ಕೋಲಿ ಕಬ್ಬಲಿಗ ರಾಜ್ಯಮಟ್ಟದ ಬೃಹತ್ ಸಮಾವೇಶ
ಸಮಾಜದಿಂದ ಎಸ್ಟಿ ಮೀಸಲಾತಿಗಾಗಿ ಒತ್ತಾಯ
ಕರುನಾಡ ಬೆಳಗು ಸುದ್ದಿ
ಕುಕನೂರ,10- ಕೋಲಿ, ಕಬ್ಬಲಿಗ ಸಮಾಜದಿಂದ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ಸಮಾಜಕ್ಕೆ ಎಸ್ಟಿ ಮೀಸಲಾತಿಗಾಗಿ ಒತ್ತಾಯ ಮಾಡಲಾಗುವದು ಎಂದು ಮುಖಂಡರು ಹೇಳಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ನಮ್ಮ ಕೋಲಿ, ಕಬ್ಬಲಿಗ, ಅಂಬಿಗರ ಸಮಾಜವು ಜಲಬೇಟೆಗಾರಯನ್ನು ಆಡುತ್ತೀದ್ದರು. ಅದು ಎಸ್ಟಿ ಮೀಸಲಾತಿಗೆ ಒಳಪಡುತ್ತದೆ. ನಾವು ಕಳೇದ ೪೦ ವರ್ಷಗಳಿಂದ ಎಸ್ಟಿ ಮೀಸಲಾತಿಗಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದೇವೆ.
ನಮ್ಮ ಸಮಾಜದಲ್ಲಿರುವ ಬಾರಕೇರ್, ಬೆಸ್ತ್, ಕೋಲಿ, ಕಬ್ಬಲಿಗ ಮತ್ತು ಅಂಬಿಗ ಸೇರಿ ಒಂದು ಧರ್ಮದ ಹೆಸರನ್ನು ಇಟ್ಟುಕೊಂಡು ಗಂಗಾಮತ ಸಮಾಜ ಕರೆದುಕೊಂಡಿದ್ದೇವು ಅದೇ ಹೆಸರಿನಿಂದ ನಮಗೆ ಮೀಸಲಾತಿ ನೀಡುವದಕ್ಕೆ ಸಮಸ್ಯೆಯಾಯಿತು. ನಮ್ಮ ಹಾಗೂ ಇತರೆ ರಾಜ್ಯಗಳಲ್ಲಿ ನಮ್ಮ ಸಮಾಜವರಿಗೆ ಎಸ್ಟಿ ಮೀಸಲಾತಿ ಪ್ರಮಾಣಪತ್ರವನ್ನು ಕೇಲವರು ಪಡೆದುಕೊಂಡಿದ್ದಾರೆ.
ಇದೆ ತಿಂಗಳು ಕಲಬುರುಗಿಯಲ್ಲಿ ಫೆ,೨೫ ರಂದು ನಡೆಯುವ ಎಸ್ಟಿ ಸೇರ್ಪಡೆ ಹಾಗೂ ಜಾಗೃತಿ ಸಮಾವೇಶಕ್ಕೆ ಜಿಲ್ಲೆಯಿಂದ ನಮ್ಮ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಬೇಕಾಗಿದೆ. ನಮ್ಮ ಸಮಾಜದ ಶೈಕ್ಷಣಿಕ, ಆರ್ಥಿಕ ಹಾಗೂ ಸಮಾಜಿಕವಾಗಿ ಮುಂದೆ ಬರುವದಕ್ಕೆ ನಮಗೆ ಎಸ್ಟಿ ಮೀಸಲಾತಿ ಅವಶ್ಯವಿದೆ ಆದ್ದರಿಂದ ನಮಗೆ ಕೇಂದ್ರ ಸರಕಾರ ಎಸ್ಟಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶಿವಪುತ್ರಪ್ಪ ಮಡ್ಡಿ ತಾಲೂಕಾ ಖಜಾಂಚಿ, ಬಾಳಪ್ಪ ಬಾರಕೇರ್ ಪ್ರ,ಕಾರ್ಯದರ್ಶಿ, ರಾಮು ಕೌದಿ ರಾಜ್ಯ ಸಮಿತಿ ಸದಸ್ಯ, ಬುಡ್ಡಪ್ಪ ಬಾರಕೇರ್ ತಾಲೂಕಾಧ್ಯಕ್ಷರು. ಬಸವರಾಜ ಕೋನಾರಿ ಪತ್ರಕರ್ತರು, ಮಂಜುನಾಥ ಬಾರಕೇರ್ ಇದ್ದರು.
