಪಾದಿತರನ್ನು ಪತ್ತೆ ಮಾಡಿ, ರೂ. 11,90,000 ಮೌಲ್ಯದ 16 ಮೋಟಾರ್ ಸೈಕಲ್, ರೂ. 2000 ಮೌಲ್ಯದ ಮೊಬೈಲ್ ಮತ್ತು 99,500 ರೂ. ನಗದು ಹಣ ಒಟ್ಟು 12,91,500 ಮೌಲ್ಯದ ಕಳ್ಳತನವಾದ ಸ್ವತ್ತು ನಗದು ಹಣ ವಶಪಡಿಸಿಕೊಂಡು, ಪ್ರಕರಣವನ್ನು ಪತ್ತೆ ಮಾಡಿ ಉತ್ತಮ ಪತ್ತೆ ಕಾರ್ಯ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಾಹಿಲ್ ಬಾಗ್ಲಾ ಅವರು ಇದೇ ವೇಳೆ ಪ್ರಶಂಸೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತಕುಮಾರ, ಕೊಪ್ಪಳ ಡಿ.ವೈಎಸ್.ಪಿ ಮುತ್ತಣ್ಣ ಸರವಗೋಳ, ಕೊಪ್ಪಳ ನಗರ ಪೊಲೀಸ್ ಠಾಣೆಯ ಪಿ.ಐ ಸುರೇಶ ಡಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!